ಗದಗ: ಬಿ.ಎಸ್.ಯಡಿಯೂರಪ್ಪ (BS Yediyurappa)ರಾಜೀನಾಮೆ ಮೊದಲೇ ಗೊತ್ತಿತ್ತು ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಅವರ ರಾಜೀನಾಮೆ ಕೊಟ್ಟು ಮತ್ತೊಬ್ಬರು ಸಿಎಂ ಆಗುವುದಾದರೆ ರಾಜ್ಯದ ಜನತೆಗೆ ಯಾವುದೇ ಒಳ್ಳೆಯದಾಗುವುದಿಲ್ಲ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇತ್ತು. ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಕಂಡ ಭ್ರಷ್ಟ ಸಿಎಂ ಆಗಿದ್ರು. ಈಗ ಇನ್ನೊಬ್ಬ ಭ್ರಷ್ಟ ಮುಖ್ಯಮಂತ್ರಿ ಬರುತ್ತಾನೆ. ಬಿಜೆಪಿಯೇ ಭ್ರಷ್ಟ ಪಕ್ಷವಾಗಿದೆ. ಬಿಜೆಪಿ ತೊಲಗದಿದ್ದರೆ ಈ ರಾಜ್ಯಕ್ಕೆ ಮುಕ್ತಿ ಸಿಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವುದು ಕಾಂಗ್ರೆಸ್ ಕೆಲಸ. ಸರ್ಕಾರದ ನಿಷ್ಕ್ರಿಯತೆ ಬಯಲು ಮಾಡುವುದೇ ನಮ್ಮ ಕೆಲಸ ಎಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಪಕ್ಷ ಬಿಟ್ಟು ಹೋದ ಶಾಸಕರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಬಿಎಸ್ವೈ ನಾಲ್ಕು ಸಲ ಸಿಎಂ ಆದ್ರೂ ಅವಧಿ ಪೂರೈಸಿಲ್ಲ. ನನ್ನ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದಿದ್ದರು.ಆದ್ರೆ ಬಿಎಸ್ವೈ ಸರ್ಕಾರ 30 ಪರ್ಸೆಂಟ್ ಸರ್ಕಾರವಾಗಿತ್ತು. ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆಯಾಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ. ಬಿಜೆಪಿಯೇ ಭ್ರಷ್ಟ ಪಕ್ಷವೆಂದು ಟಿವಿ9 ಸಿದ್ದರಾಮಯ್ಯ ಹೇಳಿಕೆ ನೀಡಿದರು.
ರಾಜ್ಯ 10 ವರ್ಷ ಆರ್ಥಿಕವಾಗಿ ಹಿಂದಕ್ಕೆ ಹೋಗಿದೆ. ಸರ್ಕಾರ ರಚಿಸಲು ಬಿಎಸ್ವೈ ಹಣ ಖರ್ಚು ಮಾಡಿದ್ದರು. ಹೀಗಾಗಿ ಬಿಎಸ್ವೈರನ್ನು ಹೈಕಮಾಂಡ್ ಸಿಎಂ ಆಗಿ ಮಾಡಿದ್ದರು. 6 ತಿಂಗಳ ಹಿಂದೆಯೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿಯಿತ್ತು. ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆಂದು ನನಗೆ ಗೊತ್ತಿಲ್ಲ. ನರೇಂದ್ರ ಮೋದಿ, ಅಮಿತ್ ಶಾಗೆ ಮಾತ್ರ ಗೊತ್ತು. ರಾಜ್ಯದ ಬಿಜೆಪಿ ನಾಯಕರಿಗೂ ಈ ಬಗ್ಗೆ ಗೊತ್ತಿಲ್ಲ. ಯಾರು ಬಂದರೂ ಭ್ರಷ್ಟರೇ ಎಂದು ಸಿದ್ದರಾಮಯ್ಯ ಹೇಳಿದರು.
17 ಶಾಸಕರು ಹೋಗಿದ್ದಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಯವರು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಸ್ವತಂತ್ರ ಭಾರತದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಇದು. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಇವರ ಭ್ರಷ್ಟಾಚಾರವನ್ನು ರಾಜ್ಯದ ಜನರ ಮುಂದಿಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ
(Siddaramaiah said that yediyurappa was a corrupt chief minister of Karnataka)