ಕೋರ್ಟ್ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ; ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ

ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲಾ ಎಂದು ಆರೋಪ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಿವಾನಂದ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಕೋರ್ಟ್ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ; ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ
ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ
Updated By: preethi shettigar

Updated on: Mar 16, 2022 | 3:23 PM

ಗದಗ: ಶಾಲಾ- ಕಾಲೇಜಿಗಳಲ್ಲಿ ಹಿಜಾಬ್(Hijab)​ ಧರಿಸುವಂತಿಲ್ಲ ಎಂಬ ಕೋರ್ಟ್ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ಘಟನೆ ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ನಡೆದಿದೆ. ಕಾಲೇಜು(College) ಕೊಠಡಿ, ಲ್ಯಾಬ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ನಿನ್ನೆ ಹೈಕೋರ್ಟ್​(High court) ಮಹತ್ವದ ತೀರ್ಪಿನ ನಂತರವು ಇಂದು ಹಿಜಾಬ್, ಬುರ್ಕಾ ಧರಿಸಿ ಕಾಲೇಜಿಗೆ ಹಲವರು ಬಂದಿದ್ದರು. ಹೀಗಾಗಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲಾ ಎಂದು ಆರೋಪ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಿವಾನಂದ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಉಡುಪಿ: ಹೈಕೋರ್ಟ್​ ಆದೇಶದ ನಂತರವೂ ಹಿಜಾಬ್​ಗಾಗಿ ಬೇಡಿಕೆ

ಹೈಕೋರ್ಟ್ ಆದೇಶದ ಬಳಿಕವೂ ಹಿಜಾಬ್​ಗಾಗಿ ಬೇಡಿಕೆ ಮುಂದುವರಿದಿದೆ. ಉಡುಪಿ ಜಿಲ್ಲೆಯ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 11 ಮಂದಿ ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಿದ್ದಾರೆ.  ಈ ವೇಳೆ ತರಗತಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ. ಆದರೆ ಇನ್ನೂಳಿದ ಒಂಬತ್ತು ಮಂದಿ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆಗಿದ್ದಾರೆ.

ಹಿಜಬ್ ನಮ್ಮ ಜೀವನದ ಅವಿಭಾಜ್ಯ ಅಂಗ. ಪರೀಕ್ಷೆಯು ಬೇಕು. ಹಿಜಾಬ್ ಕೂಡ ಬೇಕು. ಈ ಹಿಂದೆ ಇಲ್ಲದ ಸಮಸ್ಯೆ ಈಗ ತಲೆದೋರಿದೆ. ಇದರಿಂದ ನಮಗೆ ಬೇಸರವಾಗಿದೆ. ಪ್ರಾಂಶುಪಾಲರು ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಆದರೆ ಅದು ಆಗಲಿಲ್ಲ ಹೀಗಾಗಿ ತರಗತಿ ಬಹಿಷ್ಕರಿಸಿದ್ದೇವೆ ಎಂದು ಹಿಜಾಬ್​ ಧರಿಸಲು ಅವಕಾಶಕೋರಿದ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
Karnataka Bandh: ಹಿಜಾಬ್‌ ಧರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ನಾಳೆ ಕರ್ನಾಟಕ ಬಂದ್‌

ಶಾಲೆ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶವಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ: ಹೈಕೋರ್ಟ್​

Published On - 3:13 pm, Wed, 16 March 22