Gadag: ಏಕಾಏಕಿ ಕುಸಿದ ಭೂಮಿ, ಅಲ್ಲಿಂದಲೇ ಉಕ್ಕುತ್ತಿದೆ ನೀರು, ನೋಡಲು ಬಿಗಿಬಿದ್ದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2022 | 11:03 PM

ಮಳೆ ನಿಂತರು ಮಳೆ ರಗಳೆ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಒಂದಿಲ್ಲೊಂದು ಅವಾಂತರ ಉಂಟಾಗಿ ಜನರ ಜೀವ ಹಿಂಡುತ್ತಿದೆ. ಅತಿಯಾದ ಅಂತರ್ಜಲ ಹಿನ್ನಲೆಯಲ್ಲಿ ಹಾತಲಗೇರಿ ಗ್ರಾಮದಲ್ಲಿ ಸುಮಾರು 8 ಅಡಿಯಷ್ಟು ಆಳ ಭೂಕುಸಿತವಾಗಿದೆ.

Gadag: ಏಕಾಏಕಿ ಕುಸಿದ ಭೂಮಿ, ಅಲ್ಲಿಂದಲೇ ಉಕ್ಕುತ್ತಿದೆ ನೀರು, ನೋಡಲು ಬಿಗಿಬಿದ್ದ ಜನರು
ಉಕ್ಕುತ್ತಿರುವ ನೀರು
Follow us on

ಗದಗ: ಮಳೆ ನಿಂತರು ಮಳೆ ರಗಳೆ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ನಿರಂತರ ಸುರಿದ ಭಾರಿ ಮಳೆಗೆ ಅಂತರ್ಜಲ ಹೆಚ್ಚಾಗಿದ್ದು, ಇದರಿಂದ ಭೂಮಿ ಕುಸಿಯುತ್ತಿದೆ. ಜೊತೆಗೆ ಜನರ ನೆಮ್ಮದಿ ಕಸಿಯುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಈ ಬಡ ಕುಟುಂಬ ಭೂಕುಸಿತದಿಂದ ಕಂಗಾಲಾಗಿದೆ. ಮನೆಯಲ್ಲಿ ಏಕಾಏಕಿ ಭೂಕುಸಿತದಿಂದ ಪಕ್ಕದಲ್ಲೇ ಮಲಗಿದ್ದ ತಂದೆ, ಮಗು ಬಚಾವ್ ಆಗಿದ್ದಾರೆ. ಈ ಸುದ್ದಿ ಕೇಳಿ ನೋಡಲು ಜನರು ಜಮಾಯಿಸಿದ್ದರು. ಈ ಘಟನೆ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಳ್ಳಂಬೆಳಗ್ಗೆ ಇಡೀ ಕುಟುಂಬ ಹೌಹಾರಿತ್ತು. ಮಲಗಿದ ಮನೆಯಲ್ಲೇ ಭಾರಿ ಸದ್ದು ಕೇಳಿ ಬಂದಿತ್ತು. ನೋಡು ನೋಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಅಷ್ಟೇ ಅಲ್ಲ ಭೂಕುಸಿತದ ಪಕ್ಕದಲ್ಲೇ ಮಲಗಿದ ತಂದೆ, ಪುಟ್ಟ ಮಗು ಅದೃಷ್ಠವಶಾತ್ ಬಚಾವ್ ಆಗಿದ್ದರು. ಈ ಭೂಕುಸಿತ ಘಟನೆ ನಡೆದಿದ್ದು, ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ.

ಮಳೆ ನಿಂತರು ಮಳೆ ರಗಳೆ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಒಂದಿಲ್ಲೊಂದು ಅವಾಂತರ ಉಂಟಾಗಿ ಜನರ ಜೀವ ಹಿಂಡುತ್ತಿದೆ. ಅತಿಯಾದ ಅಂತರ್ಜಲ ಹಿನ್ನಲೆಯಲ್ಲಿ ಹಾತಲಗೇರಿ ಗ್ರಾಮದಲ್ಲಿ ಸುಮಾರು 8 ಅಡಿಯಷ್ಟು ಆಳ ಭೂಕುಸಿತವಾಗಿದೆ. ಕುಸಿದ ಭೂಮಿಯಲ್ಲಿ ನೀರು ಉಕ್ಕುತ್ತಿದೆ. ದೀಪಾವಳಿ ಹಬ್ಬದ ತಯಾರಿಯಲ್ಲಿದ್ದ ಕುಟುಂಬ ಭೂಕುಸಿತದಿಂದ ಕಂಗಲಾಗಿದೆ. ಅಂದ್ಹಾಗೆ ಹಾತಲಗೇರಿ ಗ್ರಾಮದ ಚಂದಪ್ಪ ಕನ್ನೇರಿ ಎಂಬ ವ್ಯಕ್ತಿಯ ಮನೆಯಲ್ಲಿ ಈ ಭೂಮಿ ಕುಸಿದಿದೆ. ಏಕಾಏಕಿ ಭೂಕುಸಿತದಿಂದ ಎಲ್ಲವೂ ಕುಸಿದ ಆಳದಲ್ಲಿ ಸಿಲುಕಿಕೊಂಡಿವೆ. ಅಷ್ಟಲ್ಲೇ ಬೆಳಗ್ಗೆ ಬ್ಯಾರಲ್​ನಲ್ಲಿನ ನೀರು ತೆಗೆಯುವಾಗ ಪರಸಪ್ಪನ ಒಂದು ಕಾಲು ಭೂಕುಸಿತದಲ್ಲಿ ಸಿಲುಕಿಕೊಂಡಿತ್ತು. ಮನೆಯಲ್ಲಿದ್ದ ಅಣ್ಣ ಚಂದ್ರಪ್ಪ ತಮ್ಮನನ್ನು ಬಚಾವ್ ಮಾಡಿದ್ದಾನೆ. ಮನೆ ತುಂಬ ಮಕ್ಕಳು ಅಬ್ಬಾ ಬದುಕಿದವು ಬಡ ಜೀವ ಅಂತ ಎಲ್ಲರೂ ಓಡೋಡಿ ಹೊರಗಡೆ ಬಂದಿದ್ದಾರೆ. ಮನೆ ಎದುರಿಗೆ ಮಕ್ಕಳೊಂದಿಗೆ ಸದ್ಯಕ್ಕೆ ಆಸರೆ ಪಡೆದಿದ್ದಾರೆ. ಬದುಕಿ ಬಾಳಿದ ಮನೆಯಲ್ಲಿ ಹೋಗೊಕೆ ಭಯ ಆಗುತ್ತಿದೆ ಅಂತ ಕುಟುಂಬ ಆಂತಕ ವ್ಯಕ್ತಪಡಿಸಿದ್ದಾರೆ.

ಹಾತಲಗೇರಿ ಗ್ರಾಮದ ಸುತ್ತಮುತ್ತ ಕಳೆದ ಒಂದು ತಿಂಗಳಿಂದ ನಿರತಂರ ಮಳೆಯಾಗುತ್ತಿದೆ. ಹೀಗಾಗಿ ಅಂತರ್ಜಲ ಹೆಚ್ಚಾಗಿದ್ದೇ ಭೂಕುಸಿತಕ್ಕೆ ಕಾರಣ ಎನ್ನಲಾಗಿದೆ. ಭೂಕುಸಿತದಲ್ಲಿ ಹಂಡೆ, ಬ್ಯಾರಲ್ ಬಟ್ಟೆಗಳು ಮುಳುಗಿ ಹಾಳಾಗಿ ಹೋಗಿವೆ. ದೀಪಾವಳಿ ಸ್ವಚ್ಛತೆಗಾಗಿ ಹೊಡಬಟ್ಟೆಗಳೆಲ್ಲವೂ ಕಟ್ಟಿ ಬ್ಯಾರಲ್ ಮೇಲೆ ಇಟ್ಟಿದ್ದೇವು. ಆದರೆ ಎಲ್ಲವೂ ಭೂಕುಸಿತದಲ್ಲಿ ಹಾಳಾಗಿವೆ ಅಂತ ಮಹಿಳೆಯರು ಗೋಳಾಡುತ್ತಿದ್ದಾರೆ. ಇನ್ನೆನ್ನೂ ಹಬ್ಬದ ಸಂಭ್ರಮ. ನಾವೇ ಬದುಕಿದ್ದೇ ಪವಾಡ ಅಂತ ಕುಟುಂಬ ಕಂಗಾಲಾಗಿದೆ. ಇನ್ನೂ ಭೂಕುಸಿತ ಜಾಗದಲ್ಲಿ ನೀರು ಉಕ್ಕುತ್ತಿದೆ. ಭೂಕುಸಿತ ಜಾಗದಲ್ಲಿ ಮಣ್ಣು ಹಾಕಿ ಮುಚ್ಚುತ್ತಿದ್ದಾರೆ. ಆದರು ಮತ್ತೆಲ್ಲಿ ಭೂಕುಸಿತ ಆಗುತ್ತೋ ಅಂತ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕುಸಿತ ಸುದ್ದಿ ಇಡೀ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನರು ಭೂಕುಸಿತ ನೋಡಲು ದೌಡಾಯಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿ ಮಾಡಿದೆ. 2019ರಲ್ಲಿ ಇದೇ ರೀತಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ 20ಕ್ಕೂ ಹೆಚ್ಚು ಕಡೆ ಭೂಕುಸಿತವಾಗಿತ್ತು. ಈ ಮತ್ತೆ ಗದಗ ಜಿಲ್ಲೆಯಲ್ಲಿ ಭೂಕುಸಿತ ಆಗಿದ್ದು, ಆತಂಕ ಹೆಚ್ಚಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 11:01 pm, Sat, 22 October 22