ಗದಗ: ನಗರದಲ್ಲಿ ಕಾನೂನು ವ್ಯವಸ್ಥೆ ಅತ್ಯಂತ ಸುವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಥರ್ಡ ಐ ಎಂಬ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ್ (HK Patil) ಹೇಳಿದ್ದಾರೆ. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸೆಗ್‌ವೇ ಇಲೆಕ್ಟ್ರಿಕ್ ಬೈಕ್‌ಗಳ ಪ್ರಾಯೋಗಿಕ ಚಾಲನೆ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್ ಥರ್ಡ ಐ ಯೋಜನೆಯಲ್ಲಿ ಸೆಗ್ ವೇ ಎಲೆಕ್ಟ್ರಿಕ್ ಬೈಕ್‌ಗಳು ಸಹ ಪೊಲೀಸ ಇಲಾಖೆಗೆ ಸಹಕಾರಿಯಾಗಿವೆ. ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆಗೆ ಹೆಸರುವಾಸಿಯಾದ ನಗರ ಗದಗ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ನೆಲ. ಈ ಸ್ಥಳದಲ್ಲಿ ಕಾನೂನುವ್ಯವಸ್ಥೆ ಉನ್ನತಮಟ್ಟದಲ್ಲಿ ಇರಬೇಕೆಂಬ ಸದುದ್ದೇಶದಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲ ಹಾಗೂ ಸಂರಕ್ಷಣೆಗಾಗಿ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಥರ್ಡ ಐ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಡಾ ಪಂಡಿತ ಪುಟ್ಟರಾಜ ಗವಾಯಿ ಸ್ಮಾರಕ ಭವನ 6-9 ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ಬದ್ಧ: ಸಚಿವ ಎಚ್ಕೆ ಪಾಟೀಲ್
ಶಾಂತಿಯುತ, ಸುರಕ್ಷಿತ ಗದಗಗಾಗಿ ಥರ್ಡ ಐ ಸ್ಮಾರ್ಟ ಪೊಲೀಸ್ ಫಾರ್ ಸೇಫ್ ಗದಗ ಬೆಟಗೇರಿ ಯೋಜನೆಯ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ಹಂತ ಹಂತವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಮಾಂಡ್ ಸೆಂಟರ್, ಟ್ರಾಫಿಕ್ ಮ್ಯಾನ್ಭೆಜ್‌ಮೆಂಟ್, ಕ್ರೈಂ ಮುಂಜಾಗ್ರತೆ ಕ್ರಮವಹಿಸಿದೆ.
ಗದಗ ಬೆಟಗೇರಿ ನಗರದ ಪ್ರಮುಖ 44 ಸ್ಥಳಗಳಲ್ಲಿ ಬುಲೆಟ್ ಕ್ಯಾಮರಾ ಅಳವಡಿಸಲಾಗಿದೆ. 40 ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸಿದ್ದು, 15 ಎಎಂಪಿಆರ್ ಸಿಸಿ ಟಿವಿ ಜೋಡಿಸಲಾಗಿದೆ. ಇದರಿಂದ ಒಟ್ಟಾರೆ 45 ಸ್ಥಳಗಳನ್ನು ಕುಳಿತಲ್ಲಿಯೇ ನಿಗಾವಹಿಸಲಾಗುತ್ತಿದೆ. ಗದಗ ಬೆಟಗೇರಿ ನಗರಕ್ಕೆ ಬರುವ ಪ್ರತಿ ವಾಹನದ ಚಲನವಲನಗಳನ್ನು, ಮಾರ್ಗಗಳನ್ನು ವೀಕ್ಷಣೆ ಮಾಡಲು ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು ಇವುಗಳು 360 ಡಿಗ್ರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ಗದಗ: ವಿಷಕಾರಿ ಹಾವು ಕಚ್ಚಿ ಆಸ್ಪತ್ರೆಯಲ್ಲಿ ಹೋರಾಟ; ಸಾವನ್ನಪ್ಪಿದ ಎನ್ನುವಾಗಲೇ ಬದುಕಿಸಿದ ಗರುಡರೇಖೆ!
ನಗರೋತ್ತಾನ, ಶಾಸಕರ ಅನುದಾನ, ಪ್ರವಾಸೋದ್ಯಮ ಇಲಾಖೆ, ನಗರಸಭೆಯಿಂದ ಅಗತ್ಯದ ಹಣಕಾಸು ಒದಗಿಸಲಾಗುವುದು. ಈಗಾಗಲೇ ಈ ಯೋಜನೆಗೆ 1.50 ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ 1.50 ಕೋಟಿ ರೂ. ಅನುದಾನವನ್ನು ಶೀಘ್ರವೇ ನೀಡಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು. ಇದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಥರ್ಡ ಐ ಯೋಜನೆಯನ್ನು ಬೆಂಗಳೂರು ಹೊರತುಪಡಿಸಿದರೆ ಗದಗನಲ್ಲಿಯೇ ಆರಂಭಿಸುತ್ತಿರುವುದು ವಿಶೇಷ. ಈ ಯೋಜನೆಯ ಅನುಷ್ಟಾನಗೊಳಿಸುವಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅವರ ಶ್ರಮ ಹಾಗೂ ಸಹಕಾರ ನಿರಂತರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.