ಗದಗ, ಫೆ.19: ಗದಗ ಜಿಲ್ಲೆಯ ಎರಡು ಪ್ರಮುಖ ಮಠಗಳ ನಡುವೆ ಸಂಘರ್ಷ ಉಂಟಾಗಿದೆ. ಗದಗ ತೋಂಟದಾರ್ಯ ಮಠ (Tontadarya Matha) ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakkireshwar Mutt) ನಡುವೆ ಸಂಘರ್ಷ ಉಂಟಾಗಿದ್ದು ಒಂದು ಮಠದ ಆಚರಣೆ ವಿರುದ್ಧ ಮತ್ತೊಂದು ಮಠ ವಿರೋಧ ವ್ಯಕ್ತಪಡಿಸಿದೆ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಶುರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಭಾವೈಕ್ಯತಾ ದಿನ, ಭಾವೈಕ್ಯತಾ ಯಾತ್ರೆ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 21ನೇ ತಾರೀಖು ಸಿದ್ದಲಿಂಗ ಸ್ವಾಮೀಜಿ 75ನೇ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಣೆ ಮಾಡಲು ತಯಾರಿ ನಡೆದಿದ್ದು ಭಾವೈಕ್ಯತಾ ದಿನ ಆಚರಿಸಿದರೆ ಶಿರಹಟ್ಟಿ ಮಠದ ಭಕ್ತರು ಕರಾಳ ದಿನ ಆಚರಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾದಂಬರಿಕಾರ, ಭಾಷಾತಜ್ಞ, ಸಾಹಿತಿ ಕೆಟಿ ಗಟ್ಟಿ ನಿಧನ
ಫೆ.21ರಂದು ನಮ್ಮ ಮಠಕ್ಕೆ, ಭಕ್ತರ ಪಾಲಿಗೆ ಕರಾಳ ದಿನ ಎಂದು ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಫಕೀರ ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ. ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿಯವರಿಗೆ ಭಾವೈಕ್ಯತೆಯ ಹರಿಕಾರ ಅನ್ವಯ ಆಗೋದಿಲ್ಲ. ಹೀಗಾಗಿ ಭಾವೈಕ್ಯತಾ ಹರಿಕಾರ ಎನ್ನುವ ಪದವನ್ನು ಬಳಕೆ ಮಾಡಬಾರದು. ಈಗೀನ ತೋಂಟದಾರ್ಯ ಮಠದ ಶ್ರೀಗಳಾದ ಸಿದ್ದರಾಮ ಸ್ವಾಮೀಜಿ ಮನವಿ ಮಾಡಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠ ಹಿಂದೂ- ಮುಸ್ಲಿಂ ಭಾವ್ಯಕ್ಯತೆ ಮಠ. ತೋಂಟದಾರ್ಯ ಮಠ ವಿರಕ್ತಮಠ, ಮಠದ ಸಂಪ್ರದಾಯ ಹೊಂದಿದೆ. ಫಕೀರೇಶ್ವರ ಮಠದ ಭಾವೈಕ್ಯತೆಯ ಸಂಪ್ರದಾಯ. ಫಕೀರೇಶ್ವರ ಮಠ ಹಿಂದೂ ಮುಸ್ಲಿಂ ಎರಡೂ ಸಂಪ್ರದಾಯ ಹೊಂದಿರೋ ಮಠ. ಹೀಗಾಗಿ ಭಾವೈಕ್ಯತಾ ದಿನ ಆಚರಣೆ ನಮ್ಮ ವಿರೋಧ ಇದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ಮಾಡುತ್ತೇವೆ.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿಯಿಂದ ಭಾವೈಕ್ಯತಾ ದಿನ ಘೋಷಣೆಯಾಗಿತ್ತು. ಆಗ ಹೋರಾಟದ ಫಲವಾಗಿ ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸುಮ್ಮನಾಗಿದ್ದರು. ಆದರೆ ಈಗ ಶ್ರೀಮಠದ ಆಮಂತ್ರಣ ಪತ್ರಿಕೆಯಲ್ಲಿ ಭಾವೈಕ್ಯತಾ ದಿನ ಪ್ರಸ್ತಾಪವಾಗಿದೆ ಎಂದು ಆಮಂತ್ರಣ ಪತ್ರಿಕೆ ಹಿಡಿದು ಮಾಧ್ಯಮಗೋಷ್ಠಿ ನಡೆಸಿದ ಫಕೀರ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:19 pm, Mon, 19 February 24