ಗದಗ: ಅದು ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ಜಿಲ್ಲೆ. ಆದರೆ ಆ ಜಿಲ್ಲೆಯಲ್ಲಿ ಈಗ ಕೊಲೆ (murder) ಗಳ ಸರಣಿ ನಡೆಯುತ್ತಿದೆ. ಇಂದು ಹಾಡು ಹಗಲಲ್ಲೇ ಜನ ನಿಬಿಡ ಪ್ರದೇಶದಲ್ಲಿ ಮಹಿಳೆ (Woman) ಯನ್ನು ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಪದೇ ಪದೇ ಚಾಕೂ ಇರಿತಕ್ಕೆ ಇಡೀ ಜಿಲ್ಲೆ ಜನರು ಬೆಚ್ಚಿ ಬಿದ್ದಿದ್ದಾರೆ. ಬೇಕರಿ ತಿನ್ನಿಸು ಖರೀದಿ ಮಾಡಲು ಹೋದಾಗ ಪುಟ್ಟ ಮಗಳ ಎದುರಲ್ಲೇ ಹಂತಕರು ಮಹಿಳೆಯನ್ನು ಭೀಕರ ಹತ್ಯೆ ಮಾಡಿದ್ದಾರೆ. ಇದರಿಂದ ಅವಳಿ ನಗರದ ಜನರು ತಲ್ಲಣಗೊಂಡಿದ್ದಾರೆ. ಭಯ, ಆತಂಕದಲ್ಲೇ ಜಮಾಯಿಸಿದ ನೂರಾರು ಜನರು. ರಕ್ತದ ಮಡುವಿನಲ್ಲಿ ಮಹಿಳೆ ಹೆಣ ಬಿದಿದ್ದೆ. ಜನದಟ್ಟಣೆ ಪ್ರದೇಶದಲ್ಲಿ ಮಹಿಳೆಯನ್ನು ಅಟ್ಯಾಕ್ ಮಾಡಿ ಕಿರಾತಕರು ಕೊಂದು ಹಾಕಿದ್ದಾರೆ. ಈ ಭೀಕರ, ಭಯಾನಕ ಕೊಲೆಯಾಗಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿ. ಅವಳಿ ನಗರದ ಜನರು ದಸರಾ ಹಬ್ಬದ ಖರೀದಿಯಲ್ಲಿ ಬಿಜಿಯಾಗಿದ್ದರು. ಆದರೆ ಇತ್ತ ಮಟಮಟ ಮಧ್ಯಾಹ್ನವೇ ಮಹಿಳೆಯ ಭೀಕರವಾಗಿ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅದು ನೂರಾರು ಜನರು ಓಡಾಡುವ ಪ್ರದೇಶದಲ್ಲಿ ಕೊಲೆಯಾಗಿದ್ದು ಅವಳಿ ನಗರದ ಜನರ ನಿದ್ದೆಗೆಡೆಸಿದೆ.
ಗದಗ ನಗರದ ಮುಳಗುಂದ ನಾಕಾ ಬಳಿ ಬೇಕರಿ ಮುಂದೆ ಈ ಕೊಲೆ ನಡೆದಿದೆ. ಅಂದ ಹಾಗೇ ಕೋರ್ಟ್ ಕೇಸ್ ಮುಗಿಸಿಕೊಂಡು, ಕೋರ್ಟ್ ಆವರಣದ ಮುಂದಿನಿಂದ ಮಹಿಳೆ ಆಟೋವನ್ನ ಏರಿಕೊಂಡು ಬೇಕರಿಗೆ ಬಂದಿದ್ದಳ್ಳು. ಇನ್ನೆನ್ನು ಮಗಳ ಜೊತೆ ಬೇಕರಿಗೆ ಹೋಗಬೇಕು ಎನ್ನುಷ್ಟರಲ್ಲಿ ಇಬ್ಬರು ಹಂತಕರು ಬಂದು ಅಟ್ಯಾಕ್ ಮಾಡಿದ್ದಾರೆ. ತಮ್ಮಲಿಂದ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಮಹಿಳೆ ಒದ್ದಾಡಿ ಉಸಿರು ನಿಲ್ಲಿಸಿದ್ದಾಳೆ. ಮಹಿಳೆ ಭೀಕರ ಹತ್ಯೆ ನೋಡಿ, ಜನರು ಆಟೋ ಚಾಲಕ ಹಾಗೂ ಮಗಳು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅಕ್ಕಪಕ್ಕದ ಜನರು ನೋಡುವ ವೇಳೆಯಲ್ಲಿ ಮಹಿಳೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೋರ್ಟ್ ಬಳಿ ಆಟೋ ಹತ್ತಿದ್ರು ಮುಳಗುಂದ ನಾಕಾಗೆ ಬಂದ ಬಳಿಕ ಬೇಕರಿಗೆ ಹೋದ್ರು ಅಷ್ಟರಲ್ಲೇ ಯುವಕರು ಬಂದ ಹತ್ಯೆ ಮಾಡಿದ್ರು ಅಂತ ಪ್ರತ್ಯಕ್ಷದರ್ಶಿ ಹಾಗೂ ಆಟೋ ಚಾಲಕ ಇನಾಯತ್ ಹೇಳಿದ್ದಾರೆ.
ಇನ್ನೂ ಸುದ್ದಿ ತಿಳಿದ ಕೂಡಲೇ ಗದಗ ಶಹರ ಪೊಲೀಸರು ಹಾಗೂ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಕೊಲೆಯಾದ ಮಹಿಳೆಯನ್ನು ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಎಂದು ಗುರುತಿಸಲಾಗಿದೆ. ಈ ಮಹಿಳೆ ಹಾಗೂ ಈತನ ಗಂಡ ವಾಸೀಂ ಬೇಪಾರಿ 2020 ರಲ್ಲಿ, ರಮೇಶ ಕುಮಾರ್ ಲೋಕಣ್ಣವರ ಎನ್ನುವಾತನನ್ನು ಕೊಲೆ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಕೋರ್ಟ್ಗೆ ಬಂದಿದ್ದರು ಎನ್ನಲಾಗುತ್ತಿದೆ. ಕೊಲೆಯಾದ ಮಹಿಳೆ ಹಾಗೂ ಅವಳ ಗಂಡ ವಾಸೀಂ ಬೇಪಾರಿ ಹುಬ್ಬಳ್ಳಿಯಲ್ಲಿ ವಾಸ್ ಮಾಡ್ತಾಯಿದ್ದಾರೆ. 2020 ರಲ್ಲಿ ಗಂಗಿಮಡಿ ನಿವಾಸಿಯಾದ ರಮೇಶ ಕುಮಾರ್ ಲೋಕಣ್ಣವರ ಎನ್ನುವಾತನನ್ನು ಕೊಲೆ ಮಾಡಿದ್ದರು. ಆ ಪ್ರಕರಣ ಕೋರ್ಟ್ ನಡೆಯುತ್ತಿದೆ. ಅದೇ ದ್ವೇಷದ ಹಿನ್ನಲೆಯಲ್ಲಿ ರಮೇಶ ಕುಮಾರ್ ಲೋಕಣ್ಣವರ ಸಹೋದರರಾದ, ಚೇತನ್ ಕುಮಾರ್ ಹಾಗೂ ರೋಹನ್ ಕುಮಾರ್ ಎನ್ನುವವರ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಕೊಲೆಯಾದ ಗದಗ-ಮುಳಗುಂದ ರಸ್ತೆಯಲ್ಲಿ ಟ್ರಾಫಿಕ್ಸ್ ಫುಲ್ ಜಾಮ್ ಆಗಿತ್ತು. ನೂರಾರು ಜನರು ಕೊಲೆ ನೋಡಲು ಮುಗಿಬಿದ್ದಿದ್ರು. ಏನಿದು ಗದಗ-ಬೆಟಗೇರಿಯಲ್ಲಿ ಪದೇ ಪದೇ ಚೂರಿ ಇರಿದು ಕೊಲೆ ಮಾಡ್ತಾಯಿದ್ದಾರೆ ಅಂತ ಆತಂಕ ವ್ಯಕ್ತಪಡಿಸಿದರು. ಗದಗನಲ್ಲಿ ಚಾಕೂ, ಚೂರಿಗಳು ಪಡ್ಡೇ ಹುಡಗರಿಗೆ ಆಟದ ವಸ್ತುಗಳಾಗಿವೆ. ಹಾಡು ಹಗಲೇ ಮಹಿಳೆಯ ಕೊಲೆಯಾಗಿದ್ದು, ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಮೇಲ್ನೋಟಕ್ಕೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರಗಡೆ ಬರಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ ಟಿವಿ 9 ಗದಗ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.