ಸಾವಿನ ಮನೆಯನ್ನೂ ಬಿಡದ ಕಳ್ಳರು..ಅಂತ್ಯಸಂಸ್ಕಾರ ಮುಗಿಸಿಕೊಂಡು ಬರುವಷ್ಟರಲ್ಲೇ ಚಿನ್ನಾಭರಣ ಮಾಯ

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2023 | 8:06 AM

ಒಂದೆಡೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದರೆ, ಮತ್ತೊಂದೆಡೆ ಖತರ್ನಾಕ್ ಕಳ್ಳರು ಸಾವಿನ ಮನೆಯಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಮಹಿಳೆಯೊಬ್ಬರ ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಿ ಬರುವಷ್ಟರಲ್ಲೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖದೀಮರು ದೋಚಿಕೊಂಡು ಹೋಗಿದ್ದಾರೆ.

ಸಾವಿನ ಮನೆಯನ್ನೂ ಬಿಡದ ಕಳ್ಳರು..ಅಂತ್ಯಸಂಸ್ಕಾರ ಮುಗಿಸಿಕೊಂಡು ಬರುವಷ್ಟರಲ್ಲೇ ಚಿನ್ನಾಭರಣ ಮಾಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಸೆಪ್ಟೆಂಬರ್ 05): ಒಂದರಡೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದರೆ, ಮತ್ತೊಂದೆಡೆ ಖತರ್ನಾಕ್ ಕಳ್ಳರು(thieves) ಸಾವಿನ ಮನೆಯಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು…ಮಹಿಳೆಯೋರ್ವಳ ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ಮುಗಿಸಿ ಬರುವುದರೊಳಗೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನವಾಗಿದೆ. ಈ ಘಟನೆ ಬೆಂಗಳೂರಿನ (Bengaluru) ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಾಂಜಿ ಎಂಬುವರ ಮನೆಯಲ್ಲಿ ನಡೆದಿದೆ. ಇತ್ತ ಹೆಂಡತಿ ಸಾವಿನ ನೋವಿನ ನಡುವೆ ಮನೆಯಲ್ಲಿದ್ದ ಚಿನ್ನಾಭರಣಗಳ ಕಳ್ಳತನವಾಗಿದ್ದರಿಂದ ರಾಮಾಂಜಿ ಕಂಗಾಲಾಗಿದ್ದಾರೆ.

ಆಗಸ್ಟ್ 30ರಂದು ರಾಮಾಂಜಿ ಎಂಬುವರ ಪತ್ನಿ ಭಾಗ್ಯಮ್ಮ ಮೃತಪಟ್ಟಿದ್ದರು. ಮನೆ ಮುಂದೆ ಜಾಗ ಇಲ್ಲದ ಕಾರಣ ಸ್ವಲ್ಪ ದೂರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿನ ಮನೆ ಎಂದು ದೀಪ ಹಚ್ಚಿ ಬಾಗಿಲು ಅರ್ಧ ಓಪನ್ ಮಾಡಿಟ್ಟಿದ್ದರು. ಇದನ್ನು ಗಮನಿಸಿದ್ದ ಖದೀಮರು, ಮನೆಯೊಳಗೆ ನುಗ್ಗಿ ಕಬೋರ್ಡ್​ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಇದನ್ನೂ ಓದಿ: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಪತ್ನಿಗೆ ಅಂತಿಮ ವಿಧಿ ವಿಧಾನಕ್ಕೆ ರಾಮಾಂಜಿ ಅವರು ಅಂದು ಮಧ್ಯಾಹ್ನ 1.30ರ ಸುಮಾರಿಗೆ ಕಬೋರ್ಡ್​ನಲ್ಲಿ ಸೀರೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಚಿನ್ನಾಭರಣ ಎಲ್ಲವೂ ಇತ್ತು, ಆದ್ರೆ ಸಂಜೆ ಅಂತ್ಯಸಂಸ್ಕಾರ ಮುಗಿಸಿಕೊಂಡು ಬಂದು ನೋಡಿದಾಗ ಚಿನ್ನಾಭರಣ ಮಾಯವಾಗಿವೆ. ಸದ್ಯ ಘಟನೆ ಸಂಬಂಧ ರಾಮಾಂಜಿ ಅವರು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ