ಈ ರೈಲಿನಲ್ಲಿ ಹೋದ್ರೆ ಧರ್ಮಸ್ಥಳ, ಕುಕ್ಕೆ ದೇಗುಲ ಮಾತ್ರವಲ್ಲ ಪಶ್ಚಿಮಘಟ್ಟದ ಸೌಂದರ್ಯ ಸವಿಯಬಹುದು!

ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು 6 ತಿಂಗಳ ನಂತರ ವಿಸ್ಟಾಡೋಮ್ ಕೋಚ್‌ಗಳೊಂದಿಗೆ ಪುನರಾರಂಭಗೊಂಡಿದೆ. ಈ ರೈಲು ಪ್ರಯಾಣಿಕರಿಗೆ ಘಾಟಿ ಹಾಗೂ ಕಾಡಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಭಕ್ತರಿಗೆ ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗಿದ್ದು, ಹೊಸ ಅನುಭವ ನೀಡಲಿದೆ.

ಈ ರೈಲಿನಲ್ಲಿ ಹೋದ್ರೆ ಧರ್ಮಸ್ಥಳ, ಕುಕ್ಕೆ ದೇಗುಲ ಮಾತ್ರವಲ್ಲ ಪಶ್ಚಿಮಘಟ್ಟದ ಸೌಂದರ್ಯ ಸವಿಯಬಹುದು!
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್

Updated on: Dec 17, 2025 | 3:25 PM

ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು 6 ತಿಂಗಳ ನಂತರ ಮತ್ತೆ ತನ್ನ ಸೇವೆಯನ್ನು ಆರಂಭಿಸಿದೆ. ರೈಲು ಮಾರ್ಗದ ಕಾಮಾಗಾರಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿದ್ದ ಕಾರಣ ಈ ರೈಲು ಸಂಚಾರವನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೆ ತನ್ನ ಸಂಚಾರವನ್ನು ಪ್ರಾರಂಭಿಸಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲಿರುವ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತೆ ಸಂತಸ ತಂದಿದೆ. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) (Gommateshwara Express) ತನ್ನ ಸೇವೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಅದೇ ಸಮಯಕ್ಕೆ ಈ ರೈಲು ಸಂಚಾರ ಮಾಡುತ್ತದೆ. ಆದರೆ ನಿಲ್ದಾಣದಲ್ಲಿ ನಿಲ್ಲುವ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಇದರ ಸಂಚಾರ ಆರಂಭಿಸಲಿದೆ. ಇನ್ನು ರೈಲು ಹೊಸ ಬದಲಾವಣೆಯೊಂದಿಗೆ ಪ್ರಯಾಣಿಕರಿಗೆ ಸೇವೆಯನ್ನು ನೀಡಲಿದೆ. ಇನ್ಮುಂದೆ ಪ್ರಯಾಣಿಕರು ಪ್ರಕೃತಿಯ ಸೌಂದರ್ಯವನ್ನು ನೋಡಿಕೊಂಡು ಪ್ರಯಾಣ ಮಾಡಬಹುದು.

ಹೌದು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿಗೆ ಆಧುನಿಕ ಸ್ವರ್ಶ ನೀಡಲಾಗಿದೆ. ರೈಲಿನ ಒಳಗೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಕೆಲವೊಂದು ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಸ್ಟಾಡೋಮ್ ಕೋಚ್, ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಛಾವಣಿ, ವ್ಯವಸ್ಥಿತ ಆಸನಗಳನ್ನು ಮಾಡಲಾಗಿದೆ. ಭಕ್ತರಿಗೆ ಅಥವಾ ಪ್ರಯಾಣಿಕರಿಗೆ ಇದೊಂದು ಹೊಸ ಅನುಭವವನ್ನು ನೀಡುತ್ತದೆ.

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್​​​​ ವಿಸ್ಟಾಡೋಮ್ ಕೋಚ್ ಸ್ವರ್ಶ:

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್​​ಗೆ ವಿಸ್ಟಾಡೋಮ್ ಸ್ವರ್ಶ ನೀಡಿರುವ ಕಾರಣ, ಇದು ಪ್ರಯಾಣಿಕರಿಗೆ ಹೆಚ್ಚು ಪ್ರಕೃತಿಯ ಜತೆಗೆ ಕಾಲ ಕಳೆಯುವಂತೆ ಮಾಡುತ್ತದೆ. ಈ ಹಿಂದೆ ಅಂದರೆ 2021ರಲ್ಲಿ ಯಶವಂತಪುರ- ಮಂಗಳೂರು ಜಂಕ್ಷನ್ ನಡುವೆ ವಿಶೇಷ ವಿಸ್ಟಾಡೋಮ್ ಬೋಗಿಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಮತ್ತೆ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್​​​ಗೆ ಈ ಸ್ವರ್ಶ ನೀಡಿದ್ದಾರೆ. ಇದೀಗ ಈ ರೈಲು ವಿದೇಶಿ ರೈಲಿನಂತೆ ಸಿಂಗಾರಗೊಂಡಿದೆ. ಶೌಚಾಲಯ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ. ವ್ಯವಸ್ಥಿತ ಆಸನಗಳನ್ನು ಕೂಡ ನೀಡಲಾಗಿದೆ. ಬೃಹತ್ ಗಾಜಿನ ಮೇಲ್ಛಾವಣಿ ಕೂಡ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಹಾದುಹೋಗುವ ಕಾರಣ, ಅಲ್ಲಿರುವ ಪ್ರಕೃತಿಗಳು ಅದ್ಭುತಗಳನ್ನು ನೋಡಿಕೊಂಡು ಹೋಗಬಹುದು, ಹಾಗೂ ಇದು ಘಟಿ ಹಾಗೂ ಕಾಡಿನ ಮಧ್ಯೆ ಹೋಗುವ ಕಾರಣ ಇದೊಂದು ವಿಶೇಷ ಅನುಭವ ನೀಡಬಹುದು.

ಪುಣ್ಯ ಕ್ಷೇತ್ರ ಭೇಟಿ ಈ ರೈಲು ಉತ್ತಮ:

ಇನ್ನು ದಕ್ಷಿಣ ಕನ್ನಡ, ಉಡುಪಿ, ಸಕಲೇಶಪುರ ಸಿಗುವ ಪುಣ್ಯಕ್ಷೇತ್ರಗಳಿಗೆ ಹೋಗಲು ತುಂಬಾ ಉಪಯುಕ್ತವಾಗಿರುತ್ತದೆ. ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಅತಿ ಹೆಚ್ಚು ಭಕ್ತರು ಹೋಗುವ ಕಾರಣ ಕಡಿಮೆ ಖರ್ಚಿನಲ್ಲಿ ಹೋಗಿ ದರ್ಶನ ಪಡೆದುಕೊಂಡು ಬರಬಹುದು, ಇನ್ನು ಇದು ಬೆಳಗ್ಗಿನ ಹೊತ್ತು ಸಂಚಾರಿಸು ಕಾರಣ ಮಕ್ಕಳು, ವೃದ್ಧರಿಗೂ ಉತ್ತಮವಾಗಿರುತ್ತದೆ. ಇದರ ಟಿಕೆಟ್​​ 155ರಿಂದ 250ವರೆಗೆ ಇರಬಹುದು.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು

ರೈಲಿನ ಸಮಯ :

ಇನ್ನು ಈ ರೈಲಿ ಸಮಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದು ಬೆಳಿಗ್ಗೆ 7.00 ಗಂಟೆಗೆ ಸಂಚಾರ ಮಾಡುತ್ತಿತ್ತು. ಇದೀಗ ಮತ್ತೆ ಅದೇ ಸಮಯದಲ್ಲಿ ಹೊಸತದೊಂದಿಗೆ ಸಂಚಾರ ಮಾಡುತ್ತದೆ. ಯಶವಂತಪುರದಿಂದ ಹೊರಟು, ಶ್ರವಣಬೆಳಗೊಳ ರೈಲು ನಿಲ್ದಾಣಕ್ಕೆ ತಲುಪುತ್ತದೆ. ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ