AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು

ಆರು ತಿಂಗಳ ನಂತರ ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸೇವೆ ಪುನರಾರಂಭಗೊಂಡಿದೆ. ಹಾಸನ-ಸಕಲೇಶಪುರ ಮಾರ್ಗದ ವಿದ್ಯುದೀಕರಣ ಕಾರ್ಯ ಮುಗಿದ ಕಾರಣ ಈ ಸೇವೆ ಮತ್ತೆ ಲಭ್ಯ. ಪ್ರಯಾಣಿಕರಿಗಾಗಿ ವಿಸ್ಟಾಡೋಮ್ ಕೋಚ್‌ಗಳನ್ನು ಪರಿಚಯಿಸಲಾಗಿದೆ, ಇದು ಕರಾವಳಿ ಮಾರ್ಗದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ ಪ್ರಯಾಣಿಕರಲ್ಲಿ ಸಂತಸ ಮೂಡಿದೆ. ಯಶವಂತಪುರದಿಂದಲೇ ರೈಲು ಸಂಚಾರ ಮುಂದುವರಿಯಲಿದೆ.

ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 16, 2025 | 6:41 PM

Share

ಬೆಂಗಳೂರು, ಡಿ.16: ಬೆಂಗಳೂರಿನಿಂದ ಕರಾವಳಿಗೆ ಹೋಗುವ ರೈಲುವೇ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೈಋತ್ಯ ರೈಲ್ವೆ ಇಲಾಖೆ ನೀಡಿದೆ. ಹಾಗೂ ಇದು ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳ ಸೇರಿದಂತೆ ಹಲವು ಪುಣ್ಯ  ಕ್ಷೇತ್ರಕ್ಕೆ  ಹೋಗುವವರಿಗೆ ಇದು ಸಹಾಯವಾಗಲಿದೆ. ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆ ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಇದೀಗ ಈ ಬಗ್ಗೆ ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಈ ಮೂಲಕ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) (Gommateshwara Express) ಮತ್ತೆ ತನ್ನ ಸೇವೆ ಮುಂದುವರಿಸಲಿದೆ. ಇದೀಗ ಮೊದಲಿನಂತೆ ತನ್ನ ಸಂಚಾರವನ್ನು ಯಶವಂತಪುರ ನಿಲ್ದಾಣದಿಂದ ಆರಂಭಿಸಲಿದೆ. ಪ್ರಯಾಣಿಕರು ಈ ರೈಲ್ವೆ ಸಂಚಾರ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಹೇಳಿದೆ.

ಕಳೆದ ಆರು ತಿಂಗಳಿನಿಂದ ರದ್ದಾಗಿದ್ದ ಈ ರೈಲು, ಇದೀಗ ಮತ್ತೆ ಪ್ರಾರಂಭವಾಗಿರುವುದು ಪ್ರಯಾಣಿಕರಲ್ಲಿ ಸಂಸತ ತಂದಿದೆ. ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ರದ್ದಾಗಿತ್ತು. ಇದೀಗ ಮತ್ತೆ ಸಂಚಾರಿಸುವ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಲು ಸಿದ್ಧವಾಗಿದೆ. ಈ ಮೂಲಕ ನೈಋತ್ಯ ರೈಲ್ವೆ ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​:

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹತ್ವದ ಸುಧಾರಣೆ:

ರೈಲಿ ಇಲಾಖೆಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲು ಎಂದು ಹೇಳಬಹುದು. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಇನ್ನು ಈ ರೈಲು ಬೆಳಗ್ಗಿನ ಹೊತ್ತು ಸಂಚಾರಿಸುವ ಕಾರಣ, ಪ್ರಯಾಣಿಕರು ಪ್ರಕೃತಿಯನ್ನು ವೀಕ್ಷಿಸಲು ವಿಸ್ಟಾಡೋಮ್ ಕೋಚ್, ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣೆ, ವ್ಯವಸ್ಥಿತ ಆಸನಗಳನ್ನು ಮಾಡಲಾಗಿದೆ. ಹಾಗಾಗಿ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ , ಮಂಗಳೂರು ಮಾರ್ಗದುದ್ದಕ್ಕೂ ಪ್ರಕೃತಿಯನ್ನು ನೋಡಿಕೊಂಡು ಹೋಗಬಹುದು. ಇಷ್ಟು ದಿನ ಈ ಪ್ರಯಾಣಿಕರು ಇದನ್ನು ಮಿಸ್​​ ಮಾಡಿಕೊಂಡಿದ್ದರು. ಇದೀಗ ಮತ್ತೆ ತನ್ನ ಸಂಚಾರವನ್ನು ಮುಂದುವರಿಸುವುದರಿಂದ ಪ್ರಯಾಣಿಕರಿಗೆ ಮತ್ತೆ ಸಂತಸ ತಂದಿದೆ.

ಇದನ್ನೂ ಓದಿ: ಬಿಎಂಆರ್​ಸಿಎಲ್ ಅಧಿಕಾರಿಗಳ ಯಡವಟ್ಟಿಗೆ ಪ್ರಯಾಣಿಕರು ಕಂಗಾಲು: ಯಾವುದೋ ಮೆಟ್ರೋ ನಿಲ್ದಾಣಕ್ಕೆ ಇನ್ಯಾವುದೋ ಹೆಸರು!

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಮಯ;

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಮಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಸಂಚಾರ ಮಾರ್ಗದಲ್ಲೂ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ, ಆದರೆ ನಿಲ್ದಾಣದಲ್ಲಿ ನಿಲ್ಲುವ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿದೆ. ಯಶವಂತಪುರ ನಿಲ್ದಾಣದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಹೋಗುತ್ತದೆ. ಅಲ್ಲಿಂದ ಶ್ರವಣಬೆಳಗೊಳ ನಿಲ್ದಾಣದಲ್ಲಿ ನಿಲ್ಲುತ್ತದೆ. ರೈಲು ಹಾಸನ ಮತ್ತು ಸಕಲೇಶಪುರದಲ್ಲಿ ಹೆಚ್ಚು ಸಮಯ ನಿಲ್ಲುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ