ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ನಲ್ಲಿ ಅಗ್ನಿ ಅವಘಡ

| Updated By: ಸಾಧು ಶ್ರೀನಾಥ್​

Updated on: Dec 08, 2020 | 12:11 PM

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರೋರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ದುರಂತ ತಪ್ಪಿದೆ. ಆಸ್ಪತ್ರೆಯಲ್ಲಿದ್ದ ಬಾಣಂತಿಯರು ಘಟನೆಯಿಂದ ಆತಂಕಗೊಂಡಿದ್ದು, ಸಧ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ನಲ್ಲಿ ಅಗ್ನಿ ಅವಘಡ
ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕವಾಗಿ ಬೆಂಕಿ.
Follow us on

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ದುರಂತ ತಪ್ಪಿದೆ.  

ಬಾಣಂತಿಯರ ವಾರ್ಡ್‌ನ ಸ್ವಿಚ್ಛ್ ಬೋರ್ಡ್‌ನಲ್ಲಿ ಬೆಂಕಿ

ಬಾಣಂತಿಯರು ಇರುವ ವಾರ್ಡ್‌ನ ಸ್ವಿಚ್ಛ್ ಬೋರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೇಳಿ ಕೇಳಿ ಅದು ಬಾಣಂತಿಯರು, ಮಹಿಳೆಯರು ಇರುವ ವಾರ್ಡ್ ಎಷ್ಟು ಎಚ್ಚರದಲ್ಲಿ ಇದ್ದರೂ ಸಾಕಾಗೊಲ್ಲ ಅಂತಹದರಲ್ಲಿ​ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ್ರೂ ನಿರ್ಲಕ್ಷ್ಯ ವಹಿಸಿದ ಟಿಹೆಚ್ಒ ವಿರುದ್ಧ ಸಾರ್ವಜನಿಕರು ಸಿಟ್ಟಿಗಿಡಾಗಿದ್ದಾರೆ.

ಆರೋಗ್ಯ ಸಚಿವರ ಊರಿನ ಆಸ್ಪತ್ರೆಯಲ್ಲೇ ಬೆಂಕಿ ಅಪಘಡ