ಕೊವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್

|

Updated on: May 27, 2021 | 3:16 PM

ಮೃತ ಶಿಕ್ಷಕರು ತಮ್ಮ ಕುಟುಂಬಗಳಷ್ಟನ್ನೇ ಅಲ್ಲದೇ, ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್
ಸಚಿವ ಎಸ್​. ಸುರೇಶ್​ ಕುಮಾರ್​
Follow us on

ಬೆಂಗಳೂರು: ಕೊವಿಡ್​ನಿಂದ ನಿಧನರಾದ ಶಿಕ್ಷಕರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನೀಡಿದೆ. ನೌಕರಿಯ ನೇಮಕಾತಿ ಪತ್ರವನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್​ ಇಂದು ವಿತರಣೆ ಮಾಡಿದ್ದಾರೆ. ಈವರೆಗೆ ಕೊವಿಡ್​ನಿಂದ ಮೃತಪಟ್ಟ 130 ಶಿಕ್ಷಕರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲಾಗಿದೆ.

ಕೊವಿಡ್​ನಿಂದ ಶಿಕ್ಷಣ ಪರಿವಾರದ ಅನೇಕ ಶಿಕ್ಷಕರು ಅಗಲಿದ್ದಾರೆ. ಇದರಿಂದ ನಾಡಿಗೆ ಅಪಾರ ನಷ್ಟವಾಗಿದೆ.  ಮೃತ ಶಿಕ್ಷಕರು ತಮ್ಮ ಕುಟುಂಬಗಳಷ್ಟನ್ನೇ ಅಲ್ಲದೇ, ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ನೇಮಕಾತಿ ಪತ್ರ ಪಡೆದು ನೌಕರಿಗೆ ಸೇರ್ಪಡೆಯಾಗುತ್ತಿರುವವರಿಗೆ ಪರಿಣಾಮಕಾರಿ ವೃತ್ತಿ ತರಬೇತಿ ಮತ್ತು ಆಡಳಿತ ವ್ಯವಸ್ಥೆ ಕುರಿತ ಪರಿಚಯಾತ್ಮಕ ತರಬೇತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಕೊವಿಡ್‌ನಿಂದ ಶಿಕ್ಷಕರ ಸಾವಿನ ಬಗ್ಗೆ ಟಿವಿ9 ಕನ್ನಡ ನಿರಂತರವಾಗಿ ವರದಿ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಸಚಿವ ಸಂಪುಟ ನಿರ್ಧಾರ: ಜಿಂದಾಲ್​ಗಿಲ್ಲ ಭೂಮಿ, ಮಕ್ಕಳ ಐಸಿಯು ಸ್ಥಾಪನೆಗೆ ಕ್ರಮ, ಮತ್ತೊಂದು ಕೊವಿಡ್ ಪ್ಯಾಕೇಜ್​ಗೆ ಚಿಂತನೆ

ಕೊವಿಡ್​ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಿರಿ.. ಎಚ್ಚರ!

(Government job for the families of teachers who died from Covid Education minister Suresh Kumar issued the appointment letter)