ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಬೀಳುತ್ತಾ ಬ್ರೇಕ್?

|

Updated on: Oct 09, 2020 | 7:57 AM

ಬೆಂಗಳೂರು: ಡ್ರಗ್ ಮಾಫಿಯಾದ ನಂಟನ್ನು ಬುಡಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಬೇಟೆಯಾಡ್ತಿದೆ. ಇದರ ಬೆನ್ನಲ್ಲೇ ತಂಬಾಕು, ಗುಟ್ಕಾವನ್ನ ಸಹ ಕಂಪ್ಲೀಟ್ ಆಗಿ ಬ್ಯಾನ್ ಮಾಡಲು ಸರ್ಕಾರ ಪಣತೊಟ್ಟಿದೆ. ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ. ಇನ್ನೊಂದು ವಾರದಲ್ಲಿ ಸುಗ್ರೀವಾಜ್ಞೆ ಸಾಧ್ಯತೆ! ಗುಟ್ಕಾ, ಪಾನ್ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಾಲು ಪ್ಯಾಕೆಟ್​ ಮೇಲಿದ್ದರೂ ಸೇವಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗಾಗಿ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಿಟ್ಟಿನಲ್ಲಿ ಹಲವಾರು ರಾಜ್ಯಗಳು ಇವನ್ನು […]

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಬೀಳುತ್ತಾ ಬ್ರೇಕ್?
Follow us on

ಬೆಂಗಳೂರು: ಡ್ರಗ್ ಮಾಫಿಯಾದ ನಂಟನ್ನು ಬುಡಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಬೇಟೆಯಾಡ್ತಿದೆ. ಇದರ ಬೆನ್ನಲ್ಲೇ ತಂಬಾಕು, ಗುಟ್ಕಾವನ್ನ ಸಹ ಕಂಪ್ಲೀಟ್ ಆಗಿ ಬ್ಯಾನ್ ಮಾಡಲು ಸರ್ಕಾರ ಪಣತೊಟ್ಟಿದೆ. ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ.

ಇನ್ನೊಂದು ವಾರದಲ್ಲಿ ಸುಗ್ರೀವಾಜ್ಞೆ ಸಾಧ್ಯತೆ!
ಗುಟ್ಕಾ, ಪಾನ್ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಾಲು ಪ್ಯಾಕೆಟ್​ ಮೇಲಿದ್ದರೂ ಸೇವಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗಾಗಿ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಿಟ್ಟಿನಲ್ಲಿ ಹಲವಾರು ರಾಜ್ಯಗಳು ಇವನ್ನು ನಿಷೇಧಿಸಿವೆ. ಇದೀಗ ಕರ್ನಾಟಕ ರಾಜ್ಯದ ಸರದಿ. ಯಾಕಂದ್ರೆ ಇತ್ತೀಚೆಗ ಡ್ರಗ್ಸ್ ಜಾಲದ ನಂಟು ಅಷ್ಟರಮಟ್ಟಿಗೆ ಸದ್ದು ಮಾಡಿತ್ತು. ಡ್ರಗ್ಸ್ ಮಾಫಿಯಾವನ್ನ ಮಟ್ಟ ಹಾಕಲು ಸರ್ಕಾರ ಕೂಡ ಅಷ್ಟೇ ಸರ್ಕಸ್ ಮಾಡ್ತಿದೆ. ಇದೀಗ ಡ್ರಗ್ಸ್ ಜೊತೆಗೆ ಗುಟ್ಕಾ, ತಂಬಾಕವಿನ ಮಾರಾಟವನ್ನು ಬ್ಯಾನ್ ಮಾಡೋಕೆ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧವಾಗಿದೆ.

ಜುಲೈ 31 ರಂದು ತಂಬಾಕು, ಗುಟ್ಕಾ ಹಾಗೂ ತಂಬಾಕು ಮಿಶ್ರಿತ ಉತ್ಪನ್ನಗಳ ಮಾರಾಟ ನಿಷೇಧದ ಬಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಸಿಎಂ‌ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಚರ್ಚಿಸಿದ್ದರು. ರಾಜ್ಯದಲ್ಲಿ ಡ್ರಗ್ಸ್ ಮತ್ತು ತಂಬಾಕು ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದರು. ಆಗ ಸಿಎಂ ಬಿಎಸ್‌ವೈ ಅಗತ್ಯ ಬಿದ್ದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲರಿಗೆ ಭರವಸೆ ನೀಡಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಗುಟ್ಕಾ, ತಂಬಾಕು, ಡ್ರಗ್ಸ್ ಮಾರಾಟ ನಿಷೇಧಿಸಲು ಸರ್ಕಾರ ಸಿದ್ಧವಾಗಿದೆ.

ಸಿಎಂ ಎಸಿಎಸ್, ಆರೋಗ್ಯ ಇಲಾಖೆ ಎಸಿಎಸ್​​ರಿಂದ ರಾಜ್ಯಪಾಲರ ಭೇಟಿ
ತಂಬಾಕು, ಗುಟ್ಕಾ ನಿಷೇಧದ ಬಗ್ಗೆ ರಾಜ್ಯ ಸರ್ಕಾರದಿಂದ ರಾಜ್ಯಪಾಲರಿಗೆ ಮಾಹಿತಿ ಕೂಡಾ ಸಲ್ಲಿಸಲಾಗಿದೆ. ಈ ಸಂಬಂಧವಾಗಿ ಮುಖ್ಯಮಂತ್ರಿಗಳ ಎಸಿಎಸ್ ಡಾ.‌ಇ.ವಿ.ರಮಣ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟ ಮಾಡಿ ಮಾಹಿತಿ ಒದಗಿಸಿದ್ದಾರೆ.

ಜುಲೈ 31 ರಂದು ರಾಜ್ಯಪಾಲರು ನಡೆಸಿದ್ದ ಸಭೆಯ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯ ಸರ್ಕಾರದಿಂದ ರಾಜ್ಯಪಾಲರಿಗೆ ಪ್ರಗತಿಯ ವರದಿ ಸಲ್ಲಿಸಲ್ಪಟ್ಟಿದೆ. ಇದರ ಜೊತೆಗೆ ಡ್ರಗ್ಸ್ ಮಾರಾಟ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿರುವುದು ಹಾಗೂ ಗಾಂಜಾ ವಶ ಪಡಿಸಿಕೊಂಡಿರುವ ಬಗ್ಗೆ ಕೂಡಾ ರಾಜ್ಯಪಾಲರಿಗೆ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.‌ ಒಟ್ಟಾರೆ, ರಾಜ್ಯದಲ್ಲಿ ಡ್ರಗ್ ಮಾಫಿಯಾವನ್ನು ಹೆಡೆಮುರಿ ಕಟ್ಟಲು ಹೊರಟಿರುವ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ.