ವೃದ್ಧೆಯ ಸರ ಕದ್ದು ಓಡ್ತಿದ್ದ ಖದೀಮ ಲಾಕ್.. ಸಾರ್ವಜನಿಕರಿಂದ ಸಿಕ್ತು ಬಿಸಿಬಿಸಿ ಕಜ್ಜಾಯ!
ಬಳ್ಳಾರಿ: ವೃದ್ಧೆಯ ಸರ ಕದ್ದು ಓಡಿಹೋಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಸರಿಯಾಗಿ ಧರ್ಮದೇಟು ಬಿದ್ದಿರುವ ಘಟನೆ ಪಟ್ಟಣದ ರೂಪನಗುಡಿ ರಸ್ತೆಯ ನಾರಪ್ಪ ಬೀದಿಯಲ್ಲಿ ನಡೆದಿದೆ. ವೃದ್ಧೆಯ 20 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನ ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಳ್ಳಾರಿ: ವೃದ್ಧೆಯ ಸರ ಕದ್ದು ಓಡಿಹೋಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಸರಿಯಾಗಿ ಧರ್ಮದೇಟು ಬಿದ್ದಿರುವ ಘಟನೆ ಪಟ್ಟಣದ ರೂಪನಗುಡಿ ರಸ್ತೆಯ ನಾರಪ್ಪ ಬೀದಿಯಲ್ಲಿ ನಡೆದಿದೆ.
ವೃದ್ಧೆಯ 20 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನ ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 6:26 pm, Thu, 8 October 20



