ಕೊವಿಡ್ 19 ​ತಾಂತ್ರಿಕ ಸಲಹಾ ಸಮಿತಿ ನೀಡಿದ ಆತಂಕಕಾರಿ ವರದಿ ಇದು..; ಕಠಿಣ ನಿಯಮ ಜಾರಿಗೊಳಿಸದೆ ಇದ್ರೆ ಅಪಾಯ ತಪ್ಪಿದ್ದಲ್ಲ

ಕೊವಿಡ್ 19 ​ತಾಂತ್ರಿಕ ಸಲಹಾ ಸಮಿತಿ ನೀಡಿದ ಆತಂಕಕಾರಿ ವರದಿ ಇದು..; ಕಠಿಣ ನಿಯಮ ಜಾರಿಗೊಳಿಸದೆ ಇದ್ರೆ ಅಪಾಯ ತಪ್ಪಿದ್ದಲ್ಲ
ಕೊರೊನಾ ತಪಾಸಣೆ ಪ್ರಾತಿನಿಧಿಕ ಚಿತ್ರ

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸದೆ ಇದ್ದರೆ ರಾಜ್ಯದಲ್ಲಿ ಕೊವಿಡ್​ 19 ಸಂಖ್ಯೆ 3 ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇ ತಿಂಗಳ ಹೊತ್ತಿಗೆ ಬೆಂಗಳೂರಿನಲ್ಲೇ ಪ್ರತಿದಿನ 20,000 ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ !

Lakshmi Hegde

|

Apr 17, 2021 | 9:29 AM

ಬೆಂಗಳೂರು: ಎರಡನೇ ಅಲೆಯಲ್ಲಿ ಮಿತಿಮೀರುತ್ತಿರುವ ಕೊರೊನಾಕ್ಕೆ ಕಡಿವಾಣ ಹಾಕುವುದು ಸದ್ಯದ ಮಟ್ಟಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ನೈಟ್​ ಕರ್ಫ್ಯೂ ಜಾರಿ ಮಾಡಿದ್ದು, ಅದರಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮತ್ತೆ ಲಾಕ್​ಡೌನ್ ಜಾರಿಯಾಗುವ ಸಾಧ್ಯತೆಯನ್ನೂ ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಇದೀಗ ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಆತಂಕಕಾರಿ ವರದಿಯೊಂದನ್ನು ಸಲ್ಲಿಸಿದೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸದೆ ಇದ್ದರೆ ರಾಜ್ಯದಲ್ಲಿ ಕೊವಿಡ್​ 19 ಸಂಖ್ಯೆ 3 ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇ ತಿಂಗಳ ಹೊತ್ತಿಗೆ ಬೆಂಗಳೂರಿನಲ್ಲೇ ಪ್ರತಿದಿನ 20,000 ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿದೆ. ಅಲ್ಲದೆ, ಕೊರೊನಾ ಮರಣದ ಪ್ರಮಾಣವೂ 2 ಪಟ್ಟು ಹೆಚ್ಚಲಿದ್ದು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್​, ಐಸಿಯು ಕೊರತೆ ಆಗಬಹುದು. ಚಿತಾಗಾರಗಳಲ್ಲಿ ಜಾಗದ ಸಮಸ್ಯೆ ಉಂಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಹೀಗೆ ಬಿಟ್ಟರೆ ಕೊರೊನಾ ಸೋಂಕು ಹಳ್ಳಿಗಳಿಗೂ ಹರಡಬಹುದು. ಓರ್ವ ಸೋಂಕಿತನಿಂದ ಮನೆಮಂದಿಗೆಲ್ಲ ಕೊರೊನಾ ತಗುಲುತ್ತದೆ. ಮಾರುಕಟ್ಟೆಗಳು ಸೇರಿ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಕೊರೊನಾ ಸೋಂಕು ಉಲ್ಬಣ ಆಗಬಹುದು. ಹಾಗಾಗಿ ಶೀಘ್ರವೇ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೊವಿಡ್​ ತಾಂತ್ರಿಕ ಸಮಿತಿ ತಿಳಿಸಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಚಾಲಕ ಸಾವು: ಎದೆಗೆ ಕಲ್ಲು ಎಸೆಯಲು ಮೊದಲೇ ನಡೆದಿತ್ತು ಪ್ಲ್ಯಾನ್; ಶಾಕಿಂಗ್ ಮಾಹಿತಿ ಬಹಿರಂಗ

ಕೊವಿಡ್-19 ನಿಯಂತ್ರಣಕ್ಕೆ ಹೊಸ ಅಸ್ತ್ರ; ಲಾಕ್​ಡೌನ್​ ಮಾಡುವ ಬದಲು ಈ ಯೋಜನೆಗೆ ಸಿದ್ಧವಾಗ್ತಿದೆಯಾ ಸರ್ಕಾರ?

(Government Should enforce strict regulations for corona control says Covid-19 Technical Advisory Committee)

Follow us on

Related Stories

Most Read Stories

Click on your DTH Provider to Add TV9 Kannada