
ಬೆಂಗಳೂರು: ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ತಗುಲಿದ್ದು, ಈಗ ಅವರ ಸಂಪರ್ಕಕ್ಕೆ ಬಂದಿದ್ದವರೆಲ್ಲ ಕೊರೊನಾ ಟೆಸ್ಟ್ಗೆ ಒಳಗಾಗುತ್ತಿದ್ದಾರೆ.
ಹೀಗಾಗಿ ಸಿಎಂ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ರಾಜ್ಯಪಾಲ ವಾಜುಬಾಯಿ ವಾಲಾ ಅವರು ಇಂದು ಮಧ್ಯಾಹ್ನ 12.30ಕ್ಕೆ ರಾಜಭವನದಲ್ಲಿ ಆಂಟಿಜನ್ ಟೆಸ್ಟಿಗೆ ಒಳಪಟ್ಟಿದ್ದು, ರಾಜ್ಯಪಾಲರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಾಜ್ಯಪಾಲರು ಕೊಂಚ ನಿರಾಳರಾಗಿದ್ದಾರೆ.