ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿದ ಐನಾತಿ ಕಳ್ಳರ ಬಂಧನ, ಎಲ್ಲಿ?

ಮೈಸೂರು: ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ಮಾರಾಟ ಮಾಡಿ 30 ಲಕ್ಷ ರೂಪಾಯಿ ವಂಚಿಸಿದ ಖತರ್ನಾಕ್ ಕಳ್ಳರನ್ನು ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ. ಮೈಸೂರಿನ ಕುಂಬಾರಕೊಪ್ಪಲಿನ ರಾಘವೇಂದ್ರ ಎಂಬುವವರು ವಂಚನೆಗೆ ಒಳಗಾಗಿದ್ದು, ರಾಘವೇಂದ್ರ ಅವರಿಗೆ ಪುರಾತನ ಕಾಲದ ಚಿನ್ನದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುವುದರಿಂದ ಭೀಮ ಅಲಿಯಾಸ್ ಡೈನಾ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಎಂಬುವವರು ರಾಘವೇಂದ್ರ ಅವರಿಗೆ ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ, ನಕಲಿ ಚಿನ್ನದ ಗುಂಡುಗಳನ್ನು […]

ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿದ ಐನಾತಿ ಕಳ್ಳರ ಬಂಧನ, ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on:Aug 03, 2020 | 5:39 PM

ಮೈಸೂರು: ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ಮಾರಾಟ ಮಾಡಿ 30 ಲಕ್ಷ ರೂಪಾಯಿ ವಂಚಿಸಿದ ಖತರ್ನಾಕ್ ಕಳ್ಳರನ್ನು ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲಿನ ರಾಘವೇಂದ್ರ ಎಂಬುವವರು ವಂಚನೆಗೆ ಒಳಗಾಗಿದ್ದು, ರಾಘವೇಂದ್ರ ಅವರಿಗೆ ಪುರಾತನ ಕಾಲದ ಚಿನ್ನದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುವುದರಿಂದ ಭೀಮ ಅಲಿಯಾಸ್ ಡೈನಾ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಎಂಬುವವರು ರಾಘವೇಂದ್ರ ಅವರಿಗೆ ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ, ನಕಲಿ ಚಿನ್ನದ ಗುಂಡುಗಳನ್ನು ನೀಡಿ 30 ಲಕ್ಷ ರೂಪಾಯಿ ಗಳನ್ನು ಪಡೆದುಕೊಂಡಿದ್ದರು.

ಆದರೆ ಆರೋಪಿಗಳು ನೀಡಿರುವ ಚಿನ್ನ ನಕಲಿ ಎಂದು ತಿಳಿದಿದೆ. ಹೀಗಾಗಿ ರಾಘವೇಂದ್ರರವರು ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಭೀಮ ಅಲಿಯಾಸ್ ಡೈನಾ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಜೊತೆಗೆ ಬಂಧಿತರಿಂದ 20 ಲಕ್ಷ ನಗದು ಹಾಗೂ ಎರಡು ಮೋಟಾರು ಬೈಕ್ ಮತ್ತು ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದಲ್ಲಿ ಒಟ್ಟು ಏಳು ಜನರ ತಂಡ ಭಾಗಿಯಾಗಿದ್ದು ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Published On - 4:43 pm, Mon, 3 August 20