ಜೋರಾಗಿ ಸಾಂಗ್ ಹಾಕಬೇಡ ಅಂದಿದ್ದಕ್ಕೆ ಮನಬಂದಂತೆ ಹಲ್ಲೆ, ಎಲ್ಲಿ?
ಬೆಂಗಳೂರು: ಆಟೋದಲ್ಲಿ ಹೆಚ್ಚು ಸೌಂಡ್ ಕೊಟ್ಟು ಹಾಡು ಹಾಕಿದ್ದನ್ನ ಪ್ರಶ್ನಿಸಿದ ಯುವಕನನ್ನ ಮನಬಂದಂತೆ ಥಳಿಸಿರುವ ಘಟನೆ ನಾಗರಭಾವಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಸಂತೋಷ್ ಕುಮಾರ್ (26) ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ನಾಗರಭಾವಿಯ ನಮ್ಮೂರ ತಿಂಡಿ ಹೋಟೆಲ್ ಬಳಿ ನಿನ್ನೆ ಸಾಯಂಕಾಲ ಸಂತೋಷ್ ನಡೆದುಕೊಂಡು ಹೋಗುತ್ತಿದ್ದನಂತೆ. ಈ ವೇಳೆ ವ್ಯಕ್ತಿಯೊಬ್ಬ ಆಟೋದಲ್ಲಿ ಜೋರಾಗಿ ಸೌಂಡ್ ಕೊಟ್ಟು ಸಾಂಗ್ ಹಾಕಿಕೊಂಡು ಹೋಗುತ್ತಿದ್ದ. ಇದನ್ನ ಕಂಡು ಸೌಂಡ್ ಕಡಿಮೆ ಮಾಡುವಂತೆ ಸಂತೋಷ್ ಹೇಳಿದ್ದಾನೆ. ತನ್ನನ್ನು ಪ್ರಶ್ನಿಸಿದ್ದಕ್ಕೆ ಆ […]
ಬೆಂಗಳೂರು: ಆಟೋದಲ್ಲಿ ಹೆಚ್ಚು ಸೌಂಡ್ ಕೊಟ್ಟು ಹಾಡು ಹಾಕಿದ್ದನ್ನ ಪ್ರಶ್ನಿಸಿದ ಯುವಕನನ್ನ ಮನಬಂದಂತೆ ಥಳಿಸಿರುವ ಘಟನೆ ನಾಗರಭಾವಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಸಂತೋಷ್ ಕುಮಾರ್ (26) ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ನಾಗರಭಾವಿಯ ನಮ್ಮೂರ ತಿಂಡಿ ಹೋಟೆಲ್ ಬಳಿ ನಿನ್ನೆ ಸಾಯಂಕಾಲ ಸಂತೋಷ್ ನಡೆದುಕೊಂಡು ಹೋಗುತ್ತಿದ್ದನಂತೆ. ಈ ವೇಳೆ ವ್ಯಕ್ತಿಯೊಬ್ಬ ಆಟೋದಲ್ಲಿ ಜೋರಾಗಿ ಸೌಂಡ್ ಕೊಟ್ಟು ಸಾಂಗ್ ಹಾಕಿಕೊಂಡು ಹೋಗುತ್ತಿದ್ದ. ಇದನ್ನ ಕಂಡು ಸೌಂಡ್ ಕಡಿಮೆ ಮಾಡುವಂತೆ ಸಂತೋಷ್ ಹೇಳಿದ್ದಾನೆ.
ತನ್ನನ್ನು ಪ್ರಶ್ನಿಸಿದ್ದಕ್ಕೆ ಆ ವ್ಯಕ್ತಿ ಸಂತೋಷ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ಕೊನೆಗೆ ಆ ವ್ಯಕ್ತಿ ತನ್ನ 15 ಜನ ಸ್ನೇಹಿತರನ್ನ ಕರೆಸಿ ಸಂತೋಷ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರಂತೆ.
ಇನ್ನು ಘಟನೆ ಸಂಭವಿಸಿದ ನಂತರ ಹಲ್ಲೆಗೊಳಗಾದ ಸಂತೋಷ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಘಟನೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.