ಮಾಸ್ಕ್, ಹೆಲ್ಮೆಟ್ ಧರಿಸಿ ಬಂದ ಖದೀಮರು 7 ಲಕ್ಷ ರೂ. ದೋಚಿ ಪರಾರಿ, ಎಲ್ಲಿ?

ಬೆಂಗಳೂರು: ಸಂಡೇ ಲಾಕ್ ಡೌನ್​ನ ಬಂಡವಾಳ ಮಾಡಿಕೊಂಡ ಖದೀಮರು ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ನಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದು, ಕ್ಯಾಶಿಯರ್​ ಬಳಿ 7 ಲಕ್ಷ ರೂಪಾಯಿ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಟಾಪ್ ಕನ್ವೆನ್ಷನ್ ಹಾಲ್ ರಸ್ತೆಯಲ್ಲಿರುವ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ಗೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿ ಒಳನುಗ್ಗಿದ ಕಳ್ಳರು, ಕ್ಯಾಶಿಯರ್​ಗೆ ಚಾಕುವಿನಿಂದ ಇರಿದು 7 ಲಕ್ಷ ರೂಪಾಯಿ ಹಣವನ್ನ ದೋಚಿದ್ದಾರೆ. ಪರಾರಿಯಾಗುವ […]

ಮಾಸ್ಕ್, ಹೆಲ್ಮೆಟ್ ಧರಿಸಿ ಬಂದ ಖದೀಮರು 7 ಲಕ್ಷ ರೂ. ದೋಚಿ ಪರಾರಿ, ಎಲ್ಲಿ?
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Aug 04, 2020 | 4:28 PM

ಬೆಂಗಳೂರು: ಸಂಡೇ ಲಾಕ್ ಡೌನ್​ನ ಬಂಡವಾಳ ಮಾಡಿಕೊಂಡ ಖದೀಮರು ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ನಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದು, ಕ್ಯಾಶಿಯರ್​ ಬಳಿ 7 ಲಕ್ಷ ರೂಪಾಯಿ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಟಾಪ್ ಕನ್ವೆನ್ಷನ್ ಹಾಲ್ ರಸ್ತೆಯಲ್ಲಿರುವ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ಗೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿ ಒಳನುಗ್ಗಿದ ಕಳ್ಳರು, ಕ್ಯಾಶಿಯರ್​ಗೆ ಚಾಕುವಿನಿಂದ ಇರಿದು 7 ಲಕ್ಷ ರೂಪಾಯಿ ಹಣವನ್ನ ದೋಚಿದ್ದಾರೆ. ಪರಾರಿಯಾಗುವ ಮುನ್ನ ಕ್ಯಾಶಿಯರ್​ನ ಕೈ ಕಾಲುಗಳನ್ನು ಕಟ್ಟಿ ಹಾಕಿ ಹೋಗಿದ್ದಾರೆ.

ಸ್ವಲ್ಪ ಸಮಯದ ನಂತರ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡ ಕ್ಯಾಶಿಯರ್, ಹೊರಗೆ ಬಂದು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾನೆ. ಆದರೆ ಅಂದು ಸಂಡೇ ಲಾಕ್​ಡೌನ್​ ಇದ್ದ ಕಾರಣದಿಂದಾಗಿ ರಸ್ತೆಯಲ್ಲಿ ಯಾರು ಓಡಾಡುತ್ತಿರಲಿಲ್ಲ. ಹೀಗಾಗಿ, ಕಳ್ಳರು ಸುಲಭವಾಗಿ ತಪ್ಪಿಸಿಕೊಂಡು ಹೋಗಿದ್ದಾರೆ. ಇದೀಗ, ಬಂಡೆಪಾಳ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧಾರವಾಗಿಟ್ಟುಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.