ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್​ ಆಯ್ತು

|

Updated on: Oct 23, 2020 | 3:49 PM

ಬೆಂಗಳೂರು: 7 ತಿಂಗಳ ಬಳಿಕ ರಾಜ್ಯಾದ್ಯಂತ ಕಾಲೇಜು ಓಪನ್​ಗೆ ಡೇಟ್ ಫಿಕ್ಸ್ ಆಗಿದೆ. ನವೆಂಬರ್​ 17ರಿಂದ ಕಾಲೇಜುಗಳನ್ನು ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ನವೆಂಬರ್ 17 ರಿಂದ ಪದವಿ ಕಾಲೇಜು ಆರಂಭ ಮಾಡಲಾಗುತ್ತೆ. ಇಂಜಿನಿಯರಿಂಗ್, ಡಿಪ್ಲೋಮಾ, ಪದವಿ ಕಾಲೇಜುಗಳು ಕೊವಿಡ್​ ಮಾರ್ಗಸೂಚಿ, ಮುಂಜಾಗ್ರತೆಯಿಂದ ಆರಂಭವಾಗಲಿವೆ. ಕ್ಲಾಸ್​ಗೆ ಹಾಜರಾಗಬಹುದಾ ಅಥವಾ ಆನ್ ಲೈನ್ ಕ್ಲಾಸ್​ಗೆ ಹಾಜರಾಗಬಹುದು ಎಂಬುವುದನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಬಹುದು. […]

ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್​ ಆಯ್ತು
Follow us on

ಬೆಂಗಳೂರು: 7 ತಿಂಗಳ ಬಳಿಕ ರಾಜ್ಯಾದ್ಯಂತ ಕಾಲೇಜು ಓಪನ್​ಗೆ ಡೇಟ್ ಫಿಕ್ಸ್ ಆಗಿದೆ. ನವೆಂಬರ್​ 17ರಿಂದ ಕಾಲೇಜುಗಳನ್ನು ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

ಸಿಎಂ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ನವೆಂಬರ್ 17 ರಿಂದ ಪದವಿ ಕಾಲೇಜು ಆರಂಭ ಮಾಡಲಾಗುತ್ತೆ. ಇಂಜಿನಿಯರಿಂಗ್, ಡಿಪ್ಲೋಮಾ, ಪದವಿ ಕಾಲೇಜುಗಳು ಕೊವಿಡ್​ ಮಾರ್ಗಸೂಚಿ, ಮುಂಜಾಗ್ರತೆಯಿಂದ ಆರಂಭವಾಗಲಿವೆ. ಕ್ಲಾಸ್​ಗೆ ಹಾಜರಾಗಬಹುದಾ ಅಥವಾ ಆನ್ ಲೈನ್ ಕ್ಲಾಸ್​ಗೆ ಹಾಜರಾಗಬಹುದು ಎಂಬುವುದನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಬಹುದು. ಯಾರಿಗೂ ಕೂಡಾ ತರಗತಿಗೆ ಹಾಜರಾಗಲು ಒತ್ತಾಯ ಇಲ್ಲ. ಹಾಸ್ಟೆಲ್​ಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತದೆ. ಪ್ರಾಕ್ಟಿಕಲ್ ಕ್ಲಾಸ್, ಲ್ಯಾಬ್​ಗಳಲ್ಲಿ ಮುಂಜಾಗ್ರತೆವಹಿಸಿ ಮೊದಲಿನಂತೆ ಎಲ್ಲವನ್ನೂ ಆರಂಭಿಸಲಾಗುತ್ತೆ ಎಂದು ಡಾ.ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ಪ್ರತಿ ಕಾಲೇಜಿನಲ್ಲಿ ಟಾಸ್ಕ್ ಫೋರ್ಸ್:
ಅಲ್ಲದೆ ಯುಜಿಸಿ ಮಾರ್ಗಸೂಚಿ ಪ್ರಕಾರ ನವೆಂಬರ್​ನಲ್ಲಿ ಆಫ್ ಲೈನ್ ಕ್ಲಾಸ್ ಆರಂಭಕ್ಕೆ ಅವಕಾಶ ಇದೆ. ಎಲ್ಲಾ ಪೂರ್ವಭಾವಿ ಸಭೆ ಸಾಕಷ್ಟು ನಡೆಸಿ ನಿರ್ಧಾರ ಮಾಡಲಾಗಿದೆ. ಪಿಜಿ ಕಾಲೇಜುಗಳು ಕೂಡಾ ಆರಂಭವಾಗುತ್ತೆ. ಮಾರ್ಗಸೂಚಿ ಉನ್ನತ ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಪ್ರಕಟನೆ ಹೊರಡಿಸಲಾಗುತ್ತೆ. ಪ್ರತಿ ಕಾಲೇಜಿನಲ್ಲಿ ಜಿಲ್ಲಾಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತೆ. ಮಕ್ಕಳು ತರಗತಿಗೆ ಬರಲು ಪೋಷಕರ ಲಿಖಿತ ಅನುಮತಿ ಬೇಕು. ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಿಫ್ಟ್, ಬ್ಯಾಚ್ ಎಲ್ಲಾ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ನವೆಂಬರ್ 17 ರಂದು ಸಿಎಂ ಲರ್ನಿಂಗ್ ಮ್ಯಾನೇಜ್ಮೆಂಟ್ ಪೋರ್ಟಲ್ ಲಾಂಚ್ ಮಾಡುತ್ತಾರೆ.

ಕಾಲೇಜುಗಳ ಪಠ್ಯಕ್ರಮ ಕಡಿತ ಮಾಡದಿರಲು ಸರ್ಕಾರ ಚಿಂತನೆ:
ಸರ್ಕಾರ ಕಾಲೇಜುಗಳ ಪಠ್ಯಕ್ರಮ ಕಡಿತ ಮಾಡದಿರಲು ಚಿಂತಿಸಿದೆ. ಇಯರ್ ಆಫ್ ಕ್ಯಾಲೆಂಡರ್ ಬದಲಾಯಿಸದಿರಲು ನಿರ್ಧರಿಸಿದೆ. ಈಗಾಗ್ಲೇ 1ನೇ ತರಗತಿಯಿಂದ ಪಿಯುವರೆಗೆ ಪಠ್ಯಕಡಿತ ಆಗಿದೆ. ಪದವಿ, ಪಿಜಿ, ಇಂಜಿನಿಯರಿಂಗ್ ಪಠ್ಯಕ್ರಮದಲ್ಲಿ ಕಡಿತವಿಲ್ಲ. ಆದರೆ 1, 3, 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕೆಲವು ರಿಯಾಯಿತಿ ನೀಡಲಾಗುತ್ತೆ. ಈ ಸೆಮಿಸ್ಟರ್​ಗೆ ಮಾತ್ರ ಪಠ್ಯೇತರ, ಅಸೆಸ್​ಮೆಂಟ್ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆಸಿದೆ.

ಕೊವಿಡ್ ನಿಯಂತ್ರಣಕ್ಕೆ ಬಂದ್ರೆ ರಜಾದಿನಗಳಲ್ಲೂ ತರಗತಿ:
ಇನ್ನು ಯುಜಿಸಿಯ ಗೈಡ್ ಲೈನ್ಸ್ ಆಧಾರದ ಮೇಲೆ ಪದವಿ ತರಗತಿ ಶುರುವಾಗಲಿದ್ದು, ನವೆಂಬರ್ 17ರಿಂದ 90 ದಿನಗಳ ಕಾಲ ಮೊದಲ ಸೆಮಿಸ್ಟರ್, ಫೆಬ್ರವರಿಯಲ್ಲಿ ಮೊದಲ, 3ನೇ, ಐದನೇ ಸೆಮಿಸ್ಟರ್ ಪರೀಕ್ಷೆ, ಮಾರ್ಚ್​ನಿಂದ 2, 5, 6ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿವೆ. ಕೊವಿಡ್ ನಿಯಂತ್ರಣಕ್ಕೆ ಬಂದ್ರೆ ಭಾನುವಾರ, ರಜಾ ದಿನಗಳಲ್ಲೂ ತರಗತಿ ನಡೆಸಲು ಚಿಂತಿಸಲಾಗಿದೆ.

Published On - 12:24 pm, Fri, 23 October 20