ತಾಯಿಯ ಕತ್ತು ಹಿಸುಕಿ ಸಾಯ್ಸಿ, ಮೃತ ದೇಹದ ಬಳಿ ಕೂತು ಕಣ್ಣೀರು ಹಾಕಿದ ಮಗರಾಯ?
ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯ 4ನೇ ಕ್ರಾಸ್‌ನಲ್ಲಿ ವೃದ್ಧೆಯ ಕೊಲೆಯಾಗಿದ್ದು, ಮದ್ಯದ ಅಮಲಿನಲ್ಲಿ ಪುತ್ರನೇ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾಶಿಬಾಯಿ ಭರಮಪ್ಪ ಕದಾಂಪುರ(62) ಮೃತ ವೃದ್ಧೆ. ರವಿ ಕದಾಂಪುರ(40) ಮೃತ ವೃದ್ಧೆಯ ಮಗ. ಈತ ತನ್ನ ತಾಯಿಯ ದೇಹದ ಮುಂದೆ ಕೂತು ತಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕಣ್ಣೀರು ಹಾಕುತ್ತಿದ್ದಾನೆ. ಆದ್ರೆ ಮದ್ಯದ ಅಮಲಿನಲ್ಲಿ ಈತನೇ ತನ್ನ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಏಕೆಂದರೆ ಮೃತ ವೃದ್ಧೆಯ ಕುತ್ತಿಗೆ […]
ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯ 4ನೇ ಕ್ರಾಸ್‌ನಲ್ಲಿ ವೃದ್ಧೆಯ ಕೊಲೆಯಾಗಿದ್ದು, ಮದ್ಯದ ಅಮಲಿನಲ್ಲಿ ಪುತ್ರನೇ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾಶಿಬಾಯಿ ಭರಮಪ್ಪ ಕದಾಂಪುರ(62) ಮೃತ ವೃದ್ಧೆ.
ರವಿ ಕದಾಂಪುರ(40) ಮೃತ ವೃದ್ಧೆಯ ಮಗ. ಈತ ತನ್ನ ತಾಯಿಯ ದೇಹದ ಮುಂದೆ ಕೂತು ತಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕಣ್ಣೀರು ಹಾಕುತ್ತಿದ್ದಾನೆ. ಆದ್ರೆ ಮದ್ಯದ ಅಮಲಿನಲ್ಲಿ ಈತನೇ ತನ್ನ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಏಕೆಂದರೆ ಮೃತ ವೃದ್ಧೆಯ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ಗುರುತುಗಳು ಕಾಣಿಸಿವೆ. ಹೀಗಾಗಿ ಮಗನೇ ಸಾಯಿಸಿ ಡ್ರಾಮ ಮಾಡ್ತಿದ್ದಾನ ಎಂಬ ಅನುಮಾನ ಕಾಡುತ್ತಿದೆ. ಸದ್ಯ ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 1:12 pm, Fri, 23 October 20