ಕೊರೊನಾ ಕಾಲದಲ್ಲೂ ಕರ್ನಾಟಕವೇ ನಂ.1 :ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ
ಬೆಂಗಳೂರು: ಮಹಾಮಾರಿ ಕೊರೊನಾ ಇಡೀ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಕರ್ನಾಟಕ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು (FDI) ಆಕರ್ಷಿಸಿದ್ದು, ಈ ಬಗ್ಗೆ ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕ ಹೂಡಿಕೆದಾರರಿಗೆ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿ ಮುಂದುವರೆದಿದ್ದು 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (FDI) ಆಕರ್ಷಿಸಿದೆ. ಕೊರೊನಾ ಮಹಾಮಾರಿಯ ತಂದೊಡ್ಡಿರುವ […]

ಬೆಂಗಳೂರು: ಮಹಾಮಾರಿ ಕೊರೊನಾ ಇಡೀ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಕರ್ನಾಟಕ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು (FDI) ಆಕರ್ಷಿಸಿದ್ದು, ಈ ಬಗ್ಗೆ ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಹೂಡಿಕೆದಾರರಿಗೆ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿ ಮುಂದುವರೆದಿದ್ದು 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (FDI) ಆಕರ್ಷಿಸಿದೆ. ಕೊರೊನಾ ಮಹಾಮಾರಿಯ ತಂದೊಡ್ಡಿರುವ ಸವಾಲುಗಳ ನಡುವೆಯೂ, ಈ 3 ತಿಂಗಳಲ್ಲಿ ರಾಜ್ಯದಲ್ಲಿ 10,255 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ಸಿಎಂ BSY ತಿಳಿಸಿದ್ದಾರೆ.
ಇನ್ನು, ಭಾರತದ ಮೊದಲ ವಲಯದಲ್ಲಿ ನಿರ್ದಿಷ್ಟ 3,540 ಕೋಟಿ ರೂಪಾಯಿ ಹೂಡಿಕೆಯಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಸರಕುಗಳ ಕ್ಲಸ್ಟರ್ ಹುಬ್ಬಳ್ಳಿಯಲ್ಲಿ ತಲೆಯೆತ್ತಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಗೆ ಅನುಗುಣವಾಗಿ ಇಲ್ಲಿ ವಿಶ್ವದರ್ಜೆಯ ಸೌಲಭ್ಯ ಲಭ್ಯವಾಗಲಿದೆ.
ಇದರಿಂದ ರಾಜ್ಯದಲ್ಲಿ 20 ಸಾವಿರ ಉದ್ಯೋಗಳು ಸೃಷ್ಟಿಯಾಗಲಿದೆ. ಅಭಿವೃದ್ಧಿಗೆ ಪೂರಕವಾಗಿರುವ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಕರ್ನಾಟಕ ಪ್ರೋತ್ಸಾಹಿಸುತ್ತಲೇ ಬಂದಿದೆ. ನಗರ ಚಲನಶೀಲತೆ, ಉಪಗ್ರಹ ತಂತ್ರಜ್ಞಾನ, ಸಾವಯವ ಕೃಷಿ, ಆಗ್ಮೆಂಟೆಡ್ ರಿಯಾಲಿಟಿ ಮೊದಲಾದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಕರ್ನಾಟಕದ 15 ನವೋದ್ಯಮಗಳು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಅಭಿವೃದ್ಧಿಗೆ ಪೂರಕವಾಗಿರುವ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಕರ್ನಾಟಕ ಪ್ರೋತ್ಸಾಹಿಸುತ್ತಲೇ ಬಂದಿದೆ. ನಗರ ಚಲನಶೀಲತೆ, ಉಪಗ್ರಹ ತಂತ್ರಜ್ಞಾನ, ಸಾವಯವ ಕೃಷಿ, ಆಗ್ಮೆಂಟೆಡ್ ರಿಯಾಲಿಟಿ ಮೊದಲಾದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಕರ್ನಾಟಕದ 15 ನವೋದ್ಯಮಗಳು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ. (3/3)
— B.S. Yediyurappa (@BSYBJP) October 23, 2020
Published On - 12:21 pm, Fri, 23 October 20




