ಬೆಂಗಳೂರು: 8 ತಿಂಗಳ ಬಳಿಕ ರಾಜ್ಯದಲ್ಲಿ ಇಂದಿನಿಂದ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳ ಬಾಗಿಲು ತೆರೆಯುತ್ತಿದ್ದು ವಿದ್ಯಾರ್ಥಿಗಳು ಮತ್ತೆ ಕಾಲೇಜುಗಳತ್ತ ಮುಖ ಮಾಡಲಿದ್ದಾರೆ. ಕೊವಿಡ್ ನಿಯಮ ಪಾಲಿಸಿ ಕಾಲೇಜು ಆರಂಭಿಸಲು ಸಿದ್ಧತೆ ನಡೆದಿದೆ.
ಕೊವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ವಿದ್ಯಾರ್ಥಿಗಳನ್ನು ತರಗತಿಗೆ ಅನುಮತಿ ನೀಡಲಾಗುತ್ತೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ತರಗತಿಗೆ ಅನುಮತಿ ಇರೋದಿಲ್ಲ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪೋಷಕರ ಅನುಮತಿ ಪತ್ರ ಖಡ್ಡಾಯ. ಆ ಪತ್ರದೊಂದಿಗೆ ಕಾಲೇಜಿಗೆ ಹೋಗಬೇಕು. ಪೋಷಕರು, ವಿದ್ಯಾರ್ಥಿಗಳು ಒಪ್ಪದಿದ್ದರೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳಬಹುದು.
ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಗೈಡ್ ಲೈನ್ಸ್
1. ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಡ್ಡಾಯ
2. ಕಾಲೇಜು ಪ್ರಾರಂಭಕ್ಕೆ 3 ದಿನ ಮುಂಚೆ ಕೊವಿಡ್ ಟೆಸ್ಟ್
3. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೊವಿಡ್ ಟೆಸ್ಟ್ ಕಡ್ಡಾಯ
4. ಸಾಮಾಜಿಕ ಅಂತರ 6 ಅಡಿಯಷ್ಟು ಪಾಲನೆ ಮಾಡ್ಬೇಕು
5. ಶುಚಿತ್ವ, ಶುದ್ದ ಕುಡಿಯುವ ನೀರು ಕಡ್ಡಾಯ
6. ಕಾಲೇಜು ಆವರಣವನ್ನ ಸ್ವಚ್ಛ ವಾಗಿಟ್ಟುಕೊಳ್ಳಬೇಕು
7. ಖಾಸಗಿ ವಾಹನಗಳು, ಕಾಲೇಜು ಬಸ್ಗಳನ್ನ ಸತತವಾಗಿ ಸ್ಯಾನಿಟೈಸ್ ಮಾಡಬೇಕು
8. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನಕೊಡೋಕೆ ಕಡ್ಡಾಯ ಆರೋಗ್ಯ ಸಮಿತಿ ರಚನೆ ಮಾಡ್ಬೇಕು
9. ಕಾಲೇಜು ಆವರಣರಲ್ಲಿ ಉಗುಳುವುದನ್ನ ಕಡ್ಡಾಯವಾಗಿ ನಿಷೇಧ
10. ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಇನ್ ಸ್ಟಾಲ್ ಮಾಡ್ಬೇಕು
Published On - 9:06 am, Tue, 17 November 20