ಗದಗ, ಅ.24: ಆ ಗ್ರಾಮದಲ್ಲಿ ದಸರಾ ಹಬ್ಬದ ದಿನ ಮದುವೆ ಸಂಭ್ರಮ ಜೋರಾಗಿತ್ತು. ಯಾವ ಮದುವೆಗೂ ಈ ಜೋಡಿಗಳ ಮದುವೆ ಸಂಭ್ರಮ ಕಡಿಮೆಯಿಲ್ಲ. ಸಾಂಪ್ರದಾಯಿಕವಾಗಿ ನಡೆದ ಅದ್ಧೂರಿ ಮದುವೆಯಲ್ಲಿ, ಇಡೀ ಗ್ರಾಮಸ್ಥರೇ ಸೇರಿದ್ದರು. ಈ ಜೋಡಿಗಳ ಮದುವೆ ಮಾಡಿ ಅನ್ನದಾತರು ಮಳೆಗಾಗಿ ಪ್ರಾರ್ಥನೆ ಮಾಡಿದರು. ಹೌದು, ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಕಷ್ಟಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಹೀಗಾಗಿ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಲಾದ್ರೂ ಮಳೆರಾಯನ ಕೃಪೆಗಾಗಿ ಕಾಯುತ್ತಿದ್ದಾರೆ. ಮಳೆಯಾದ್ರು ಹಿಂಗಾರು ಬೆಳೆಯಾದ್ರೂ ಬರುತ್ತೆ. ಬದುಕಿನ ಬಂಡಿ ಸಾಗುತ್ತೆ ಅಂತ ಪರಿತಪಿಸುತ್ತಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ತಿಮ್ಮಾಪೂರ ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಕತ್ತೆಗಳ ಮದುವೆ ಇಡೀ ರೈತ ಸಮೂಹದ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಮದುವೆ ಮಾಡಿದರು. ಕತ್ತೆಗಳ ಮದುವೆ ಕಾಟಾಚಾರಕ್ಕೆ ಮಾಡಿಲ್ಲ. ಎಲ್ಲ ಮದುವೆಗಳಂತೆ ಶಿಸ್ತು, ಬದ್ಧ, ಸಾಂಪ್ರದಾಯಿಕವಾಗಿ ಮಾಡಲಾಯಿತು. ಮದುವೆಯ ಹಿನ್ನೆಲೆಯಲ್ಲಿ ಸಂಪ್ರದಾಯದ ಪ್ರಕಾರ ಮಹಿಳೆಯರು ಹೂಗಾರರ ಮನೆಯಿಂದ ಭಾಸಿಂಗ್ ತರಲಾಯಿತು.
ಕತ್ತೆಗಳಿಗೆ ಮೊದ್ಲು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಲಾಯಿತು. ಬಳಿಕ ಎರಡು ಕತ್ತೆಗಳಿಗೆ ಶಂಗಾರ ಮಾಡಲಾಯಿತು. ಗಂಟಿಗೆ ಭಾಸಿಂಗ್ ಶಂಗಾರ ಮಾಡಿದ್ರೆ. ಹೆಣ್ಣು ಕತ್ತೆ ಹೂವಿನ ದಂಡಿ ಕಟ್ಟಿ ಶೃಂಗಾರ ಮಾಡಿದ್ರು. ಬಳಿದ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ನೂರಾರು ಜನ್ರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡಿ ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ