Mysore Dasara: ಜಂಬೂ ಸವಾರಿಗೆ ಶುರುವಾಗುವ ಮುನ್ನ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಸಿದ್ದರಾಮಯ್ಯ ಮತ್ತು ಇತರ ಗಣ್ಯರು
Mysore Dasara, ಪುಷ್ಪಾರ್ಚನೆಯ ಬಳಿಕ ತೋಪುಗಳನ್ನು ಸಿಡಿಲಾಯಿತು. ತೋಪುಗಳಿಂದ ಸಿಡಿಮದ್ದನ್ನು ಸಿಡಿಸುವಾಗ ಮಹದೇವಪ್ಪ ಮತ್ತು ಅಲ್ಲಿ ನೆರೆದಿದ್ದ ಹಲವಾರು ಜನ ಗೌರವಾರ್ಥ ಸೆಲ್ಯೂಟ್ ಮಾಡಿದರು. ಬಳಿಕ ಸಿದ್ದರಾಮಯ್ಯ ಮತ್ತು ಇತರ ಗಣ್ಯರು ನಡು ಬಗ್ಗಿಸಿ ಚಾಮುಂಡೇಶ್ವರಿಗೆ ನಮಸ್ಕರಿಸುತ್ತಿದ್ದಂತೆಯೇ ಅಭಿಮನ್ಯು ಮತ್ತವನ ಪಡೆಯ ಜಂಬೂ ಸವಾರಿ ವಿದ್ಯುಕ್ತವಾಗಿ ಆರಂಭವಾಯಿತು.
ಮೈಸೂರು: ಅರಮನೆ ಆವರಣದಲ್ಲಿ ಭಾರೀ ತೂಕದ ಚಿನ್ನದ ಅಂಬಾರಿಯನ್ನು ಸೆಟ್ಲ್ ಮಾಡಿದ ಅದರಲ್ಲಿ ವಿರಾಜಮಾನಳಾಗಿದ್ದ ನಾಡದೇವತೆಗೆ ಚಾಮುಂಡೇಶ್ವರಿಗೆ (Chamundeshwari) ಪುಷ್ಪಾರ್ಚನೆ ಮಾಡಲಾಯಿತು. ಪುಷ್ಪಾರ್ಚನೆ ಮಾಡುವ ಸಂಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೆಳಗ್ಗೆಯೇ ಹೇಳಿದ್ದರು. ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವರನ್ನು ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಸಿದ್ದರಾಮಯ್ಯ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ, ಮೈಸೂರು ಒಡೆಯರ್ ಸಂಸ್ಥಾನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರಿನ ಮಹಾಪೌರ ಮೊದಲಾದವರಿದ್ದರು. ಪುಷ್ಪಾರ್ಚನೆಯ ಬಳಿಕ ತೋಪುಗಳನ್ನು ಸಿಡಿಲಾಯಿತು. ತೋಪುಗಳಿಂದ ಸಿಡಿಮದ್ದನ್ನು ಸಿಡಿಸುವಾಗ ಮಹದೇವಪ್ಪ ಮತ್ತು ಅಲ್ಲಿ ನೆರೆದಿದ್ದ ಹಲವಾರು ಜನ ಗೌರವಾರ್ಥ ಸೆಲ್ಯೂಟ್ ಮಾಡಿದರು. ಬಳಿಕ ಸಿದ್ದರಾಮಯ್ಯ ಮತ್ತು ಇತರ ಗಣ್ಯರು ನಡು ಬಗ್ಗಿಸಿ ಚಾಮುಂಡೇಶ್ವರಿಗೆ ನಮಸ್ಕರಿಸುತ್ತಿದ್ದಂತೆಯೇ ಅಭಿಮನ್ಯು ಮತ್ತವನ ಪಡೆಯ ಜಂಬೂ ಸವಾರಿ ವಿದ್ಯುಕ್ತವಾಗಿ ಆರಂಭವಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ