Mysore Dasara: ಅಭಿಮನ್ಯು ಹೊತ್ತ ಚಿನ್ನದ ಅಂಬಾರಿಯ ಭಾರವೆಷ್ಟು ಗೊತ್ತಾ? ಬರೋಬ್ಬರಿ 750 ಕೇಜಿ!

Mysore Dasara: ಅಭಿಮನ್ಯು ಹೊತ್ತ ಚಿನ್ನದ ಅಂಬಾರಿಯ ಭಾರವೆಷ್ಟು ಗೊತ್ತಾ? ಬರೋಬ್ಬರಿ 750 ಕೇಜಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 24, 2023 | 5:49 PM

Mysore Dasara, ಇತಿಹಾಸಕಾರ ಮತ್ತು ಒಡೆಯರ್ ಅರಸೊತ್ತಿಗೆ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಪ್ರೊಫೆಸರ್ ನಂಜರಾಜ ಅರಸ್ ಅವರು ಹೇಳುವ ಪ್ರಕಾರ ಅಂಬಾರಿ ತಯಾರಿಸಲು ಬರೋಬ್ಬರಿ 750 ಕೆಜಿ ಬಂಗಾರವನ್ನು ಬಳಸಲಾಗಿದೆ. ಹಾಗಾಗಿ, ಅಭಿಮನ್ಯು ಹೊತ್ತಿರುವ ಅಂಬಾರಿಯ ಭಾರ 750 ಕೆಜೆಗಿಂತ ಜಾಸ್ತಿಯೇ ಹೊರತು ಕಮ್ಮಿ ಮಾತ್ರ ಇಲ್ಲ.

ಮೈಸೂರು: ನಗರದ ರಾಜಬೀದಿಗಳಲ್ಲಿ ಐತಿಹಾಸಿಕ ಜಂಬೂ ಸವಾರಿ (iconic Jumbo Savari) ವಿಜೃಂಭಣೆಯಿಂದ ನಡೆಯುತ್ತಿದೆ. ಅದಕ್ಕೂ ಮೊದಲು ಚಿನ್ನದ ಅಂಬಾರಿಯನ್ನು ಅಭಿಮನ್ಯು (Abimanyu) ಬೆನ್ನ ಮೇಲೆ ಹೇಗೆ ಇರಿಸಲಾಯಿತು ಅನ್ನೋದನ್ನು ನೋಡಿ. ಇದು ಚಿನ್ನದಿಂದ ಮಾಡಿದ ಅಂಬಾರಿ (Howdah made of pure gold) ಅಂತ ನಿಮಗೆ ಗೊತ್ತಿದೆ. ಅದು ಸರಿ, ಅಂಬಾರಿಯ ತೂಕ ಎಷ್ಟಿರಬಹುದೆಂದು ಊಹಿಸಬಲ್ಲಿರಾ? ಹಾಗೆ ನೋಡಿದರೆ, ಅಂಬಾರಿಯನ್ನು ತಯಾರಿಸಲು ಎಷ್ಟು ಹೊನ್ನನ್ನು ಬಳಸಲಾಗಿದೆ ಅನ್ನೋದಿಕ್ಕೆ ನಿರ್ದಿಷ್ಟ ಮತ್ತು ನಿಖರವಾದ ಮಾಹಿತಿ ಇಲ್ಲ. ಇದನ್ನು ಸಂಪೂರ್ಣವಾಗಿ ಚಿನ್ನದಿಂದ ಮಾಡಲಾಗಿದೆ, ಎಲ್ಲೂ ಕಟ್ಟಿಗೆಯನ್ನು ಬಳಸಿಲ್ಲ. ತಾಯಿ ಚಾಮುಂಡೇಶ್ವರಿ ಅಸನಕ್ಕಾಗಿ ಮಾತ್ರ ಕುಷನ್ ಬಳಸಲಾಗಿದೆ. ಅರಮನೆ ಮೂಲಗಳ ಪ್ರಕಾರ 80 ಕೇಜಿಯಷ್ಟು ಚಿನ್ನವನ್ನು ಅಂಬಾರಿ ತಯಾರಿಕೆಯಲ್ಲಿ ಬಳಸಲಾಗಿದೆ. ಆದರೆ, ಇತಿಹಾಸಕಾರ ಮತ್ತು ಒಡೆಯರ್ ಅರಸೊತ್ತಿಗೆ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಪ್ರೊಫೆಸರ್ ನಂಜರಾಜ ಅರಸ್ ಅವರು ಹೇಳುವ ಪ್ರಕಾರ ಅಂಬಾರಿ ತಯಾರಿಸಲು ಬರೋಬ್ಬರಿ 750 ಕೆಜಿ ಬಂಗಾರವನ್ನು ಬಳಸಲಾಗಿದೆ. ಹಾಗಾಗಿ, ಅಭಿಮನ್ಯು ಹೊತ್ತಿರುವ ಅಂಬಾರಿಯ ಭಾರ 750 ಕೆಜೆಗಿಂತ ಜಾಸ್ತಿಯೇ ಹೊರತು ಕಮ್ಮಿ ಮಾತ್ರ ಇಲ್ಲ. ಅಷ್ಟು ಭಾರವಿರುವ ಕಾರಣಕ್ಕಾಗೇ ಅದನ್ನು ಅನೆಯ ಬೆನ್ನಿಗೇರಿಸಲು ಇಷ್ಟೆಲ್ಲ ಕಸರತ್ತು ಮಾಡಬೇಕಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ