Mysore Dasara: ಅಂಬಾರಿ ಹೊರಲು ಅರಮನೆಗೆ ಆಗಮಿಸಿದ ಅಭಿಮನ್ಯುನ ನಡಿಗೆ ಗತ್ತು ಒಮ್ಮೆ ನೋಡಿ, ಎಲ್ಲರ ದೃಷ್ಟಿ ತನ್ನ ಮೇಲಿದೆ ಅಂತ ಅವನಿಗೆ ಗೊತ್ತು!
Mysore Dasara: ಅಭಿಮನ್ಯು ನೇರವಾಗಿ ನಡೆದು ಅರಮನೆ ದ್ವಾರದ ಬಳಿ ಹೋಗುವ ಮೊದಲು ಅಲ್ಲಿ ನೆರೆದ ಸಾವಿರಾರು ಜನಕ್ಕೆ ಸೊಂಡಿಲೆತ್ತಿ ಪೊಡಮಡುತ್ತಾನೆ. ಜನರೆಲ್ಲ ಹೋಯ್ ಅಂತ ಕೂಗುತ್ತಾ ಅವನ ವಂದನೆ ಸ್ವೀಕರಿಸುತ್ತಾರೆ. ಅಭಿಮನ್ಯು ಅಗಮಕ್ಕಾಗಿ ಕಾಯುತ್ತಿದ್ದ ನೃತ್ಯ ತಂಡದವರು ಅವನು ಹತ್ತಿರಕ್ಕೆ ಬರುತ್ತಲೇ ಕುಣಿತ ಆರಂಭಿಸುತ್ತಾರೆ.
ಮೈಸೂರು: ಗಜ ಗಾಂಭೀರ್ಯ ಅಂತ ಹೇಳೋದ್ಯಾಕೆ ಅನ್ನೋದು ಅಭಿಮನ್ಯು (Abhimanyu) ಅರಮನೆ ಕಡೆ ಬರೋದನ್ನು ನಡೆದು ನೋಡುತ್ತಿದ್ದರೆ ಗೊತ್ತಾಗುತ್ತದೆ. ಅದೇನು ನಡಿಗೆ, ನಡಿಗೆಯಲ್ಲಿ ಅದೇನು ಗಾಂಭೀರ್ಯ! ಎಲ್ಲರ ದೃಷ್ಟಿ ತನ್ನ ಮೇಲಿದೆ ಅನ್ನೋದು ಅವನಿಗೆ ಗೊತ್ತಿರುವಂತಿದೆ!! ತನ್ನ ಹೆಗಲ ಮೇಲೆ ಭಾರೀ ತೂಕದ ಅಂಬಾರಿಯನ್ನು (howdah) ಹೊತ್ತು ಜಂಬೂ ಸವಾರಿಗೆ (Jumbo Savari) ಹೊರಡಲು ಅಭಿಮನ್ಯು ಅರಮನೆಗೆ ಬಂದಿದ್ದು ಹೀಗೆ. ಕಲಾವಿದರು ಅಭಿಮನ್ಯುವನ್ನು ಸಿಂಗರಿಸಿರುವ ರೀತಿಯನ್ನೊಮ್ಮೆ ನೋಡಿ ಮಾರಾಯ್ರೇ. ಸೊಂಡಿಲು, ಮೊರದಗಲ ಕಿವಿ, ಕಂಬದಂಥ ಕಾಲುಗಳು ಸೇರಿದಂತೆ ಮೊಂಡು ಬಾಲಕ್ಕೂ ಸಿಂಗಾರ ಮಾಡಲಾಗಿದೆ. ಅವನ ಭಾರೀ ದೇಹದ ಮೇಲೆ ದೊಡ್ಡ ಸೈಜಿನ ನೀಲಿವರ್ಣದ ಶಲ್ಯ ಹೊದಿಸಲಾಗಿದೆ. ಅಭಿಮನ್ಯು ನೇರವಾಗಿ ನಡೆದು ಅರಮನೆ ದ್ವಾರದ ಬಳಿ ಹೋಗುವ ಮೊದಲು ಅಲ್ಲಿ ನೆರೆದ ಸಾವಿರಾರು ಜನಕ್ಕೆ ಸೊಂಡಿಲೆತ್ತಿ ಪೊಡಮಡುತ್ತಾನೆ. ಜನರೆಲ್ಲ ಹೋಯ್ ಅಂತ ಕೂಗುತ್ತಾ ಅವನ ವಂದನೆ ಸ್ವೀಕರಿಸುತ್ತಾರೆ. ಅಭಿಮನ್ಯು ಅಗಮಕ್ಕಾಗಿ ಕಾಯುತ್ತಿದ್ದ ನೃತ್ಯ ತಂಡದವರು ಅವನು ಹತ್ತಿರಕ್ಕೆ ಬರುತ್ತಲೇ ಕುಣಿತ ಆರಂಭಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ