ಮನೆಯವರ ನೇರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಗಳಗಳನೆ ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್
2ನೇ ವಾರದಲ್ಲಿ ಸ್ವಲ್ಪ ಚಿಗುರಿಕೊಂಡಿದ್ದ ಡ್ರೋನ್ ಪ್ರತಾಪ್ ಅವರು ಮೂರನೇ ವಾರದಲ್ಲಿ ಮತ್ತೆ ಕುಗ್ಗಿದಂತಿದೆ. ಮನೆಯ ಸದಸ್ಯರೆಲ್ಲರೂ ಸೇರಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ನೇರವಾಗಿ ಕೇಳಿದ್ದಾರೆ. ಆದರೆ ಅವುಗಳಿಗೆ ಉತ್ತರಿಸುವ ಸಮಯದಲ್ಲಿ ಪ್ರತಾಪ್ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.
ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಟಾರ್ಗೆಟ್ ಆಗಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅವರನ್ನು ಮೊದಲ ವಾರದಲ್ಲೇ ಕೆಲವರು ಲೇವಡಿ ಮಾಡಿದ್ದರು. ಅದನ್ನು ಕಿಚ್ಚ ಸುದೀಪ್ ಖಂಡಿಸಿದ್ದರು. ಆ ಬಳಿಕ ಪ್ರತಾಪ್ ಕೊಂಚ ಧೈರ್ಯ ತಂದುಕೊಂಡಿದ್ದರು. ಆದರೆ ಮೂರನೇ ವಾರದಲ್ಲಿ ಅವರು ಮತ್ತೆ ಕುಗ್ಗಿದಂತಿದೆ. ದೊಡ್ಮನೆಯ ಸದಸ್ಯರೆಲ್ಲರೂ ಸೇರಿ ವಿನಯ್ ಗೌಡ ಮತ್ತು ಪ್ರತಾಪ್ (Drone Prathap) ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಪ್ರತಾಪ್ ಕಣ್ಣೀರು ಹಾಕಿದ್ದಾರೆ. ಈ ಪ್ರೋಮೋವನ್ನು ಕಲರ್ಸ್ ಕನ್ನಡ (Colors Kannada) ವಾಹಿನಿ ಹಂಚಿಕೊಂಡಿದೆ. ಸರಿಯಾಗಿ ಫೈಟ್ ಮಾಡದೇ ಪ್ರತಾಪ್ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾರೆ ಎಂದು ಕೆಲವು ಪ್ರೇಕ್ಷಕರು ಕಮೆಂಟ್ ಮಾಡಿದ್ದಾರೆ. ಮೂರನೇ ವಾರದಲ್ಲಿ ವಿನಯ್, ಭಾಗ್ಯಶ್ರೀ, ಪ್ರತಾಪ್, ಕಾರ್ತಿಕ್ ಮಹೇಶ್, ತನಿಶಾ ಕುಪ್ಪಂಡ, ಮೈಕೆಲ್ ಅಜಯ್, ಸ್ನೇಹಿತ್ ಹಾಗೂ ಈಶಾನಿ ನಾಮಿನೇಟ್ ಆಗಿದ್ದಾರೆ. ‘ಜಿಯೋ ಸಿನಿಮಾ’ ಮೂಲಕ ಈ ಕಾರ್ಯಕ್ರಮವನ್ನು 24 ಗಂಟೆಯೂ ಉಚಿತವಾಗಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.