ಅಜ್ಜ ಅಜ್ಜಿ ನೆನಪಿಗಾಗಿ ಬಸ್ ನಿಲ್ದಾಣ ನಿರ್ಮಿಸಿದ ಮೊಮ್ಮಗ; ವ್ಯಕ್ತಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

|

Updated on: Apr 24, 2021 | 12:22 PM

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಪಾಂಡೇಶ್ವರದಲ್ಲಿ ಉಡುಪಿ-ಕುಂದಾಪುರ ಮಾರ್ಗದ ಈಶ್ವರಮಠದ ಎದುರು ದಿ| ನರಸಿಂಹ ತುಂಗ ಸ್ಮರಣಾರ್ಥ ಮತ್ತು ಕುಂದಾಪುರ-ಉಡುಪಿ ಮಾರ್ಗದಲ್ಲಿ ಚರ್ಚ್ ಶಾಲೆಯ ಪಕ್ಕದಲ್ಲಿ ದಿ| ನಾಗವೇಣಿಯಮ್ಮನವರ ಸ್ಮರಣಾರ್ಥ ತಂಗುದಾಣಗಳ ನಿರ್ಮಾಣವಾಗಿದೆ.

ಅಜ್ಜ ಅಜ್ಜಿ ನೆನಪಿಗಾಗಿ ಬಸ್ ನಿಲ್ದಾಣ ನಿರ್ಮಿಸಿದ ಮೊಮ್ಮಗ; ವ್ಯಕ್ತಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಅಜ್ಜ ಅಜ್ಜಿ ನೆನಪಿಗಾಗಿ ಕಟ್ಟಿದ ಬಸ್ ನಿಲ್ದಾಣ
Follow us on

ಉಡುಪಿ: ಪ್ರೀತಿ ಪಾತ್ರರ ನೆನಪು ಆಚಂದ್ರಾರ್ಕವಾಗಿ ಉಳಿಯುವ ಸಲುವಾಗಿ ನೆನಪಿನ ಕುರುಹುಗಳನ್ನು ರಾಜ ಮಹಾರಾಜರ ಕಾಲದಿಂದಲೂ ಕಟ್ಟಿಸುವ ವಾಡಿಕೆ ನಮ್ಮಲ್ಲಿ ನೋಡಬಹುದು. ವ್ಯಕ್ತಿಯೋರ್ವ ಸಮಾಜಕ್ಕೆ ನೀಡಿದ ಕೊಡುಗೆ, ತನ್ನವರಿಗೆ ನೀಡಿದ ಪ್ರೀತಿಯೇ ಇಂತಹ ಸ್ಮಾರಕಗಳ ನಿರ್ಮಾಣಕ್ಕೆ ಬಹು ಮುಖ್ಯವಾದ ಕಾರಣ. ಸದ್ಯ ಉಡುಪಿ ಜಿಲ್ಲೆಯಲ್ಲಿ ಮೊಮ್ಮಗನೋರ್ವ ತನ್ನ ಅಜ್ಜ- ಅಜ್ಜಿಯ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನೆರವಾಗಿವ ಹಾಗೆ ಬಸ್ ನಿಲ್ದಾಣ ನಿರ್ಮಿಸಿ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ‌. ಸಾಸ್ತಾನ ಪಾಂಡೇಶ್ವರದ ನಿವಾಸಿ ಪತ್ರಿಕಾ ವಿತರಕ ಚಂದ್ರಶೇಖರ್ ಮಯ್ಯ ಅವರೆ ತನ್ನ ಅಜ್ಜ-ಅಜ್ಜಿಯ ನೆನಪಿಗಾಗಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಸ್ತಾನ ಪಾಂಡೇಶ್ವರದಲ್ಲಿ ಎರಡು ಬಸ್ಸು ನಿಲ್ದಾಣ ನಿರ್ಮಿಸಿದ್ದಾರೆ.

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಪಾಂಡೇಶ್ವರದಲ್ಲಿ ಉಡುಪಿ-ಕುಂದಾಪುರ ಮಾರ್ಗದ ಈಶ್ವರಮಠದ ಎದುರು ದಿ| ನರಸಿಂಹ ತುಂಗ ಸ್ಮರಣಾರ್ಥ ಮತ್ತು ಕುಂದಾಪುರ-ಉಡುಪಿ ಮಾರ್ಗದಲ್ಲಿ ಚರ್ಚ್ ಶಾಲೆಯ ಪಕ್ಕದಲ್ಲಿ ದಿ| ನಾಗವೇಣಿಯಮ್ಮನವರ ಸ್ಮರಣಾರ್ಥ ತಂಗುದಾಣಗಳ ನಿರ್ಮಾಣವಾಗಿದೆ.

ನನ್ನ ಅಜ್ಜ ನರಸಿಂಹ ತುಂಗ ಹಾಗೂ ಅಜ್ಜಿ ನಾಗವೇಣಿಯಮ್ಮ ಹಲವು ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿಯು ಚಿಕ್ಕ ರಸ್ತೆಯಾಗಿದ್ದ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದವರಿಗೆ ಬಾಯಾರಿಕೆ ನೀಗಲು ಮನೆಯ ಮುಂದೆ ಬೆಲ್ಲ-ನೀರು ಹಾಗೂ ಕುಳಿತು ವಿಶ್ರಮಿಸಲು ಜಗಲಿಯ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಅಜ್ಜನ ಆದರ್ಶನವನ್ನು ಪ್ರೇರಣೆಯಾಗಿಸಿಕೊಂಡು ಈ ಪುಟ್ಟ ಕಾರ್ಯ ಮಾಡಿದ್ದೇನೆ ಎಂದು ಬಸ್ ನಿಲ್ದಾಣ ನಿರ್ಮಾತೃ ಚಂದ್ರಶೇಖರ ಮಯ್ಯ ಹೇಳಿದ್ದಾರೆ.

ವ್ಯಕ್ತಿಯಿಂದ ಹಿರಿಯರ ನೆನಪಿಗಾಗಿ ತಂಗುದಾಣ ಸ್ಥಾಪನೆ

ಒಟ್ಟಾರೆಯಾಗಿ ಅಜ್ಜ- ಅಜ್ಜಿ ಹೆಸರಿನಲ್ಲಿ ನಿರ್ಮಾಣವಾದ ಈ ಬಸ್ ನಿಲ್ದಾಣ ಸದ್ಯ ಪ್ರಯಾಣಿಕರಿಗೆ ನೆರವಾಗುತ್ತಿದೆ. ಅಜ್ಜನ ಆಸ್ತಿ ಸಾಕು ಆದರ್ಶ ಬೇಡ ಎನ್ನುವ ಈ ಕಾಲ ಘಟ್ಟದಲ್ಲಿ ಚಂದ್ರಶೇಖರ ಮಯ್ಯ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎನ್ನುವುದೇ ಟಿವಿ9 ಡಿಜಿಟಲ್​ನ ಆಶಯ.

ಇದನ್ನೂ ಓದಿ:

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

ರಾಮಚಂದ್ರಾಪುರ ಮಠದಿಂದ ಕೈ ಜಾರಿದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ; ದೇಗುಲವನ್ನು ಮುಜರಾಯಿ ಇಲಾಖೆಗೆ ಹಿಂದಿರುಗಿಸಲು ಸುಪ್ರೀಂ ಆದೇಶ

(Grandson built a bus stop in memory of his grand mother and grand father in udupi)