ಕೊರೊನಾ ಎಫೆಕ್ಟ್: 15 ಕೆಜಿ ಟೊಮ್ಯಾಟೋಗೆ ಕೇವಲ 15 ರೂಪಾಯಿ; ಮನನೊಂದ ರೈತನಿಂದ ಫಸಲು ತುಂಬಿದ ಹೊಲ ನಾಶ
ಸುಮಾರು ₹3 ಲಕ್ಷ ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದ ಕಟಮಾಚನಹಳ್ಳಿ ಗ್ರಾಮದ ರೈತ ಶ್ರೀನಿವಾಸಪ್ಪ ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ಕೊರೊನಾ ಕಾರಣದಿಂದ 15 ಕೆಜಿ ಟೊಮ್ಯಾಟೊ ಕ್ರೇಟ್‌ಗೆ ಕೇವಲ 15 ರೂ ಸಿಗುತ್ತಿದ್ದು ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ.
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರ್ಫ್ಯೂ ಪರಿಣಾಮದಿಂದಾಗಿ ಕೆಲ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಅತ್ತ ಕರ್ಫ್ಯೂ ವಿಧಿಸದಿದ್ದರೆ ಕೊರೊನಾ ಭಯ, ಇತ್ತ ವಿಧಿಸಿದರೆ ಬೆಲೆ ಸಿಗದೇ ಪರದಾಡಬೇಕಾದ ಭಯ ರೈತರನ್ನು ಆವರಿಸಿದ್ದು, ಅನೇಕರು ಹೈರಾಣಾಗಿದ್ದಾರೆ. ಇದರಿಂದ ಬೇಸತ್ತ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕಟಮಾಚನಹಳ್ಳಿ ಗ್ರಾಮದ ರೈತರೊಬ್ಬರು ತಾವು ಬೆಳೆದ ಟೊಮ್ಯಾಟೋ ಬೆಳೆಯನ್ನು ನಾಶ ಮಾಡಿದ್ದಾರೆ.
ಸುಮಾರು ₹3 ಲಕ್ಷ ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದ ಕಟಮಾಚನಹಳ್ಳಿ ಗ್ರಾಮದ ರೈತ ಶ್ರೀನಿವಾಸಪ್ಪ ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ಕೊರೊನಾ ಕಾರಣದಿಂದ 15 ಕೆಜಿ ಟೊಮ್ಯಾಟೊ ಕ್ರೇಟ್‌ಗೆ ಕೇವಲ 15 ರೂ ಸಿಗುತ್ತಿದ್ದು ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ. ಹೀಗಾಗಿ ಸೂಕ್ತ ಬೆಲೆಗೆ ಟೊಮ್ಯಾಟೋ ಕೊಳ್ಳುವವರಿಲ್ಲವೆಂದು ಬೇಸತ್ತ ರೈತ ಫಸಲು ತುಂಬಿದ್ದ ಹೊಲವನ್ನೇ ನಾಶ ಮಾಡಿದ್ದಾರೆ.
ಕಳೆದ ಬಾರಿಯೂ ಲಾಕ್ಡೌನ್ ಸಂದರ್ಭದಲ್ಲಿ ಅನೇಕ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದೇ, ಕೊಳ್ಳುವ ಗ್ರಾಹಕರಿಲ್ಲದೇ ನಷ್ಟ ಎದುರಾಗಿತ್ತು. ಕಳೆದ ವರ್ಷ ಅನುಭವಿಸಿದ್ದ ನಷ್ಟವನ್ನು ಈ ಬಾರಿ ಉತ್ತಮ ಬೆಳೆ ತೆಗೆದು ಸರಿದೂಗಿಸಿಕೊಳ್ಳೋಣವೆಂಬ ಆಸೆಯಲ್ಲಿದ್ದ ರೈತರಿಗೆ ಕೊರೊನಾ ಎರಡನೇ ಅಲೆ ಮತ್ತೆ ಸಂಕಷ್ಟವನ್ನು ತಂದೊಡ್ಡಿದೆ.
ಇದನ್ನೂ ಓದಿ: ಹುಣಸೆ ಹಣ್ಣಿಗೆ ಬಂಪರ್ ಬೆಲೆ; ಕೊರೊನಾದಿಂದ ಕಂಗೆಟ್ಟ ರೈತರ ಮೊಗದಲ್ಲಿ ಮಂದಹಾಸ
ಬಾಗಲಕೋಟೆ ರೈತರಲ್ಲಿ ಆತಂಕ; ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಟೊಮ್ಯಾಟೊ ಬೆಳೆಗಾರ