ಬೆಂಗಳೂರಿಗೆ ಬರುತ್ತಿರುವ ಡಿಕೆಶಿಗೆ ಭರ್ಜರಿ ಸ್ವಾಗತ, ನ್ಯಾ.ಸಂತೋಷ್ ಹೆಗ್ಡೆ ಏನಂದ್ರು?

|

Updated on: Oct 26, 2019 | 6:07 PM

ಬಳ್ಳಾರಿ: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ತಿಹಾರ್​ ಜೈಲಿನಿಂದ ಬೆಂಗಳೂರಿನತ್ತ ವಾಪಸಾಗುತ್ತಿದ್ದಾರೆ. ಈ ಮಧ್ಯೆ, ಅವರ ಅಭಿಮಾನಿಗಳು ಭರ್ಜರಿ ರೋಡ್​​ ಷೋ ನಡೆಸಿ, ಅವರಿಗೆ ಸ್ವಾಗತ ಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಮಾತನಾಡಿದ್ದು, ನಾವು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ, ಇಂಥ ಸಮಾಜ ಬದಲಾಗ್ಬೇಕು. ಈ ವ್ಯವಸ್ಥೆ ಬದಲಾಗಬೇಕಿದೆ, ಜನರು ಸಹ ಬದಲಾಗಬೇಕಿದೆ. ಈಗ ಜನರಲ್ಲಿ ದುರಾಸೆ, ಅಧಿಕಾರದ ಆಸೆಯೂ ಹೆಚ್ಚಾಗಿದೆ. ಹಣ ಇರುವವರು ಅಧಿಕಾರಕ್ಕೆ ಬರಬೇಕೆಂದು ಹೇಳುತ್ತಾರೆ. ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರವನ್ನು […]

ಬೆಂಗಳೂರಿಗೆ ಬರುತ್ತಿರುವ ಡಿಕೆಶಿಗೆ ಭರ್ಜರಿ ಸ್ವಾಗತ, ನ್ಯಾ.ಸಂತೋಷ್ ಹೆಗ್ಡೆ ಏನಂದ್ರು?
Follow us on

ಬಳ್ಳಾರಿ: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ತಿಹಾರ್​ ಜೈಲಿನಿಂದ ಬೆಂಗಳೂರಿನತ್ತ ವಾಪಸಾಗುತ್ತಿದ್ದಾರೆ. ಈ ಮಧ್ಯೆ, ಅವರ ಅಭಿಮಾನಿಗಳು ಭರ್ಜರಿ ರೋಡ್​​ ಷೋ ನಡೆಸಿ, ಅವರಿಗೆ ಸ್ವಾಗತ ಕೋರುತ್ತಿದ್ದಾರೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಮಾತನಾಡಿದ್ದು, ನಾವು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ, ಇಂಥ ಸಮಾಜ ಬದಲಾಗ್ಬೇಕು. ಈ ವ್ಯವಸ್ಥೆ ಬದಲಾಗಬೇಕಿದೆ, ಜನರು ಸಹ ಬದಲಾಗಬೇಕಿದೆ. ಈಗ ಜನರಲ್ಲಿ ದುರಾಸೆ, ಅಧಿಕಾರದ ಆಸೆಯೂ ಹೆಚ್ಚಾಗಿದೆ. ಹಣ ಇರುವವರು ಅಧಿಕಾರಕ್ಕೆ ಬರಬೇಕೆಂದು ಹೇಳುತ್ತಾರೆ. ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ನ್ಯಾ.ಸಂತೋಷ್ ಹೆಗ್ಡೆ, ಹಿಂದೆ ಜೈಲಿಗೆ ಹೋದವರನ್ನ ಜನರು ಬಹಿಷ್ಕರಿಸುತ್ತಿದ್ದರು. ಶಿಕ್ಷೆ ಆಗುವುದಕ್ಕೂ ಮುಂಚೆಯೇ ಅವರನ್ನ ಬಹಿಷ್ಕರಿಸ್ತಿದ್ರು. ಆದರೆ ಈಗ ಅಂತಹವರನ್ನು ಸ್ವಾಗತ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಸಂತೋಷ್ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.

ಏಕವ್ಯಕ್ತಿ ಪೂಜೆ ಮಾಡಿ, ಆದ್ರೆ ಭ್ರಷ್ಟರ ಪೂಜೆ ಮಾಡಬಾರದು. ಅಧಿಕಾರದಲ್ಲಿ ಇರುವವರು ಎಷ್ಟು ಪ್ರಾಮಾಣಿಕರು ಇದ್ದಾರೆ? ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಸಹ ದುರ್ಬಲವಾಗಿದೆ. ಇನ್ನು, ಎಸಿಬಿ ಪೊಲೀಸ್ ವ್ಯವಸ್ಥೆಯಲ್ಲಿ ಬರುವ ಸಂಸ್ಥೆ ಎಂದು ಬಳ್ಳಾರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Published On - 1:32 pm, Sat, 26 October 19