ಯುವತಿಯರನ್ನ ವಾಟ್ಸಪ್, ಫೇಸ್ಬುಕ್ ಮೂಲಕ ದಾರಿತಪ್ಪಿಸುತ್ತಿದ್ದ ಯುವಕ ಅಂದರ್
ಬಳ್ಳಾರಿ: ವಾಟ್ಸಪ್, ಫೇಸ್ಬುಕ್ ಮೂಲಕ ಯುವತಿಯರು, ಗೃಹಿಣಿಯರಿಗೆ ವಂಚನೆ ಮಾಡುತ್ತಿದ್ದ ಯುವಕನನ್ನು ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್ ಬಂಧಿತ ಆರೋಪಿ. ಈತ ಯುವತಿ, ಗೃಹಿಣಿಯರಿಗೆ ಪ್ರೀತಿಯ ಬಲೆ ಬೀಸಿ ಅವರಿಂದ ಹಣ, ಒಡವೆ ಪಡೆದು ಮೋಜು ಮಸ್ತಿ ಮಾಡುತ್ತಿದ್ದ. ಹೀಗೆ ಗೃಹಿಣಿಯೊಬ್ಬಳ ಪರಿಚಯ ಮಾಡಿಕೊಂಡು ಪ್ರೀತಿಸಿ ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾನೆ. ನಾಪತ್ತೆಯಾದ ಗೃಹಿಣಿಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನ […]
ಬಳ್ಳಾರಿ: ವಾಟ್ಸಪ್, ಫೇಸ್ಬುಕ್ ಮೂಲಕ ಯುವತಿಯರು, ಗೃಹಿಣಿಯರಿಗೆ ವಂಚನೆ ಮಾಡುತ್ತಿದ್ದ ಯುವಕನನ್ನು ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರುಣ್ ಕುಮಾರ್ ಬಂಧಿತ ಆರೋಪಿ. ಈತ ಯುವತಿ, ಗೃಹಿಣಿಯರಿಗೆ ಪ್ರೀತಿಯ ಬಲೆ ಬೀಸಿ ಅವರಿಂದ ಹಣ, ಒಡವೆ ಪಡೆದು ಮೋಜು ಮಸ್ತಿ ಮಾಡುತ್ತಿದ್ದ. ಹೀಗೆ ಗೃಹಿಣಿಯೊಬ್ಬಳ ಪರಿಚಯ ಮಾಡಿಕೊಂಡು ಪ್ರೀತಿಸಿ ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾನೆ. ನಾಪತ್ತೆಯಾದ ಗೃಹಿಣಿಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿ ಮೊಬೈಲ್ನಲ್ಲಿ ಯುವತಿಯರ ಫೋಟೋ, ವಿಡಿಯೋ ಲಭ್ಯವಾಗಿದೆ. ಆರೋಪಿ ಅರುಣ್ ಕುಮಾರ್ ರಕ್ಷಣೆಗೆ ಹಾಗೂ ಪ್ರಕರಣವನ್ನು ಹಾದಿ ತಪ್ಪಿಸಲು ಕೆಲ ಪ್ರಭಾವಿ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
Published On - 3:42 pm, Sat, 26 October 19