ಬೆಂಗಳೂರು, ಅಕ್ಟೋಬರ್ 02: ಗೃಹಜ್ಯೋತಿ ಯೋಜನೆಯಲ್ಲಿ ಇಷ್ಟು ದಿನಗಳ ಕಾಲ ಮನೆ ಮಾಲೀಕರು ಉಚಿತವಾಗಿ ವಿದ್ಯುತ್ ಉಪಯೋಗಿಸುತ್ತಿದ್ದರು. ಆದರೆ ಇದೀಗ ಬೆಸ್ಕಾಂ ಎಎಸ್ಡಿ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಬಿಲ್ (Bescom bill) ಜೊತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್ ಆಗಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೆ, ಇಲ್ಲಿಯವರೆಗೆ ಉಚಿತವಾಗಿ ವಿದ್ಯುತ್ ಬಳಸುತ್ತಿದ್ದ ಮನೆಗಳಿಗೆ ಬೆಸ್ಕಾಂ ಎಎಸ್ಡಿ (ಅಡಿಷನಲ್ ಸೆಕ್ಯೂರಿಟೀ ಡೆಪಾಸಿಟಿ) ಹೆಸರಲ್ಲಿ ಸಾವಿರಾರು ರೂ. ಹಣ ಕಟ್ಟುವಂತೆ ಈ ತಿಂಗಳ ಬಿಲ್ ಜೊತೆಗೆ ನೀಡಿದೆ. ಇದಕ್ಕೆ ಬೆಸ್ಕಾಂ ವಿರುದ್ಧ ಮನೆ ಮಾಲೀಕರು, ಬಾಡಿಗೆಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೊಂದು ಬೆಸ್ಕಾಂ ಪ್ರಕಟಣೆ: ಸೆ 1 ರಿಂದಲೇ ಈ ಕಟ್ಟುನಿಟ್ಟಿನ ನಿಯಮಗಳು ಜಾರಿ
ಬೆಸ್ಕಾಂ ಬಿಲ್ ಜೊತೆಗೆ ಡೆಪಾಸಿಟ್ ಚಾರ್ಜ್ ಎಂದು ಪ್ರತಿ ಮನೆಗೆ ಬಿಲ್ ನೀಡಲಾಗಿದೆ. ಇನ್ನು ಹೆಚ್ಚಿನ ಕರೆಂಟ್ ಬಳಸುತ್ತಿರುವ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಸಾವಿರಾರು ರೂ. ವಸೂಲಿ ಮಾಡಲು ಮುಂದಾಗಿದ್ದಾರೆ. ಆದರೆ ಈ ಹಣ ವಾಪಸ್ಸು ಬರೋದಿಲ್ಲ, ಮನೆ ಮಾಲೀಕರ ಅಕೌಂಟ್ನಲ್ಲಿ ಈ ಹಣ ಜಮೆ ಆಗಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.
ನಮ್ಮ ಅಕೌಂಟ್ನಲ್ಲಿ ಜಮೆ ಆಗಿರುವಾಗ ನಾವು ಯಾಕೆ ಹಣ ಕಟ್ಟಬೇಕು. ಸೆಕ್ಯುರಿಟಿ ಡೆಪಾಸಿಟ್ ಕಟ್ಟಲ್ಲ, ಬಿಲ್ ಮಾತ್ರ ಕಟ್ಟುತ್ತೇವೆ ಎಂದು ಮನೆ ಮಾಲೀಕರು ಹೇಳುತ್ತಿದ್ದಾರೆ. ಆದರೆ ಈ ಬಾರಿ ಹಣ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಡುತ್ತೇವೆ ಎಂದು ಬೆಸ್ಕಾಂ ಹೇಳುತ್ತಿದ್ದಾರೆ.
ಇದನ್ನೂ ಓದಿ: Gruha Jyothi Scheme: ಶೂನ್ಯ ಬಿಲ್ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ
ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಜನರಲ್ ಮ್ಯಾನೇಜರ್ (ಕಸ್ಟಮರ್ ರಿಲೇಷನ್) ಎಂಎಲ್. ರಾಜೋಜಿರಾವ್, ಬೆಸ್ಕಾಂ ಹಿತದೃಷ್ಟಿಯಿಂದ ಹೆಚ್ಚಿನ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಮಾತ್ರ ಎಎಸ್ಡಿ ಬಿಲ್ ನೀಡಲಾಗಿದೆ. ಕಡಿಮೆ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಎಎಸ್ಡಿ ಅಪ್ಲೈ ಆಗೋದಿಲ್ಲ. ಈ ಹಣವನ್ನು ಮನೆ ಮಾಲೀಕರ ಅಕೌಂಟ್ನಲ್ಲಿ ಇರುತ್ತದೆ. ಆ ಹಣಕ್ಕೆ ನಾವು ಪ್ರತಿ ವರ್ಷ ಬಡ್ಡಿ ಕೊಡುತ್ತೇವೆ ಎಂದಿದ್ದಾರೆ. ಇಷ್ಟು ದಿನ ಉಚಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಮನೆ ಮಾಲೀಕರಿಗೆ, ಬೆಸ್ಕಾಂ ಅಧಿಕಾರಿಗಳ ಎಎಸ್ಡಿ ಬಿಲ್ ಶಾಕ್ ನೀಡುವುದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.