
GST ಪರಿಹಾರದ ಆಯ್ಕೆ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳ ಪೈಕಿ ಮೊದಲ ಆಯ್ಕೆಗೆ ರಾಜ್ಯ ಸರ್ಕಾರದ ಆದ್ಯತೆ ನೀಡಿದೆ.
ಈ ಹಿಂದೆ GST ಪರಿಹಾರದ ಬಗ್ಗೆ ರಾಜ್ಯಗಳ ತಮ್ಮ ಆದ್ಯತೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಕೇಂದ್ರ ಸರ್ಕಾರ ಎರಡು ಆಯ್ಕೆ ನೀಡಿತ್ತು.
1)GST ಅನುಷ್ಠಾನದಿಂದ ಉಂಟಾಗುವ ಕೊರತೆ ಮತ್ತು 2)ಕೋವಿಡ್ ಪರಿಣಾಮ ಸೇರಿದಂತೆ GST ಅನುಷ್ಠಾನದಿಂದ ಉಂಟಾಗುವ ಕೊರತೆ
ಇವೆರಡರಲ್ಲಿ ರಾಜ್ಯ ಸರ್ಕಾರ, GST ಅನುಷ್ಠಾನದಿಂದ ಉಂಟಾಗುವ ಕೊರತೆಯನ್ನು ಆಯ್ಕೆ ಮಾಡಿಕೊಂಡಿದೆ. ಮೊದಲ ಆಯ್ಕೆಯು ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಮೊದಲ ಆಯ್ಕೆಯನ್ನು ಪರಿಗಣಿಸಿ, ರಾಜ್ಯದ ಆದ್ಯತೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ರಾಜ್ಯ ಸರ್ಕಾರ ಮೊದಲ ಆಯ್ಕೆಯನ್ನು ಪರಿಗಣಿಸಲು ಕಾರಣಗಳು..
1)ಆಯ್ಕೆ 1 ರ ಅಡಿ ಕರ್ನಾಟಕ ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿದೆ
2)ಇದರಲ್ಲಿ 6965 ಕೋಟಿ ರೂ. ಸಂಗ್ರಹಿಸಿದ ಸೆಸ್ ನಿಂದ ಲಭ್ಯವಾಗಲಿದೆ
3)ಉಳಿದ 11,324 ಕೋಟಿ ರೂ.ಗಳಿಗೆ ಕರ್ನಾಟಕ ವಿಶೇಷ ವಿಂಡೋ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ
4)GSDP ಯ ಶೇ. 1ರಷ್ಟು(18,036 ಕೋ. ರೂ.) ಹೆಚ್ಚುವರಿ ಸಾಲ ಯಾವುದೇ ಷರತ್ತಿಗೊಳಪಡದೇ ಲಭ್ಯವಾಗಲಿದೆ
ಕೇಂದ್ರ ಸರ್ಕಾರದ ಮೇ 17 ರ ಆದೇಶದ ಪ್ರಕಾರ ನೀಡಲಾದ ಸಮಯದೊಳಗೆ ಕೆಲವು ಸುಧಾರಣೆ ಮಾಡಿದಲ್ಲಿ ಇನ್ನೂ GSDP ಯ ಶೇ.1ರಷ್ಟು ಸಾಲವನ್ನು ರಾಜ್ಯಸರ್ಕಾರ ಪಡೆಯಬಹುದು. ಅಗತ್ಯವಿದ್ದರೆ ಈ ಹೆಚ್ಚುವರಿ ಸಾಲಗಳನ್ನು ಮುಂದಿನ ಹಣಕಾಸು ವರ್ಷಕ್ಕೆ ಕೂಡಾ ಮುಂದೂಡಬಹುದು.