AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ ಸಹ‌ ಡ್ರಗ್ ಅಡಿಕ್ಟ್ ಆಗಿದ್ರು, ಆಗ್ಯಾಕೆ ಇಂದ್ರಜಿತ್ ಮಾತ್ನಾಡಲಿಲ್ಲ: ಮುತಾಲಿಕ್ ಪ್ರಶ್ನೆ‌

ಹಾವೇರಿ:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಹೇಳಿಕೆ ನೀಡಿದ್ದು, ಇಂದ್ರಜಿತ್ ಲಂಕೇಶ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ ಎಂದಿದ್ದಾರೆ. ಗೌರಿ ಲಂಕೇಶ್‌ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು.. ನಿಮ್ಮ ಅಕ್ಕ ಗೌರಿ ಲಂಕೇಶ್‌ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು, ಆಗ ನೀವೆಲ್ಲಿ ಹೋಗಿದ್ರಿ? ಅವಳನ್ನ ಯಾಕೆ ಸುಧಾರಿಸಲಿಲ್ಲ? ಈಗ ಚಿತ್ರರಂಗದ ಬಗ್ಗೆ ಮಾತನಾಡೋರು ಆಗ ಯಾಕೆ ಮಾತನಾಡ್ಲಿಲ್ಲ ಎಂದು ಮುತಾಲಿಕ್ ಇಂದ್ರಜಿತ್ ಲಂಕೇಶ್ ಅವರನ್ನು ಪ್ರಶ್ನಿಸಿದ್ದಾರೆ. ಈಗ […]

ಗೌರಿ ಸಹ‌ ಡ್ರಗ್ ಅಡಿಕ್ಟ್ ಆಗಿದ್ರು, ಆಗ್ಯಾಕೆ ಇಂದ್ರಜಿತ್ ಮಾತ್ನಾಡಲಿಲ್ಲ: ಮುತಾಲಿಕ್ ಪ್ರಶ್ನೆ‌
ಪ್ರಮೋದ್ ಮುತಾಲಿಕ್
ಸಾಧು ಶ್ರೀನಾಥ್​
|

Updated on: Sep 02, 2020 | 2:12 PM

Share

ಹಾವೇರಿ:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಹೇಳಿಕೆ ನೀಡಿದ್ದು, ಇಂದ್ರಜಿತ್ ಲಂಕೇಶ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ ಎಂದಿದ್ದಾರೆ.

ಗೌರಿ ಲಂಕೇಶ್‌ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು.. ನಿಮ್ಮ ಅಕ್ಕ ಗೌರಿ ಲಂಕೇಶ್‌ ಅವರೇ ಡ್ರಗ್ ಅಡಿಕ್ಟ್ ಆಗಿದ್ದರು, ಆಗ ನೀವೆಲ್ಲಿ ಹೋಗಿದ್ರಿ? ಅವಳನ್ನ ಯಾಕೆ ಸುಧಾರಿಸಲಿಲ್ಲ? ಈಗ ಚಿತ್ರರಂಗದ ಬಗ್ಗೆ ಮಾತನಾಡೋರು ಆಗ ಯಾಕೆ ಮಾತನಾಡ್ಲಿಲ್ಲ ಎಂದು ಮುತಾಲಿಕ್ ಇಂದ್ರಜಿತ್ ಲಂಕೇಶ್ ಅವರನ್ನು ಪ್ರಶ್ನಿಸಿದ್ದಾರೆ.

ಈಗ ಸತ್ತಂತಹ ವ್ಯಕ್ತಿಯ ಹೆಸರು ತೆಗೆದುಕೊಳ್ಳೋ ಅಗತ್ಯವಿರಲಿಲ್ಲ.ಸರ್ಜಾ ಕುಟುಂಬದವರು ಶುದ್ಧವಾಗಿದ್ದಾರೆ. ಅವರನ್ನ ಯಾಕೆ ತರ್ತೀರಿ? ಎಂದಿದ್ದಾರೆ.

ಹ್ಯಾರಿಸ್ ಪುತ್ರನೇ ಇದರಲ್ಲಿದ್ದಾರೆ.. ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಎಲ್ಲವೂ ಗೊತ್ತಿರುತ್ತೆ. ಆದರೆ ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಂದ್ ಮಾಡ್ತಾರೆ. ಈಗ ಪೊಲೀಸರು ಮತ್ತು ರಾಜಕಾರಣಿಗಳು ಇದನ್ನು ಬೇರುಸಹಿತ ಕಿತ್ತು ಹಾಕುತ್ತೇವೆ ಅಂತಾ ಈಗ ಹಾರಾಡ್ತಿದ್ದಾರೆ. ಅದು ಸಾಧ್ಯವೇ ಇಲ್ಲ.

ರಾಜಕಾರಣಿಗಳೆ ಇದರಲ್ಲಿದ್ದಾರೆ. ಸ್ವತಃ ಹ್ಯಾರಿಸ್ ಪುತ್ರನೇ ಇದರಲ್ಲಿದ್ದಾರೆ. ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಿಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸ್ತೇನೆ ಅಂತಾ ಸವಾಲು ಹಾಕಿದ್ದಾರೆ. ಡ್ರಗ್ ದಂಧೆಯಲ್ಲಿ ಸಾವಿರಾರು ಕೋಟಿ ವ್ಯವಹಾರ ಆಗುತ್ತದೆ. ಹೀಗಾಗಿ ಇದರ ವಿರುದ್ಧ ಪಾಲಕರು ಸಿಡಿದೇಳಬೇಕು.

ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಇತ್ತು.. ಗೃಹ ಸಚಿವರು, ಸಿಟಿ ರವಿ ಹೇಳ್ತಾರೆ ಬೇರು ಸಮೇತ ಕಿತ್ತು ಹಾಕ್ತೇವೆ ಅಂತೆಲ್ಲಾ ನಾಟಕ ಮಾಡ್ತಾರೆ, ಆದರೆ ಸ್ವಲ್ಪ ದಿನದಲ್ಲಿ ಎಲ್ಲವನ್ನು ಮರೆತು ಬಿಡ್ತಾರೆ. ಹೀಗಾಗಿ ಈ ಬಗ್ಗೆ ನಾವು ಜನಾಂದೋಲನ ಮಾಡ್ತೇವೆ. ಈ ಹಿಂದೆ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಆದರೆ ಆವತ್ತು ಸರಕಾರ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನನ್ನೆ ಟಾರ್ಗೆಟ್ ಮಾಡಿದರು ಎಂದು ಪ್ರಮೋದ್ ಮುತಾಲಿಕ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು