‘ಕೋವಿಡ್ ಸೆಂಟರ್​ ಅವಶ್ಯಕತೆ ಇಲ್ಲದಿದ್ರೆ ಅವುಗಳನ್ನ ಕ್ಲೋಸ್ ಮಾಡ್ತೇವೆ’

‘ಕೋವಿಡ್ ಸೆಂಟರ್​ ಅವಶ್ಯಕತೆ ಇಲ್ಲದಿದ್ರೆ ಅವುಗಳನ್ನ ಕ್ಲೋಸ್ ಮಾಡ್ತೇವೆ’

ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೋವಿಡ್ 19 ನಿರ್ವಹಣೆ ಕುರಿತು ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಕೊರೊನಾಗೆ ಸಂಬಂಧಿಸಿದಂತೆ ಆದಂತಹ ಒಂದಷ್ಟು ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

ಜುಲೈ, ಆಗಸ್ಟ್ ತಿಂಗಳಿಗೆ ಹೋಲಿಸಿಕೊಂಡ್ರೆ ಹೆಚ್ಚು ಕೇಸ್ ಬರ್ತಿವೆ. 3 ಸಾವಿರ ಇದ್ದ ಟೆಸ್ಟ್, 30 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಶೇ 10 ರಷ್ಟು ಪಾಸಿಟೀವ್ ಹೆಚ್ಚಾಗಿದೆ. Rtpcr 10ರಷ್ಟು, ಸ್ವಾಬ್ 9% ಪಾಸಿಟಿವ್ ಕಂಡುಬಂದಿದೆ. ಕೇಸ್ ಸಂಖ್ಯೆ ಹೆಚ್ಚಾದ್ರೆ ಆತಂಕಪಡುವ ಅವಶ್ಯಕತೆ ಇಲ್ಲ. ಪಾಸಿಟಿವ್ ಆದವರನ್ನ ಐಸೋಲೇಷನ್ ಮಾಡಲಾಗ್ತಿದೆ. ಸಾವನ್ನಪ್ಪುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಕಂಟೈನ್ಮೆಂಟ್ ಝೋನ್ ಕೂಡ ಬದಲಾವಣೆ ತರಲಾಗಿದೆ ಎಂದು ವಿವರಿಸಿದ್ರು.

ಡಿ ಕೋಡ್ ಮಾಡಲು ಬ್ಯಾರಿಕೇಡಿಂಗ್ ಕೈ ಬಿಟ್ಟ BBMP: ಇನ್ನು ಡಿ ಕೋಡ್ ಮಾಡಲು ಬ್ಯಾರಿಕೇಡಿಂಗ್ ಕೈ ಬಿಡಲಾಗಿದೆ. 17,159 ಕೇಸ್‌ಗಳಲ್ಲಿ ಮೂರಕ್ಕೂ ಹೆಚ್ಚು ಕೇಸ್ ಇರೋ 1,015 ಕೇಸ್‌ಗಳಲ್ಲಿ ಮಾತ್ರ ಬ್ಯಾರಿಕೇಡ್ ಮಾಡಲಾಗ್ತಿದೆ. ಮನೆ ಮುಂದೆ ಪೋಸ್ಟರ್ ಹಾಕಲಾಗ್ತಿದ್ದು, ಇನ್ಮುಂದೆ ಪೋಸ್ಟರ್ ಹಾಕುವುದಿಲ್ಲ.

ILI, sari, ಅಸ್ತಮ ಇರುವವರು ಅವರೇ ಬಂದು ಟೆಸ್ಟ್ ಮಾಡಿಸಿಕೊಂಡ್ರೆ ಉತ್ತಮ. ಇದರಿಂದ ಖಾಯಿಲೆ ಹರಡೋದನ್ನ ತಡೆಯಬಹುದು. ಪೋಸ್ಟರ್ ಹಾಕೋದ್ರಿಂದ ಅಕ್ಕಪಕ್ಕದವರು ವಿಚಿತ್ರವಾಗಿ ನೋಡ್ತಾರೆ ಅನ್ನೋ ಆರೋಪ ಇತ್ತು. ಆದ್ರೆ ಪೋಸ್ಟರ್ ಬದಲು ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ನೀಡ್ತೇವೆ. ಈ ಬಗ್ಗೆ ರಾಜ್ಯ ಸರ್ಕಾರದ ಜೊತೆ ಮಾತನಾಡಲಾಗಿದೆ. ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಜನ ಕಡಿಮೆಯಾಗಿದ್ದಾರೆ. ಶೇ.50 ಕ್ಕೂ ಹೆಚ್ಚು ಬೆಡ್ ಗಳು ಖಾಲಿ ಇವೆ ಎಂದ್ರು.

ಶೇ.50 ಕ್ಕೂ ಹೆಚ್ಚು ಬೆಡ್​ಗಳು ಖಾಲಿ: ಕೋವಿಡ್ ಕೇರ್ ಸೆಂಟರ್​ಗಳ ಅವಶ್ಯಕತೆ ಎಲ್ಲಿ ಇಲ್ವೋ ಇದನ್ನ ಕ್ಲೋಸ್ ಮಾಡ್ತೇವೆ. ಅವಶ್ಯಕತೆ ಬಿದ್ದಾಗ ಆರಂಭ ಮಾಡ್ತೇವೆ. ಸೆಕೆಂಡರಿ ಕಾಂಟ್ಯಾಕ್ಟ್ ಇರೋರನ್ನೂ ಟೆಸ್ಟ್ ಮಾಡಲಾಗ್ತಿದೆ. ಆದ್ರೆ ಅವರಿಗೆ ಪಾಸಿಟಿವ್ ಕಂಡುಬರ್ತಿಲ್ಲ. ಹೀಗಾಗಿ ಟಾರ್ಗೆಟ್ ಟೆಸ್ಟ್ ಆರಂಭಿಸಿದ್ದೇವೆ. ಯಾರಿಗೆ ಖಾಯಿಲೆ ಇದೆ ಅವರನ್ನ ಟಾರ್ಗೆಟ್ ಮಾಡಿದ್ದೇವೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಜನರು ಕಡಿಮೆಯಾಗಿದ್ದಾರೆ. ಹೆಚ್ಚು ಮನೆಯಲ್ಲೇ ಚಿಕಿತ್ಸೆ ಪಡೆಯಲು ಇಚ್ಛೆ ಪಡ್ತಿದ್ದಾರೆ. ಅವರ ಮನೆ ಪರಿಶೀಲಿಸಿ ಹೋಮ್ ಐಸೋಲೇಷನ್ ಮಾಡಲು ಮುಂದಾಗಿದ್ದೇವೆ.

ಕುಶಲಾ ಆಪ್, ಸ್ವಸ್ಥ್ ಯೋಜನೆ ಮೂಲಕ ಟೆಸ್ಟ್ ಮಾಡಿ ಕೇರ್ ಮಾಡಲಾಗ್ತಿದೆ. BIEC ಯಲ್ಲಿ ಆರೂವರೆ ಸಾವಿರ ಬೆಡ್ ಇದ್ದು, ಈ ಪೈಕಿ ವೈದ್ಯರಿಗೆ ಹೊರತುಪಡಿಸಿ ಐದೂವರೆ ಸಾವಿರ ರೋಗಿಗಳಿಗೆ ಮೀಸಲಿಡಲಾಗಿದೆ. ಮೂರುವರೆ ಸಾವಿರ ಬೆಡ್​ಗಳನ್ನು ಹಾಸ್ಟೆಲ್, ಬೇರೆ ಬೇರೆ ಕಡೆ ಇರುವವರನ್ನ ಕರೆತರಲು ಮೀಸಲಿಡಲಾಗಿದೆ. ಬೇರೆ ಕಡೆ ಬಾಡಿಗೆ ಹೆಚ್ಚಾಗಿರೋದ್ರಿಂದ ಅಲ್ಲಿ ಖಾಲಿ ಮಾಡಲಾಗಿದೆ. ಮತ್ತೆ ಅವಶ್ಯಕತೆ ಇದ್ದಲ್ಲಿ ಮತ್ತೆ ತೆರೆಯಲಾಗುವುದು. 19 ಆಸ್ಪತ್ರೆ ಗುರ್ತಿಸಿ 24,368 ಅಡ್ಮಿಷನ್ ಮಾಡಲಾಗಿತ್ತು. ಅದರಲ್ಲಿ 14.8 ರಷ್ಟು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದ್ರು.

Click on your DTH Provider to Add TV9 Kannada