ಮೈಸೂರು: ಸದನದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಕ್ರಿಯವಾಗಿ ಭಾಗವಹಿಸದ ವಿಚಾರಕ್ಕೆ ಸಂಬಂಧಿಸಿ, ಸದನದಲ್ಲಿ ಉತ್ತಮ ಚರ್ಚೆಯೇ ನಡೆಯುತ್ತಿಲ್ಲ. ಸದನದ ಅಧಿವೇಶನದಲ್ಲಿ ಭಾಗಿಯಾಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಈ ಕುರಿತಂತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಟಿಎ-ಡಿಎ ತೆಗೆದುಕೊಳ್ಳಲೆಂದು ಸದನಕ್ಕೆ ಹಾಜರಾಗಲ್ಲ. ಸದನದಲ್ಲಿ ಒಳ್ಳೆಯ ವಿಷಯದ ಕುರಿತು ಚರ್ಚೆಗಳಿದ್ದರೆ ಭಾಗಿಯಾಗುತ್ತೇನೆ. ಸದನದಲ್ಲಿ ಅಧಿಕೃತ ವಿಪಕ್ಷದವರು ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇಲ್ಲಾ ಶರ್ಟ್ ಬಿಚ್ಚಿ ನಿಂತುಕೊಳ್ಳುತ್ತಾರೆ. ಇದಕ್ಕಾಗಿ ನಾವು ಅಧಿವೇಶನದಲ್ಲಿ ಭಾಗಿಯಾಗಬೇಕಾ? ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸದನಕ್ಕೆ ಹೋಗುತ್ತೇನೆ. ಆದರೆ ಕಚೇರಿಯಲ್ಲಿರುತ್ತೇನೆ. ಸದನದಲ್ಲಿ ನಡೆಯುವ ಚರ್ಚೆಯನ್ನ ಟಿವಿಯಲ್ಲಿ ನೋಡಿ ಒಳ್ಳೆ ವಿಷಯ ಇದ್ದರೆ ಚರ್ಚೆಯಲ್ಲಿ ಭಾಗಿಯಾಗುತ್ತೇನೆ ಎಂದು ಉತ್ತರಿಸಿದ್ದಾರೆ.
ಇನ್ನು, ಒಕ್ಕಲಿಗರಿಗೆ ಹಣ ಬಿಡುಗಡೆ ಕುರಿತಾಗಿ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಒಕ್ಕಲಿಗರಿಗೆ 500 ಕೋಟಿ ಅಲ್ಲ, 5 ರೂಪಾಯಿ ಸಹ ಕೊಡಲ್ಲ. ಕೇವಲ ಬಜೆಟ್ ಪುಸ್ತಕದಲ್ಲಿ ಬರೆದು ಓದಿದ್ದಾರೆ ಅಷ್ಟೇ. ಪುಸ್ತಕದಲ್ಲಿ ಬರೆದಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವರ್ಷವೇ ಒಕ್ಕಲಿಗರಿಗೆ ಹಣ ಬಿಡುಗಡೆ ಬಗ್ಗೆ ಮಾಹಿತಿ ಇದೆಯಾ? ಹೀಗಾಗಿ ಬಜೆಟ್‌ನಲ್ಲಿ ಒಕ್ಕಲಿಗರಿಗೆ 5 ರೂಪಾಯಿ ಕೂಡ ಸಿಗಲ್ಲ ಎಂದು ಮಾತನಾಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ನಿಂದ ಹೊರ ಹೋಗುವವರಿಗೆ ಬಾಗಿಲು ತೆರೆದಿದೆ: ಹೆಚ್.ಡಿ. ಕುಮಾರಸ್ವಾಮಿ