AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್‌ಡಿ ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿ ಧನ್ಯವಾದ ಹೇಳಿದ್ದೇಕೆ? ಬಾಂಬೆಗೆ ಹೋಗಿದ್ದವರ ಸಿಡಿ ಬಿಜೆಪಿ ಬಳಿಯೇ ಇದೆ -ಮೈಸೂರು ಕಾಂಗ್ರೆಸ್ ವಕ್ತಾರ

ಸಿಡಿ ಕೇಸ್ ಸಂಬಂಧ ಸ್ಪಷ್ಟನೆ ನೀಡುವ ವೇಳೆ ರಮೇಶ್ ಜಾರಕಿಹೊಳಿ ಕುಮಾರಸ್ವಾಮಿ ಮತ್ತು ಹೆಚ್​ಡಿ ರೇವಣ್ಣ ಅಭಿನಂದಿಸಿದ್ದಾರೆ. ಆದ್ರೆ ಈ ರೀತಿ ಹೆಚ್​ಡಿಕೆಗೆ ಧನ್ಯವಾದ ಯಾಕೆ ಹೇಳಿದರು? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿ ಧನ್ಯವಾದ ಹೇಳಿದ್ದೇಕೆ? ಬಾಂಬೆಗೆ ಹೋಗಿದ್ದವರ ಸಿಡಿ ಬಿಜೆಪಿ ಬಳಿಯೇ ಇದೆ -ಮೈಸೂರು ಕಾಂಗ್ರೆಸ್ ವಕ್ತಾರ
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಆಯೇಷಾ ಬಾನು
|

Updated on:Mar 09, 2021 | 2:32 PM

Share

ಮೈಸೂರು: ಸಿಡಿ ಕೇಸ್ ಸಂಬಂಧ ಸ್ಪಷ್ಟನೆ ನೀಡಲು ಮಾರ್ಚ್ 09ರಂದು ತಮ್ಮ ಸದಾಶಿವನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಅವರು ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದ್ರೆ ಈ ರೀತಿ ಹೆಚ್​ಡಿಕೆಗೆ ಧನ್ಯವಾದ ಯಾಕೆ ಹೇಳಿದರು? ಸಿಡಿ ನಕಲಿ‌ ಎಂದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಯಾಕೆ ಕೊಟ್ರಿ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.

ಸಿಡಿ ರಿಲೀಸ್ ಆಗುತ್ತಿದ್ದಂತೆ ಹಲವು ನಾಯಕರು ಕರೆ ಮಾಡಿದ್ರು. ಎಲ್ಲಾ ಪಕ್ಷದ ನಾಯಕರೂ ನನ್ನ ಬೆನ್ನಿಗೆ ನಿಂತಿದ್ದಾರೆ. ನನ್ನ ಜತೆ ಮೊದಲು ಮಾತಾಡಿದ್ದು ಹೆಚ್​ಡಿ ಕುಮಾರಸ್ವಾಮಿ ಮತ್ತು ಹೆಚ್​ಡಿ ರೇವಣ್ಣ, ದೇವೇಗೌಡರ ಇಡೀ ಕುಟುಂಬವೇ ನನ್ನ ಜತೆ ಮಾತಾಡಿದೆ. ಸರ್ಕಾರ ಬೀಳಿಸಿದ ಸಿಟ್ಟಿದ್ದರೆ ನನ್ನ ಜತೆ ಏಕೆ ಮಾತಾಡ್ತಿದ್ರು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಕ್ತಾರ ಎಂ.ಲಕ್ಷ್ಮಣ್, ರಮೇಶ್ ಜಾರಕಿಹೊಳಿಗೆ ಪ್ರಶ್ನಿಸಿದ್ದಾರೆ.

ಸಿಡಿಯ ನಿರ್ದೇಶನ, ರಚನೆ ಬಿಜೆಪಿಯದ್ದು CD ನಕಲಿ ಆದರೆ ಸಚಿವ ಸ್ಥಾನಕ್ಕೆ ರಮೇಶ್ ಏಕೆ ರಾಜೀನಾಮೆ ನೀಡಿದರು? ರಮೇಶ್ ಜಾರಕಿಹೊಳಿ ಹೆಚ್‌ಡಿಕೆಗೆ ಧನ್ಯವಾದ ಹೇಳಿದ್ರು. ಅದ್ಯಾಕೆ ಧನ್ಯವಾದ ಹೇಳಿದರು ಎಂದು ನನಗೆ ಗೊತ್ತಿಲ್ಲ. ಇದುವರೆಗೂ ನೀವು ಯಾಕೆ ದೂರು ನೀಡಲಿಲ್ಲ? ಈ‌ ಸಿಡಿಯ ನಿರ್ದೇಶನ, ರಚನೆ ಎಲ್ಲವೂ ಬಿಜೆಪಿಯದ್ದೆ. ಸಿ.ಪಿ.ಯೋಗೇಶ್ವರ್ ಕೇಳಿ ಸಿಡಿ ರಚನೆ ಹೇಗೆ ಮಾಡುತ್ತಾರೆ ಎಂದು ಅವರೇ ಮೈಸೂರಿನಲ್ಲಿ ಹೇಳಿದ್ದಾರೆ. ಅವರನ್ನೇ ಈ ಬಗ್ಗೆ ಕೇಳಿ. ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲಾ ಥರದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಅವರ ಎಲ್ಲಾ ಸಿಡಿಗಳು ಬಿಜೆಪಿ ಬಳಿ ಇವೆಯಂತೆ. ಅದರ ಆಧಾರದ ಮೇಲೆ ಇವರೆಲ್ಲರ ಜುಟ್ಟನ್ನು ಬಿಜೆಪಿ ಅವರು ಹಿಡಿದಿದ್ದಾರೆ. ನಳಿನ್ ಕುಮಾರ್ ಕಟೀಲ್ ಜೋಕರ್ ಥರ ಮಾತನಾಡುತ್ತಿದ್ದಾರೆ. ಒಳ್ಳೆದ್ದಕ್ಕೂ, ಕೆಟ್ಟದ್ದಕ್ಕೂ, ಮಕ್ಕಳಾಗಿದ್ದಕ್ಕೂ ಎಲ್ಲಕ್ಕೂ ಕಾಂಗ್ರೆಸ್ ಹೊಣೆ ಮಾಡುತ್ತೀರಾ ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ? ಎಂದು ಎಂ.ಲಕ್ಷ್ಮಣ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ 24 ಗಂಟೆಯಲ್ಲಿ ಈ‌ ಪ್ರಕರಣದ ಅಸಲಿ ಕಥೆಯನ್ನು ಪೊಲೀಸರು ಬಯಲಿಗೆ ತರುತ್ತಾರೆ. ಸಿ.ಪಿ.ಯೋಗೇಶ್ವರ್ ಬಳಿಯೇ ಸಿಡಿಗಳು ಇವೆ ಅಂತಾ ಹೇಳುತ್ತಾರೆ. ಬಾಂಬೆಗೆ ಹೋಗಿದ್ದವರು ಬೆತ್ತಲೆ ಬೆಲ್ಲಿ ಡ್ಯಾನ್ಸ್ ನೋಡಿದ್ದಾರೆ. ಆ ವಿಡಿಯೋಗಳು ಬಿಜೆಪಿ ಬಳಿ ಇವೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

‘ರಾಜ್ಯ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಸಿಕ್ಕಿರುವುದು ಚಿಪ್ಪು’ ರಾಜ್ಯ ಬಜೆಟ್​ನಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ₹18 ಸಾವಿರ ಕೋಟಿ ನೀಡಿದ್ದರು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಮೈಸೂರಿಗೆ ಚಿಪ್ಪು ಸಿಕ್ಕಿದೆ. ಕೇಂದ್ರದ ಬಜೆಟ್‌ನಲ್ಲೂ ಮೈಸೂರಿಗೆ ನಯಾ ಪೈಸೆ ಬರಲಿಲ್ಲ. ರಾಜ್ಯ ಬಜೆಟ್‌ನಲ್ಲಿಯೂ ನಯಾಪೈಸೆ ಬರಲಿಲ್ಲ ಎಂದು ಎಂ.ಲಕ್ಷ್ಮಣ್ ಚಿಪ್ಪು ಹಿಡಿದು ಹೇಳಿದ್ರು.

ಇದನ್ನೂ ಓದಿ: Ramesh Jarkiholi Press Meet: ನಾನು ಅಪರಾಧಿಯಲ್ಲ, ಇಂತಹವು 10 ಬಂದರೂ ನಾನು ಎದುರಿಸಲು ಸಿದ್ಧ -ರಮೇಶ್ ಜಾರಕಿಹೊಳಿ

Published On - 12:32 pm, Tue, 9 March 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್