ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ವಿದ್ಯಾರ್ಥಿ: ಸಾವಿಗೂ ಮುನ್ನ ಗೂಗಲ್ನಲ್ಲಿ ಹುಡುಕಾಟ
ನವೀನ್ನ ಗೂಗಲ್ ಸರ್ಚ್ ಇತಿಹಾಸವನ್ನು ಗಮನಿಸಿದಾಗ ನವೀನ್ ಒತ್ತಡದಿಂದ ಹೊರಬರುವುದು ಹೇಗೆ ಎಂಬುದನ್ನು ಸರ್ಚ್ ಮಾಡಿರುವುದು ತಿಳಿದು ಬಂದಿದೆ. ನಂತರ ಫೆಬ್ರವರಿ 3ರಂದು ನವೀನ್ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಹುಡುಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: 20 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (BMCRI) ವ್ಯಾಸಂಗ ಮಾಡುತ್ತಿದ್ದ ಯುವಕ ಚಾಮರಾಜಪೇಟೆ ಸಮೀಪ ಇರುವ ತನ್ನ ಹಾಸ್ಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ಮೂಲದ ನವೀನ್.ಪಿ (20) ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ, ಪರೀಕ್ಷೆಗೂ ಒಂದು ದಿನ ಮೊದಲು (ಭಾನುವಾರ) ನೇಣು ಬಿಗಿದ ಸ್ಥಿತಿಯಲ್ಲಿ ತನ್ನ ಹಾಸ್ಟೇಲ್ನ ರೂಮ್ನಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪತ್ತೆಯಾಗಿದ್ದಾನೆ.
ನವೀನ್ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಹಾಸ್ಟೇಲ್ನಲ್ಲಿ ಊಟ ಸೇವಿಸಿದ್ದು, ಒಬ್ಬನೆ ರೂಮಿಗೆ ತೆರಳಿದ್ದಾನೆ. ನಂತರ ನವೀನ್ ಸ್ನೇಹಿತ ರೂಮಿಗೆ ಬಂದು ಬಾಗಿಲು ಎಷ್ಟೇ ಬಡಿದರು ಪ್ರತಿಕ್ರಿಯೆ ನೀಡದೆ ಇದ್ದ ಕಾರಣ ನವೀನ್ ಸ್ನೇಹಿತ ಹಾಸ್ಟೇಲ್ನ ಇತರರ ಸಹಾಯ ಪಡೆದು ಬಾಗಿಲು ಒಡೆದಾಗ ಈ ಘಟನೆ ಬೆಳಕಿಗೆ ಬಂದಿದೆ. ನವೀನ್ ಗೂಗಲ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಹುಡುಕಿದ್ದಾನೆ ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನವೀನ್ನ ಗೂಗಲ್ ಸರ್ಚ್ ಇತಿಹಾಸವನ್ನು ಗಮನಿಸಿದಾಗ ನವೀನ್ ಒತ್ತಡದಿಂದ ಹೊರಬರುವುದು ಹೇಗೆ ಎಂಬುದನ್ನು ಸರ್ಚ್ ಮಾಡಿರುವುದು ತಿಳಿದು ಬಂದಿದೆ. ನಂತರ ಫೆಬ್ರವರಿ 3ರಂದು ನವೀನ್ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಹುಡುಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ ನವೀನ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಒಬ್ಬ ಮನುಷ್ಯ ನೇಣಿಗೆ ಶರಣಾದರೆ ಎಷ್ಟು ನಿಮಿಷದಲ್ಲಿ ಅವನ ಪ್ರಾಣ ಹೋಗುತ್ತದೆ ಎನ್ನುವುದನ್ನು ಕೂಡ ಸರ್ಚ್ ಮಾಡಿ ನೋಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಪರೀಕ್ಷೆಯ ಒತ್ತಡದಲ್ಲಿ ನವೀನ್ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನವೀನ್ ಪ್ರತಿದಿನ ತನ್ನ ಮೂವರು ಸ್ನೇಹಿತರ ಜೊತೆಗೆ ಊಟ ಮಾಡಿ ಗ್ರಂಥಾಲಯಕ್ಕೆ ಹೋಗುತ್ತಿದ್ದ. ಆದರೆ ನವೀನ್ ತನ್ನ ಸ್ನೇಹಿತರ ಬಳಿಯಾಗಲಿ ಅಥವಾ ಕುಟುಂಬದವರ ಬಳಿ ಆಗಲಿ ತನ್ನ ಮನಸ್ಸಿನಲ್ಲಿನ ನೋವನ್ನು ಹೇಳಿಕೊಂಡಿರಲಿಲ್ಲ. ಅದು ಅಲ್ಲದೇ ನವೀನ್ ಡೆತ್ ನೋಟ್ ಕೂಡ ಬರೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Family Suicide: 17 ವರ್ಷದ ಮಗ ಹೃದಯಾಘಾತದಿಂದ ಸಾವು, ನೋವು ತಾಳಲಾರದೆ ಮನೆಯವರೆಲ್ಲ ನೇಣಿಗೆ ಶರಣು