‘ನಮಗೆ ರಕ್ಷಣೆ ಕೊಡಿ.. ಪ್ಲೀಜ್’ ಹಾಸನದಿಂದ ನವಜೋಡಿಯ ಮನವಿ
ಹಾಸನ: ರಕ್ಷಣೆ ಕೋರಿ ಯುವ ಜೋಡಿಯೊಂದು ಮನವಿ ಮಾಡಿಕೊಂಡಿದೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ಜೋಡಿಯು ನಮ್ಮ ಮದ್ವೆಗೆ ಮನೆಯವರ ವಿರೋಧವಿದೆ, ಆದ್ರೆ ನಾವಿಬ್ರೂ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ನಮಗೆ ಈಗ ನಮ್ಮ ಮನೆಯವರ ಭೀತಿ ಎದುರಾಗಿದೆ, ಎಲ್ಲಿಯೂ ಇರೋಕಾಗ್ತಿಲ್ಲ.. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಜೋಡಿ ಮನವಿ ಮಾಡಿಕೊಂಡಿದೆ. ಈ ಮನವಿಯ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಗುಲಸಿಂದದ ನಿವಾಸಿ ಜೀವಿತಾ ಹಾಗೂ ದೊಡ್ಡಕುಂಚಾವು […]
ಹಾಸನ: ರಕ್ಷಣೆ ಕೋರಿ ಯುವ ಜೋಡಿಯೊಂದು ಮನವಿ ಮಾಡಿಕೊಂಡಿದೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ಜೋಡಿಯು ನಮ್ಮ ಮದ್ವೆಗೆ ಮನೆಯವರ ವಿರೋಧವಿದೆ, ಆದ್ರೆ ನಾವಿಬ್ರೂ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ನಮಗೆ ಈಗ ನಮ್ಮ ಮನೆಯವರ ಭೀತಿ ಎದುರಾಗಿದೆ, ಎಲ್ಲಿಯೂ ಇರೋಕಾಗ್ತಿಲ್ಲ.. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಜೋಡಿ ಮನವಿ ಮಾಡಿಕೊಂಡಿದೆ. ಈ ಮನವಿಯ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಗುಲಸಿಂದದ ನಿವಾಸಿ ಜೀವಿತಾ ಹಾಗೂ ದೊಡ್ಡಕುಂಚಾವು ಕೊಪ್ಪಲಿನ ರಾಕೇಶ್ ಇಬ್ಬರೂ ಸುಮಾರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇವರ ಈ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ ಇವರಿಬ್ಬರೂ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದಾರೆ.
ತಮ್ಮ ವಿವಾಹ ನೋಂದಣಿ ಪತ್ರ ತೋರಿಸಿ ನಾವು ಮದುವೆಯಾಗಿದ್ದು ನಮಗೆ ರಕ್ಷಣೆ ನೀಡಿ. ನಮಗೆ ನಮ್ಮ ಮನೆಯವರಿಂದ ಬೆದರಿಕೆ ಇದೆ ಎಂದು ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಯವರ ಭಯದಿಂದ ತಾವು ಎಲ್ಲಿಯೂ ಇರೋಕಾಗ್ತಿಲ್ಲ. ಹೇಗಾದ್ರು ರಕ್ಷಣೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ವೀಡಿಯೋ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
Published On - 12:04 pm, Fri, 29 November 19