ಮಂಗಳೂರು: ಮಂಗಳೂರು ತೈಲ ಶುದ್ಧೀಕರಣ ಘಟಕ (ಎಂಆರ್ಪಿಎಲ್) ಸಂಸ್ಥೆಯಲ್ಲಿ ಸ್ಥಳೀಯರು ಮತ್ತು ರಾಜ್ಯದ ಜನರಿಗೆ ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಸಂಸ್ಥೆಯ ಆವರಣದ ಬಳಿ ಜೆಡಿಎಸ್ ಕಾರ್ಯಕರ್ತ ಜತೆ ಅವರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಂಆರ್ಪಿಎಲ್ ಅಧಿಕಾರಿಗೆ ಸಂಸದ ಪ್ರಜ್ಬಲ್ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರ ಜಾಗ ಪಡೆದು ಇಲ್ಲಿ ಕಂಪೆನಿ ಸ್ಥಾಪಿಸದ್ದೀರಿ. ಈಗ ಉದ್ಯೋಗ ನೀಡುವುದಿಲ್ಲ ಎಂದು ನಿರಾಕರಿಸುವುದು ತಪ್ಪು ಎಂದು ಅವರು ಮಂಗಳೂರು ತೈಲ ಶುದ್ಧೀಕರಣ ಘಟಕ ಅಧಿಕಾರಿಯ ಬಳಿ ಎಚ್ಚರಿಕೆ ನೀಡಿದ್ದಾರೆ. ತಕ್ಷಣ ಎಲ್ಲರಿಗೂ ಉದ್ಯೋಗ ನೀಡಬೇಕು, ಇಲ್ಲದಿದ್ದರೆ ಲಾಕ್ಡೌನ್ ಮುಗಿದ ಬಳಿಕ ಉಗ್ರ ಹೋರಾಟ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಹಿಂದಿನ ಕಾರಣ
ಎಂಆರ್ಪಿಎಲ್ನಲ್ಲಿ (MRPL) ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ನಾಗರಿಕರಿಗೆ ಅವಕಾಶ ನೀಡಿಲ್ಲ ಅಥವಾ ಸೂಕ್ತ ಮಾನ್ಯತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಜನಸಾಮಾನ್ಯರು ಸಾಮಾಜಿಕ ಜಾಲತಾಣ, ಮನೆಮನೆ ಪ್ರತಿಭಟನೆ ಮುಂತಾದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಂಆರ್ಪಿಎಲ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಅವಕಾಶ ಸಿಗಬೇಕು ಎಂದು ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್’ (ತುಳುನಾಡ ಅಭಿವೃದ್ಧಿಯಲ್ಲಿ ತುಳುನಾಡ ಮಕ್ಕಳಿಗೆ ದೊಡ್ಡ ಪಾಲು) ಈ ಘೋಷಣೆಯೂ ಜೋರಾಗಿ ಕೇಳಿಬರುತ್ತಿದೆ.
1988ರಲ್ಲಿ ಸುರತ್ಕಲ್ ಬಳಿ ಸ್ಥಾಪನೆಯಾಗಿರುವ ಎಂಆರ್ಪಿಎಲ್ ಸಂಸ್ಥೆ ಸದ್ಯ ಭಾರತ ಸರ್ಕಾರದ ಎರಡನೇ ಅತೀ ದೊಡ್ಡ ಉದ್ಯಮವಾಗಿದೆ. ಸಾವಿರಾರು ಎಕರೆ ಜಾಗ ಕೊಟ್ಟ ಕಾರಣಕ್ಕೆ ಆರಂಭದಲ್ಲಿ ಕೆಲ ಸ್ಥಳೀಯರಿಗೆ ಉದ್ಯೋಗ ನೀಡಿದ್ದರೂ, ಕಳೆದ ಹಲವು ವರ್ಷಗಳಿಂದ ಕನ್ನಡಿಗರಿಗೆ ಉದ್ಯೋಗ ನೀಡದ ಕುರಿತು ತಕರಾರುಗಳು ಎದ್ದಿವೆ. ಈ ಬಾರಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ 223 ಹುದ್ದೆಗಳ ಪೈಕಿ ಕೇವಲ 13 ಸ್ಥಾನಗಳಿಗೆ ಮಾತ್ರ ಕರ್ನಾಟಕದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿದೆ. ನೇಮಕಾತಿ ನೋಟಿಫಿಕೇಷನ್ನ 223 ಅವಕಾಶಗಳಿಗೆ ಒಟ್ಟು 60 ಸಾವಿರ ಅರ್ಜಿ ಬಂದಿತ್ತು. ಇವರಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗಿದೆ.
ಇದನ್ನೂ ಓದಿ: MRPL: ‘ನಮ್ಮ ನೆಲದಲ್ಲಿ ಮೊದಲು ನಮಗೆ ಉದ್ಯೋಗ ಸಿಗಲಿ’; ಎಂಆರ್ಪಿಎಲ್ ನೇಮಕಾತಿ ಹೋರಾಟದ ವಿಶೇಷ ವರದಿ ಇಲ್ಲಿದೆ
Delta Plus Variant: ಕರ್ನಾಟಕದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ
(Hassan MP Prajwal Revanna warns MRPL for not given jobs for Kannadigas in Mangaluru)
Published On - 8:49 pm, Wed, 23 June 21