AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delta Plus Variant: ಕರ್ನಾಟಕದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೈರಸ್​ ಪತ್ತೆಯಾಗಿಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಮೈಸೂರಿನಲ್ಲಿ ಪತ್ತೆಯಾದ ಬಗ್ಗೆ ಸಚಿವರ ಹೇಳಿಕೆ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

Delta Plus Variant: ಕರ್ನಾಟಕದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೈರಸ್​ ಪತ್ತೆಯಾಗಿಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಬಿ.ಎಸ್.ಯಡಿಯೂರಪ್ಪ
TV9 Web
| Edited By: |

Updated on:Jun 23, 2021 | 5:36 PM

Share

ಬೆಂಗಳೂರು: ಕರ್ನಾಟಕದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೈರಸ್​ ಪತ್ತೆಯಾಗಿಲ್ಲ. ಡೆಲ್ಟಾ ಪ್ಲಸ್ ವೈರಸ್ ಪತ್ತೆ ಅನ್ನುವುದೆಲ್ಲಾ ಊಹಾಪೋಹ. ಮೈಸೂರಿನಲ್ಲಿ ಪತ್ತೆಯಾದ ಬಗ್ಗೆ ಸಚಿವರ ಹೇಳಿಕೆ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಕೊರೊನಾ ವೈರಾಣುಗಳ ಮತ್ತೊಂದು ರೂಪವಾದ ಡೆಲ್ಟಾದ ಹೊಸ ರೂಪ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುಗಳು ಇದೀಗ ಭಾರತದಲ್ಲಿ ದೊಡ್ಡ ತಲೆನೋವಾಗಿ ಪರಿಗಣಮಿಸಿವೆ. ಈವರೆಗೆ ಈ ಪ್ರಭೇದವನ್ನು ಆಸಕ್ತಿಕರ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ರೂಪಾಂತರಿ ಕಳವಳಕಾರಿ ಎಂದು ಘೋಷಿಸಿದೆ. ಮಹಾರಾಷ್ಟ್ರದ 22 ಸೋಂಕಿತರಲ್ಲಿ ಈ ವೈರಾಣು ಕಾಣಿಸಿದೆ. ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಪತ್ತೆಯಾದ ಕೆಲ ಸೋಂಕಿತರಲ್ಲಿಯೂ ಈ ಪ್ರಭೇದದ ವೈರಾಣು  ಪತ್ತೆಯಾಗಿದೆ.

ವಿಶ್ವದ 80 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ. ಇದರಂತೆಯೇ ಡೆಲ್ಟಾ ಪ್ಲಸ್ ಸಹ ವೇಗವಾಗಿ ಹರಡುವ ಮತ್ತು ತೀವ್ರ ಸೋಂಕು ಉಂಟು ಮಾಡುವ ರೂಪಾಂತರಿ ಎನಿಸಿದೆ. ಸೋಂಕಿತರ ಶ್ವಾಸಕೋಶದ ಜೀವಕೋಶಗಳನ್ನು ತೀವ್ರವಾಗಿ ಬಾಧಿಸುವ ಈ ವೈರಾಣು, ಪ್ರತಿಕಾಯಗಳ ವ್ಯವಸ್ಥೆಯನ್ನೂ ಹಾಳುಗೆಡವುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕೊವಿಡ್ ಚಿಕಿತ್ಸಾ ಕ್ರಮಗಳು ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿಯಾಗಬಲ್ಲುದೆ ಎಂಬ ಬಗ್ಗೆ ಅನುಮಾನಗಳಿವೆ. ಲಸಿಕೆಗಳಿಂದ ಎಷ್ಟರಮಟ್ಟಿಗೆ ಪ್ರಯೋಜನವಾದೀತು ಎಂಬ ಬಗ್ಗೆಯೂ ಪ್ರಶ್ನೆಗಳಿವೆ.

Simply Explained : ಏನಿದು ಡೆಲ್ಟಾ.. ಡೆಲ್ಟಾ ಪ್ಲಸ್ ವೈರಸ್, 3rd Wave ಹೇಗಿರುತ್ತೆ: ?

ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧವೂ ಪರಿಣಾಮಕಾರಿ ಎಂದು ಸರ್ಕಾರವು ಹೇಳಿದೆ. ಜಿನೋಮ್ ತಪಾಸಣೆ ನಡೆಸುತ್ತಿರುವ ಇನ್​ಸಾಕೊಗ್​ ಡೆಲ್ಟಾ ಪ್ಲಸ್ ರೂಪಾಂತರಿಯನ್ನು ಕೊರೊನಾ ವೈರಾಣುವಿನ ಅಪಾಯಕಾರಿ ರೂಪಾಂತರಿ ಎಂದು ಘೋಷಿಸಿದೆ.

ಇದನ್ನೂ ಓದಿ: ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

(CM Yediyurappa says no Delta Plus Variant found in Karnataka)

Published On - 5:22 pm, Wed, 23 June 21