ಹಾಸನ: ನಿನ್ನೆ (ಸೆ.10) ಗಣಪತಿ ವಿಸರ್ಜನೆ ವೇಳೆ ಯುವಕರ ಗುಂಪು ಪೊಲೀಸರನ್ನೇ ತಳ್ಳಾಡಿದ್ದು, ತಳ್ಳಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಿಜೆ ಡ್ಯಾನ್ಸ್ (DJ Dance) ತಡೆಯಲು ಸಬ್ ಇನ್ಸ್ಪೆಕ್ಟರ್ ಬಸವರಾಜು ಮತ್ತು ಚಿಂಚೋಳಿ ಪಿಎಸ್ಐ ಮುಂದಾಗುತ್ತಾರೆ. ಈ ವೇಳೆ ಯುವಕರ ಗುಂಪು ಸಬ್ ಇನ್ಸ್ಪೆಕ್ಟರ್ ಮತ್ತು ಪಿಎಸ್ಐ ಜೊತೆ ಮಾತಿನ ಚಕಮಕಿ ನಡೆಸಿ ತಳ್ಳಾಡಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಭಜರಂಗ ದಳದ ರಘು ಮತ್ತು ಅವರ ಸಂಗಡಿಗರು ಡಿಜೆ ಡ್ಯಾನ್ಸ್ ತಡೆಯಲು ಮುಂದಾದ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಬ್ಯಾಂಡ್ ಬಾರಿಸದಂತೆ ಪಿಎಸ್ಐ ಕೋಲು ಕಸಿದುಕೊಳ್ಳುತ್ತಾರೆ. ಸಬ್ ಇನ್ಸ್ಪೆಕ್ಟರ್ ಕೈಯಲ್ಲಿದ್ದ ಬ್ಯಾಂಡ್ ಸೆಟ್ ಕೋಲನ್ನು ಯುವಕನೊಬ್ಬ ಕಸಿದುಕೊಳ್ಳುತ್ತಾನೆ. ಸರ್ಕಾರದ ನಿಯಮದಂತೆ ಡಿಜೆ ತಡೆಯಲು ಪೊಲೀಸರು ಮುಂದಾಗುತ್ತಾರೆ. ಆದರೆ ಯುವಕರು ಇದಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ. ಸದ್ಯ ಮಾತಿನ ಚಕಮಕಿ ನಡೆದಿರುವ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದುವರೆಗೆ ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಎರಡು ಗುಂಪುಗಳ ನಡುವೆ ಗಲಾಟೆ
ಗದಗ: ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೀರೆ ಬಜಾರ ಪ್ರದೇಶದಲ್ಲಿ ಸಂಭವಿಸಿದೆ. ಮೊದಲ ದಿನ ಗಣೇಶ ವಿಸರ್ಜನೆ ಮಾಡುವ ವೇಳೆ ಗಲಾಟೆ ನಡೆದಿದೆ. ಜನ ಗುಂಪು ಗುಂಪಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಮಾತಿಗೆ ಮಾತು ಬೆಳೆದು ಎರಡು ಗುಂಪು ಪರಸ್ಪರ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವ ಯುವಕನಿಗೆ ತಲೆಗೆ ಪಟ್ಟು ಬಿದ್ದಿದ್ದು, ಗಜೇಂದ್ರಗಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಜೇಂದ್ರಗಡ ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ
ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ಗೆ ಕುರಿಗಳನ್ನು ಕೊಡುಗೆಯಾಗಿ ನೀಡಿದ ಕಾಂಗ್ರೆಸ್ ಕಾರ್ಯಕರ್ತ
(A group of youths have pushed the police over Ganesha discharge in hassan)