Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಿಗೆ 2 ಡೋಸ್​ ಲಸಿಕೆ ಆಗಿದೆ, ಇನ್ನೂ ಮನೆಯಲ್ಲಿದ್ದರೆ ನನಗೆ ಕಷ್ಟ; ವರ್ಕ್​ ಫ್ರಂ ಹೋಮ್​ ನಿಲ್ಲಿಸಿ ಎಂದು ಮನವಿ ಮಾಡಿದ ಹೆಂಡತಿ

ಮಹಿಳೆಯೊಬ್ಬರು ತನ್ನ ಪತಿರಾಯನ ವರ್ಕ್​ ಫ್ರಂ ಹೋಮ್​ನಿಂದ ತನಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದನ್ನು ವಿವರಿಸಿದ್ದು, ಆದಷ್ಟು ಬೇಗ ಆತನನ್ನು ಆಫೀಸಿಗೆ ಕರೆಸಿಕೊಳ್ಳಿ. ಇಲ್ಲವಾದರೆ, ನಮ್ಮ ವೈವಾಹಿಕ ಜೀವನವೇ ತೊಂದರೆಗೆ ಸಿಲುಕಲಿದೆ ಎಂದು ಹೇಳಿಕೊಂಡಿದ್ದಾರೆ.

ಗಂಡನಿಗೆ 2 ಡೋಸ್​ ಲಸಿಕೆ ಆಗಿದೆ, ಇನ್ನೂ ಮನೆಯಲ್ಲಿದ್ದರೆ ನನಗೆ ಕಷ್ಟ; ವರ್ಕ್​ ಫ್ರಂ ಹೋಮ್​ ನಿಲ್ಲಿಸಿ ಎಂದು ಮನವಿ ಮಾಡಿದ ಹೆಂಡತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on:Sep 11, 2021 | 11:26 AM

ವರ್ಕ್​ ಫ್ರಂ ಹೋಮ್​ ಪರಿಕಲ್ಪನೆ ತೀರಾ ಸಾಮಾನ್ಯ ಎಂಬಂತಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಕೊರೊನಾ ದೆಸೆಯಿಂದಾಗಿ ಅನಿವಾರ್ಯವಾಗಿ ಶುರುವಾದ ಈ ಪದ್ಧತಿಗೆ ಜನರು ಕೂಡಾ ಹೊಂದಿಕೊಂಡು ಬಿಟ್ಟಿದ್ದಾರೆ. ಅನೇಕರು ವರ್ಕ್​ ಫ್ರಂ ಹೋಮ್​ಗೆ ಒಗ್ಗಿಕೊಂಡು ಖುಷಿಯಿಂದ ಕೆಲಸ ಮಾಡುತ್ತಿದ್ದರೆ ಕೆಲವರು ಮಾತ್ರ ಆಫೀಸಿಗಿಂತ ದುಪ್ಪಟ್ಟು ಕೆಲಸವನ್ನು ನಮ್ಮಿಂದ ಮಾಡಿಸಿಕೊಳ್ಳುತ್ತಿದ್ದಾರೆ ಹೀಗಾಗಿ ಆಫೀಸಿನ ಬಾಗಿಲು ತೆರೆದರೆ ಸಾಕು ಎನ್ನುತ್ತಿದ್ದಾರೆ. ಈ ಎರಡು ವರ್ಗದವರನ್ನು ಹೊರತುಪಡಿಸಿ ಇನ್ನೊಂದು ವರ್ಗದವರ ಅಭಿಪ್ರಾಯವನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ. ಅದು ಮನೆ ಮಂದಿಯದ್ದು!

ಆಫೀಸ್​ ಇದ್ದಾಗ ಗಂಡ ಅಥವಾ ಮಕ್ಕಳು ಬೆಳಗ್ಗೆ ಮನೆಯಿಂದ ಹೊರಟರೆ ಸಂಜೆ ಅಥವಾ ರಾತ್ರಿ ವೇಳೆಗೆ ಮನೆಗೆ ಬರುತ್ತಿದ್ದರು. ಅಷ್ಟರಲ್ಲಿ ಗೃಹಿಣಿಯರು ಮನೆಯ ಕೆಲಸವನ್ನೆಲ್ಲಾ ಮಾಡಿಕೊಂಡು ಒಂದಷ್ಟು ಹೊತ್ತು ಟಿವಿ ನೋಡಿ, ತಮಗಿಷ್ಟ ಬಂದಂತೆ ಕಾಲ ಕಳೆದು ಆಫೀಸಿಗೆ ಹೋದವರು ಸಂಜೆ ಮರಳಿ ಬರುವಷ್ಟರಲ್ಲಿ ಮುಂದಿನ ಕೆಲಸಕ್ಕೆ ಸಜ್ಜಾಗುತ್ತಿದ್ದರು. ಆದರೆ, ವರ್ಕ್​ ಫ್ರಂ ಹೋಮ್​ ಆರಂಭವಾದ ಮೇಲೆ ಗೃಹಿಣಿಯರ ವೇಳಾಪಟ್ಟಿಯೂ ಸಂಪೂರ್ಣ ಅದಲುಬದಲಾಗಿದ್ದು, ಎಷ್ಟೊತ್ತಿಗೂ ಮನೆಯಲ್ಲಿ ಕೂತು ಕೆಲಸ ಮಾಡುವವರ ತಾಳಕ್ಕೆ ತಕ್ಕಂತೆ ಕುಣಿಯುವುದೇ ಆಗುತ್ತಿದೆ. ವೈಯಕ್ತಿಕವಾಗಿ ನಮಗೆ ಒಂದಷ್ಟು ಸಮಯ, ಬಿಡುವು ಎನ್ನುವುದೇ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

ಈ ಆರೋಪ ತುಸು ಗಂಭೀರವೂ ಆಗಿದ್ದು ಅದು ಹೇಗೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನುವುದಕ್ಕೆ ಉದ್ಯಮಿ ಹರ್ಷ್ ಗೊಯೆಂಕಾ ಹಂಚಿಕೊಂಡ ಟ್ವೀಟ್ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ತನ್ನ ಪತಿರಾಯನ ವರ್ಕ್​ ಫ್ರಂ ಹೋಮ್​ನಿಂದ ತನಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದನ್ನು ವಿವರಿಸಿದ್ದು, ಆದಷ್ಟು ಬೇಗ ಆತನನ್ನು ಆಫೀಸಿಗೆ ಕರೆಸಿಕೊಳ್ಳಿ. ಇಲ್ಲವಾದರೆ, ನಮ್ಮ ವೈವಾಹಿಕ ಜೀವನವೇ ತೊಂದರೆಗೆ ಸಿಲುಕಲಿದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಗಂಡನನ್ನು ಆದಷ್ಟು ಬೇಗ ಆಫೀಸಿಗೆ ಕರೆಸಿಕೊಳ್ಳಿ. ಆತನಿಗೆ ಎರಡು ಡೋಸ್​ ಕೊರೊನಾ ಲಸಿಕೆಯೂ ಆಗಿರುವುದರಿಂದ ಅವನಿಗೆ ಸಮಸ್ಯೆ ಇಲ್ಲ. ಆತ ಇನ್ನೂ ಮನೆಯಲ್ಲಿದ್ದರೆ ನನಗೆ ದೊಡ್ಡ ಸಮಸ್ಯೆಯಾಗುತ್ತದೆ. ಅದು ನಮ್ಮ ವೈವಾಹಿಕ ಜೀವನಕ್ಕೂ ಕಂಟಕವಾಗಬಹುದು. ಆತ ದಿನಕ್ಕೆ ಏನಿಲ್ಲವೆಂದರೂ 10 ಬಾರಿ ಕಾಫಿ ಕುಡಿಯುತ್ತಾನೆ. ಬೇರೆ ಬೇರೆ ರೂಮ್​ಗಳಲ್ಲಿ ಕುಳಿತು ಕೆಲಸ ಮಾಡುವುದಲ್ಲದೇ ಎಲ್ಲಾ ಕಡೆಯೂ ರಂಪಾಟ ಮಾಡಿಡುತ್ತಾನೆ. ಆಫೀಸ್​ ಕರೆ ಇದ್ದಾಗಲೂ ಮಲಗಿಕೊಂಡೇ ಮಾತಾಡುವುದನ್ನು ನಾನು ನೋಡಿದ್ದೇನೆ. ನನಗೆ ಈಗಾಗಲೇ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಅದರೊಟ್ಟಿಗೆ ಈತನ ಚಾಕರಿ ಮಾಡಿ ಸಾಕಾಗಿದೆ. ದಯವಿಟ್ಟು ಅವನನ್ನು ಆಫೀಸಿಗೆ ಕರೆಸಿಕೊಂಡು ಉಪಕರಿಸಿ ಎಂದು ಮನವಿ ಮಾಡಿದ್ದಾಳೆ.

ಇದನ್ನು ಹರ್ಷ್ ಗೊಯೆಂಕಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಸದ್ಯ ಈ ಟ್ವೀಟ್​ ಎಲ್ಲರ ಗಮನ ಸೆಳೆದಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದನ್ನು ನೋಡಿ ಇನ್ನಷ್ಟು ಗೃಹಿಣಿಯರು ಇಂಥದ್ದೇ ಬೇಡಿಕೆ ಇಟ್ಟರೂ ಅಚ್ಚರಿ ಇಲ್ಲ.

ಇದನ್ನೂ ಓದಿ: Pay Cut: ಸಿಬ್ಬಂದಿ ಶಾಶ್ವತವಾದ ವರ್ಕ್​ ಫ್ರಮ್ ಹೋಮ್ ಮಾಡಿದಲ್ಲಿ ಗೂಗಲ್​ನಿಂದ ಶೇ 5ರಿಂದ ಶೇ 25ರ ತನಕ ವೇತನ ಕಡಿತ 

Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?

(Wife requests to stop Work from Home for her husband tweet gone viral)

Published On - 11:23 am, Sat, 11 September 21

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ