ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ; ಸಿಎಂ ಪುತ್ರ ಯತೀಂದ್ರ ಪರ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್​​

| Updated By: ಆಯೇಷಾ ಬಾನು

Updated on: Nov 16, 2023 | 1:39 PM

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಪರ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್​​ ಮಾಡಿದ್ದಾರೆ. ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ ಎಂದರು.

ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ; ಸಿಎಂ ಪುತ್ರ ಯತೀಂದ್ರ ಪರ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್​​
ಜೆಡಿಎಸ್ ನಾಯಕ ಹೆಚ್​​ ಡಿ ರೇವಣ್ಣ
Follow us on

ಹಾಸನ, ನ.16: ಸಹೋದರ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ (HD Kumaraswamy) ಅವರೇ ದಿಢೀರ್ ಸುದ್ದಿಗೋಷ್ಠಿ ಕರೆದು ಸಿಎಂ ಪುತ್ರ ಯತೀಂದ್ರ ವಿಡಿಯೋ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಸರ್ಕಾರ ಹಾಗೂ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದ್ರೆ, ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ (HD Revanna) ಅವರು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪರ ಬ್ಯಾಟಿಂಗ್ ಮಾಡಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ.

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಪರ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್​​ ಮಾಡಿದ್ದಾರೆ. ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕೆಂದು ಹೇಳ್ತಾರೆ, ಇದು ತಪ್ಪಾ? ಯತೀಂದ್ರ ಶಾಸಕರಾಗಿದ್ದರು, ಕೆಲಸ ಆಗಬೇಕೆಂದು ಹೇಳಿರಬಹುದು. ಯತೀಂದ್ರ ಮುಖ್ಯಮಂತ್ರಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದೆಕ್ಕಲ್ಲಾ ನಾನು ಸಣ್ಣದಾಗಿ ಮಾತನಾಡಲು ಹೋಗಲ್ಲ. ಹೆಚ್​ಡಿಡಿ PWD ಸಚಿವರಾಗಿದ್ದಾಗ ನಾನು ಅವರ ಕ್ಷೇತ್ರ ನೋಡಿಕೊಳ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರುತ್ತಾರೆ ಎಂದು ಹಾಸನದಲ್ಲಿ ಯತೀಂದ್ರ ಪರ JDS​ ಶಾಸಕ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಯತೀಂದ್ರ ಲಿಸ್ಟ್ ವಿಡಿಯೋ ವೈರಲ್: ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಕುಮಾರಸ್ವಾಮಿ

ಯತೀಂದ್ರ ವೈರಲ್ ವಿಡಿಯೋದಲ್ಲೇನಿದೆ?

ನಾನ್ ಹೇಳಿರೋ ಲಿಸ್ಟ್ ಫೈನಲ್ ಮಾಡಿ. ನಾನು ಕೊಟ್ಟ ನಾಲ್ಕೈದು ಮಾತ್ರ, ಅಷ್ಟೇ ಮಾಡಿ ಅಂತಾ ಹೇಳಿ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ಇದೇ ವೈರಲ್ ವಿಡಿಯೋ ಈಗ ಆಡಳಿತ ಪಕ್ಷ ವಿಪಕ್ಷಗಳ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಯತೀಂದ್ರ ತಮ್ಮ ತಂದೆ ಕ್ಷೇತ್ರ ವರುಣಾದಲ್ಲಿ ಜನ ಸಂಪರ್ಕ ಸಭೆ ಮಾಡೋ ವೇಳೆ ದೂರವಾಣಿಯಲ್ಲಿ ಹಲೋ ಅಪ್ಪಾ ಎಂದು ಉಲ್ಲೇಖಿಸಿ ಲಿಸ್ಟ್ ಬಗ್ಗೆ ಮಾತಾಡಿದ್ದಾರೆ. ಜನರ ಮುಂದೆಯೇ ವಿವೇಕಾನಂದ ಯಾರು..ಮಹದೇವ್​ಗೆ ಫೋನ್​ ಕೊಡಿ ಅಂತಾ ಹೇಳಿದ್ದಾರೆ. ಬಳಿಕ ಮಹದೇವ್ ಅನ್ನೋರಿಗೆ, ನಾನು ಕೊಟ್ಟಿದ್ದೇ ಐದು, ನಾನ್ ಕೊಟ್ಟಿರುವ ನಾಲ್ಕೈದು ಮಾತ್ರ ಅಷ್ಟೇ ಮಾಡಿ ಎಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ