ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ: ಕೆಹೆಚ್​ ಮುನಿಯಪ್ಪ

| Updated By: ವಿವೇಕ ಬಿರಾದಾರ

Updated on: Aug 26, 2023 | 1:46 PM

ರಾಜ್ಯದಲ್ಲಿ ಬಿಪಿಲ್​​ ಕಾರ್ಡ್​​ಗಳನ್ನು ರದ್ದು ಮಾಡಲಾಗುತ್ತದೆ ಎಂದು ಊಹಾಪೋಹಗಳು ಎದ್ದಿದ್ದವು. ಇದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್​ ಮುನಿಯಪ್ಪ ತೆರೆ ಎಳೆದಿದ್ದು, ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ: ಕೆಹೆಚ್​ ಮುನಿಯಪ್ಪ
ಸಚಿವ ಕೆಹೆಚ್​​ ಮುನಿಯಪ್ಪ
Follow us on

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಬಿಪಿಎಲ್ (BPL)​ ಕಾರ್ಡ್​ ರದ್ದು ಮಾಡುವುದಿಲ್ಲ. ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ 3 ಲಕ್ಷ ಜನರು ಅರ್ಜಿ ಹಾಕಿದ್ದರು. ಅರ್ಜಿ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್​ ಮುನಿಯಪ್ಪ (KH Muniyappa) ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇನ್ನು ಮೂರು ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್​, ಎಪಿಎಲ್​​ ಕಾರ್ಡ್ ನೀಡಲಾಗುತ್ತೆ. ಬ್ಯಾಂಕ್ ಖಾತೆ ಇಲ್ಲದಿದ್ದಕ್ಕೆ ಕೆಲವರ ಕಾರ್ಡ್ ರದ್ದಾಗಿತ್ತು. ಈ ಬಗ್ಗೆಯೂ ಕೂಡ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ನಾಲ್ಕು ಚಕ್ರ ವಾಹನ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಮಾತನಾಡಿದ ಅವರು ಈ ನಿಯಮ ಬಿಜೆಪಿ ಸರ್ಕಾರದ ಅವದಿಯದ್ದು ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೆ ತೀರ್ಮಾನವಿಲ್ಲ. 1.28 ಕೋಟಿ ಜನರು ಪಡಿತರ ಚೀಟಿ ಹೊಂದಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡಿ ಎಲ್ಲರಿಗೂ ಅಕ್ಕಿ ವಿತರಣೆ ಮಾಡುವ ಬಗ್ಗೆ ಕ್ರಮವಹಿಸುತ್ತೇವೆ. ಯಾರು ಅರ್ಹರಿರುತ್ತಾರೆ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ:BPL Card: ಬಿಪಿಎಲ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ; ಮಾನದಂಡಗಳೇನು?

ಹೊಸ ಪಡಿತರ ಚೀಟಿ ಅರ್ಜಿಗೆ ಅನುಮತಿ ಇಲ್ಲ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗುತ್ತಿದ್ದಂತೆಯೇ, ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಆನ್‌ಲೈನ್‌ ಪೋರ್ಟಲ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದು ಈ ಪೋರ್ಟ್​​ಲ್​ ಅನ್ನು ಆರಂಭಮಾಡಿಲ್ಲ. ಈ ಬಗ್ಗೆ ಇತ್ತೀಚಿಗೆ ಕೆ.ಹೆಚ್​ ಮುನಿಯಪ್ಪ ಮಾತನಾಡಿ ಹೊಸ ಪಡಿತರ ಚೀಟಿ (ಎಪಿಎಲ್)​, (ಬಿಪಿಎಲ್)​ ಕಾರ್ಡ್​​ಗೆ ಅರ್ಜಿ ಸಲ್ಲಿಸಲು ಇನ್ನೂ ಒಂದಿಷ್ಟು ದಿನ ಅನುಮತಿ ಇಲ್ಲ ಎಂದು ಹೇಳಿದ್ದರು. ಆದರೆ ಇದಕ್ಕೆ ಕಾರಣ ಮಾತ್ರ ನೀಡಿರಲಿಲ್ಲ.

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರ ಶಾಕ್​

ಅರ್ಹತೆ ಇಲ್ಲದಿದ್ದರೂ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ನಾಗರಿಕರಿಗೆ ಆರೋಗ್ಯ ಶಾಕ್​ ನೀಡಿತ್ತು. ಆಹಾರ ಇಲಾಖೆಯು ಸರ್ವೇ ನಡೆಸಿ 35 ಸಾವಿರಕ್ಕೂ ಹೆಚ್ಚು ಕಾರ್ಡ್​​​ಗಳನ್ನು ರದ್ದುಗೊಳಿಸಿತ್ತು. ಅಲ್ಲದೇ ಮರಣ ಹೊಂದಿದ 4.55 ಲಕ್ಷ ಜನರ ಹೆಸರನ್ನು ಕಡಿತಗೊಳಿಸುವ ಮೂಲಕ ಸರ್ಕಾರಕ್ಕೆ 6 ರಿಂದ 7 ಕೋಟಿ ರೂ. ಉಳಿತಾಯವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ