ಹಳೇಬೀಡಿನ ಪುಷ್ಪಗಿರಿ ಮಠದ ಸ್ವಾಮೀಜಿಗೆ ಜೀವ ಬೆದರಿಕೆ: ಬಹಿರಂಗವಾಗಿ ನೋವು ತೊಡಿಕೊಂಡ ಶ್ರೀಗಳು

| Updated By: ವಿವೇಕ ಬಿರಾದಾರ

Updated on: Dec 13, 2023 | 10:11 AM

ಬೇಲೂರು ತಾಲೂಕಿನ ಹಳೇಬೀಡಿನ ಶ್ರೀಕ್ಷೇತ್ರ ಪುಷ್ಪಗಿರಿ ಮಠದ ಪೀಠಾದ್ಯಕ್ಷ ಶ್ರೀ ಸೋಮಶೇಖರ‌ ಶಿವಚಾರ್ಯ ಮಹಾಸ್ವಾಮೀಜಿ ಅವರಿಗೆ ಜೀವ ಬೇದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಶ್ರೀಗಳು ಮಂಗಳವಾರ ನಡೆದ ಲಕ್ಷದೀಪೋತ್ಸ್​​​ವ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿದ್ದಾರೆ.

ಹಳೇಬೀಡಿನ ಪುಷ್ಪಗಿರಿ ಮಠದ ಸ್ವಾಮೀಜಿಗೆ ಜೀವ ಬೆದರಿಕೆ: ಬಹಿರಂಗವಾಗಿ ನೋವು ತೊಡಿಕೊಂಡ ಶ್ರೀಗಳು
ಪುಷ್ಪಗಿರಿ ಮಠದ ಪೀಠಾದ್ಯಕ್ಷ ಶ್ರೀ ಸೋಮಶೇಖರ‌ ಶಿವಚಾರ್ಯ ಮಹಾಸ್ವಾಮೀಜಿ
Follow us on

ಹಾಸನ, ಡಿಸೆಂಬರ್​​ 13: ಬೇಲೂರು (Beluru) ತಾಲೂಕಿನ ಹಳೇಬೀಡಿನ (Helebidu) ಶ್ರೀಕ್ಷೇತ್ರ ಪುಷ್ಪಗಿರಿ ಮಠದ ಪೀಠಾದ್ಯಕ್ಷ ಶ್ರೀ ಸೋಮಶೇಖರ‌ ಶಿವಚಾರ್ಯ ಮಹಾಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸ್ವಾಮೀಜಿ (Swamiji) ಅವರೇ ಆತಂಕ ಹೊರ ಹಾಕಿದ್ದಾರೆ. ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ಅವರು ಇನ್ನೂ ನೂರು ವರ್ಷಕಾಲ ಬಾಳಿ ಅಂತ ಹೇಳುತ್ತಿದ್ದರು. ನಮಗೆ ಹದಿನೈದು ವರ್ಷಕ್ಕೆ ಸಾಕಾಗಿದೆ, ಇನ್ನೂ ನೂರು ವರ್ಷ ದೇವರೇ ಬಲ್ಲ. ಸದ್ಯಕ್ಕೆ ಬೇಡ ನೂರು ವರ್ಷ. ಏಕೆಂದರೆ ಈಗಲೇ ಹೇಳುತ್ತಿದ್ದಾರೆ, “ರೋಡ್‌ನಲ್ಲಿ ಸಿಗಲಿ ಕೊಚ್ಚಿ ಹಾಕುತ್ತೇವೆ, ರೋಡ್‌ನಲ್ಲಿ ಸಿಗಲಿ ಹೊಡೆದು ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ” ಎಂದು ಸ್ವಾಮೀಜಿ ಹೇಳಿದರು.

ಪುಷ್ಪಗಿರಿ ಮಠದಲ್ಲಿ ಮಂಗಳವಾರ ರಾತ್ರಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಾಗಾಗಿ ಹಂಗೆಲ್ಲ ಕೊಚ್ಚಿಸಿಕೊಂಡು ಇನ್ನೊಂದು ಆಗೋದಕ್ಕಿಂತ, ಭಗವಂತ ಆಯಸ್ಸು ಕಡಿಮೆ ಮಾಡಿ, ಅವರ ಕೈಯಲ್ಲಿ ಹೋಗುವಂತಹ ಅವಕಾಶ ನಮಗೆ ಸಿಕ್ಕರೆ ಅದು ಸ್ವರ್ಗ ಅಂತ ಭಾವಿಸುತ್ತೇವೆ. ಈಗ ವೀರ ಮರಣ ಸಾವನ್ನಪ್ಪಬೇಕು ಅಂತಾರೆ. ಹೆದರಿ ಹಿಂದೆ ಓಡಿ ಹೋಗಿ ಸಾಯೋಲ್ಲ. ಹೀಗಾಗಿ ಎದುರುಗಡೆ ಕೊಚ್ಚಿಸಿಕೊಂಡು ಹೋದರೆ ನಮಗೆ ಸ್ವರ್ಗ ಸಿಗುತ್ತೆ ಎಂದರು.

ನಾವು ಕೆಲಸ ಮಾಡಿದ್ದೇವೆ ನಮ್ಮ ಹೆಸರು ಉಳಿಯುತ್ತೆ, ನಮ್ಮ ಹೆಸರಿಗಾಗಿ ಓಡಾಡುವುದು ಏನಿಲ್ಲ. ಸಮಾಜ, ಧರ್ಮಕ್ಕೆ ನನ್ನ ಸೇವೆ ಅಂತ ಭಾವಿಸಿದ್ದೇನೆ. ಇದು ಎಲ್ಲರಿಗೂ ಬೇಸರ ಆಗಬಹುದು, ಆದರೆ ನಮ್ಮ ನಿಲುವನ್ನ ಹೇಳಲೇಬೇಕು. ವೇದಿಕೆ, ಮೀಟಿಂಗ್‌, ವೈಯುಕ್ತಿಕವಾದರೂ ಹೇಳಲೇಬೇಕಿತ್ತು ಹೇಳಿದ್ದೇನೆ. ಏಕೆಂದರೆ ಸಣ್ಣ ಸಣ್ಣ ಸಮಾಜಗಳು ಇವತ್ತು ದೊಡ್ಡ ದೊಡ್ಡ ಕ್ರಾಂತಿಯನ್ನು ಮಾಡುತ್ತಿವೆ. ಅದನ್ನು ನೋಡಿದ ಸಂದರ್ಭದಲ್ಲಿ ನಮಗೆ ಅಲ್ಲಿ, ಇಲ್ಲಿ, ಇನ್ನೊಂದು ಮಾಡೋಣ ಅನಿಸುತ್ತದೆ. ಆ ಶಕ್ತಿ ಇದೆ, ಆದರೆ ಸಹಕಾರ ಇಲ್ಲದ್ದಕ್ಕಾಗಿ ಸಾಧ್ಯವಾಗುವುದಿಲ್ಲ ಎಂದು ನೋವು ತೋಡಿಕೊಂಡರು.

ಇದನ್ನೂ ಓದಿ: ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ: ಪ್ರಣವಾನಂದ್ ಸ್ವಾಮೀಜಿ

ಮುಂದಿನ ದಿನಗಳಲ್ಲಿ ನೀವೇ ನಿಂತುಕೊಂಡು ಕಾರ್ಯಕ್ರಮಗಳನ್ನು ನೆಡೆಸಿಕೊಳ್ಳಿ, ನಾವು ನಿಮಿತ್ತ ಮಾತ್ರ ಇರುತ್ತೇವೆ. ಹೇಗೆ ಕಾರ್ಯಕ್ರಮ ಮಾಡಬೇಕು ಅಂತ ಹೇಳಿ ನಾವು ಮಾಡಿಕೊಂಡು ಹೋಗುತ್ತೇವೆ. ಬಹುಶಃ ನೀವು ಇದ್ದರೆ ಪರವಾಗಿಲ್ಲ. ಮುಂದೆ ಯಾರೇ ಬಂದರೂ ಕೂಡ ಸರ್ಕಾರ ಆಡಾಳಿತಾತ್ಮಕವಾಗಿ ಏನಿದೆ ಅದನ್ನು ನಡೆಸಿಕೊಂಡು ಹೋಗಿ. ಈ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮ ರೀತಿ ಮಾಡಿಕೊಂಡು ಹೋಗಿ ಎಂದು ಹೇಳಿದರು.

ಈ ಹಿಂದೆ ಮಾವಿನತೋರಣ ಕಟ್ಟುವಾಗ ಜಗಳವಾಗಿದೆ. ಬಹುಶಃ ನನಗೂ ಸಾಕಾಗುತ್ತಿದೆ ಆದ್ದರಿಂದ ನೀವೇ ವಹಿಸಿಕೊಳ್ಳಿ. ಈ ಪುಷ್ಪಗಿರಿ ಕ್ಷೇತ್ರ ಯಾವ ಜಾತಿಗೆ ಸೀಮಿತವಾಗಬಾರದು ಎಂಬ ಉದ್ದೇಶ ನಮಗಿದೆ. ಎಲ್ಲರಿಗೂ ಏಕಕಾಲದಲ್ಲಿ ಶಾಂತಿ, ಸಮಾಧಾನ ಬಿತ್ತುವಂತಹ, ಪ್ರಸಾದ ಕೊಡುವಂತಹ ಏಕೈಕ ಕ್ಷೇತ್ರ ಪುಷ್ಪಗಿರಿ ಆಗಬೇಕು ಎನ್ನುವುದು ನನ್ನ ಮನಸ್ಥಿತಿ ಇದೆ. ಹಾಗಾಗಿ ನಾವು ಯಾವತ್ತು ಜಾತಿಗೆ ಸೀಮಿತವಾಗುವುದಿಲ್ಲ ಎಂದು ತಿಳಿಸಿದರು.

ಆಕಸ್ಮಿಕವಾಗಿ ಆಗಬೇಕು, ಅದನ್ನು ಉಳಿಸಿಕೊಳ್ಳಬೇಕು ಎಂಬ ಯೋಗ್ಯತೆ ಈ ಸಮಾಜಕ್ಕಿಲ್ಲ ಹಾಗಾಗಿ ಇದನ್ನು ಧಿಕ್ಕರಿಸುತ್ತೇವೆ. ಇದನ್ನು ನಿಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಿ. ಬಹಳ ಜನ ನಾಯಕರು ಕೆಳಗೆ ಹೆದರಿಕೊಂಡು ಕುಳಿತಿದ್ದಾರೆ ನನಗೆ ಗೊತ್ತಿದೆ. ಮೇಲೆ ಬಂದರೆ ನೀವು ಅಲ್ಲಿ ಹೋಗಿದ್ರೆ ಅನ್ನುವ ಭಯ ಅವರಿಗೆ ಕಾಣುತ್ತಿದೆ. ಒಂದೊಂದು ಸಾರಿ ನನ್ನ ಶಬ್ದಗಳು ಬಹಳ ಕಠಿಣ. ನಾನು ದಿಟ್ಟತನದಿಂದ ಇದ್ದೇನೆ ಎಂದು ಹೇಳಿದರು.
ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಬೇಲೂರು ತಹಶೀಲ್ದಾರ್ ಮಮತಾ, ಆಡಳಿತಾಧಿಕಾರಿ ಕಿಟ್ಟಪ್ಪ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ