ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನಲೆಗೆ: ಸರ್ಕಾರಗಳ ಮುಂದೆ ಸ್ವಾಮೀಜಿ ಇಟ್ಟ 2 ಬೇಡಿಕೆಗಳೇನು?
ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನಲೆಗೆ ಬಂದಿದ್ದು, ಇಂದು(ಡಿ.12) ಸಿಎಂ ಸಭೆ ಕರೆದಿದ್ದಾರೆ. ಈ ಕುರಿತು ‘ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತರಿಗೆ ಕೇಂದ್ರ ಒಬಿಸಿ ಸೇರ್ಪಡೆ ಕುರಿತು ಇಂದೇ ತೀರ್ಮಾನ ಪ್ರಕಟಿಸಬೇಕು. ಮಾತುಕತೆ ಸಫಲ ಆಗಲಿ, ವಿಫಲವಾಗಲಿ ನಾಳೆ ನಾವೆಲ್ಲ ಬೆಳಗಾವಿಯಲ್ಲಿ ಸೇರುತ್ತೇವೆ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ, ಡಿ.12: ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತಿಗಳಿಗೆ ಕೇಂದ್ರ ಒಬಿಸಿಗೆ ಸೇರ್ಪಡೆ ವಿಚಾರ ‘ ಕಳೆದ ಸರ್ಕಾರ ನೀಡಿದ್ದ 2ಡಿ ಮೀಸಲಾತಿ ನಮಗೆ ಸಿಗಲಿಲ್ಲ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದರು. ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಗೂ ಮುನ್ನ ಮಾತನಾಡಿದ ಅವರು ‘ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ಬಂದ ಮೇಲೆ 2ಎ ಮೀಸಲಾತಿಗಾಗಿ ಮನವಿ ಮಾಡಿದ್ದೇವು, ಬಜೆಟ್ ಅಧಿವೇಶನ ಮುಗಿದ ಮೇಲೆ ಮಾತುಕತೆ ಮಾಡುತ್ತೇನೆ ಎಂದಿದ್ದರು. ಆದರೆ, ಇದುವರೆಗೂ ಯಾವುದೇ ಮಾತುಕತೆ ನಡೆಸಿಲ್ಲ. ಹೀಗಾಗಿ ನಾಳೆ(ಡಿ.13) ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದರು.
ಶಾಸಕರು ಹಾಗೂ ಮುಖಂಡರ ಜೊತೆ ಇಂದು ಸಿಎಂ ಸಭೆ
ಇನ್ನು ಶಾಸಕರು, ಸಿಎಂ ಜೊತೆ ಸಭೆ ಮಾಡಿ ನಿರ್ಧಾರ ಮಾಡೋಣ ಎಂದಿದ್ದರು. ಅದರಂತೆ ಶಾಸಕರು ಹಾಗೂ ಮುಖಂಡರ ಜೊತೆ ಇಂದು(ಡಿ.12) ಸಿಎಂ ಸಭೆ ಕರೆದಿದ್ದಾರೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತರಿಗೆ ಕೇಂದ್ರ ಒಬಿಸಿ ಸೇರ್ಪಡೆ ಕುರಿತು ಇಂದೇ ತೀರ್ಮಾನ ಪ್ರಕಟಿಸಬೇಕು. ಮಾತುಕತೆ ಸಫಲ ಆಗಲಿ, ವಿಫಲವಾಗಲಿ ನಾಳೆ ನಾವೆಲ್ಲ ಬೆಳಗಾವಿಯಲ್ಲಿ ಸೇರುತ್ತೇವೆ. ವಿಧಾನಸಭೆಗೆ ಬರುವ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈಗ ಮೂಂಚೂಣಿಯಲ್ಲಿರುವ ಶಾಸಕರು ಹಾಗೂ ಸಚಿವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಮೊದಲ ಬಾರಿಗೆ ಶಾಸಕರು ಮನವೊಲಿಸಿದ್ದಾರೆ ಎನ್ನುವ ಮೂಲಕ ಸ್ವಾಮೀಜಿ ಅವರು ಮಾತುಕತೆಯಲ್ಲಿ ಸಫಲವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಮತ್ತೊಂದು ಸುತ್ತಿನ ಹೋರಾಟ ಘೋಷಿಸಿದ ಸ್ವಾಮೀಜಿ
ಯತ್ನಾಳ್ ರವರನ್ನು ಹೋರಾಟಕ್ಕೆ ಕರೆದ ಜಯಮೃತ್ಯುಂಜಯ ಸ್ವಾಮೀಜಿ; ಸರ್ಕಾರದ ಮುಂದೆ 2 ಬೇಡಿಕೆ?
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಸ್ವಲ್ಪ ಹೋರಾಟದಿಂದ ಹಿಂದೆ ಸರಿದಿದ್ದರು. ಈಗ ಕಾಂಗ್ರೆಸ್ ಪಂಚಮಸಾಲಿ ಶಾಸಕರಿಗೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಹೀಗಾಗಿ ಯತ್ನಾಳ್ ಅವರನ್ನು ಕೂಡ ಹೋರಾಟಕ್ಕೆ ಕರೆದಿದ್ದೇವೆ. ಪಂಚಮಶಾಲಿ ಸಮುದಾಯವನ್ನು 2 A ಮೀಸಲಾತಿಗೆ ಸೇರಿಸಬೇಕು. ಎಲ್ಲಾ ಲಿಂಗಾಯತ ಸಮುದಾಯಕ್ಕೆ ಸೆಂಟ್ರಲ್ ಒಬಿಸಿಗೆ ರೆಕಮೆಂಡ್ ಮಾಡಬೇಕು. ಇದೇ ಸರ್ಕಾರದ ಮುಂದೆ ಇರುವ ನಮ್ಮ ಎರಡು ಬೇಡಿಕೆ ಎಂದು ಹೇಳಿದರು.
ಅಧಿವೇಶನಕ್ಕೆ ತಟ್ಟಲಿದೆಯಾ ನಾಳಿನ ಪಂಚಮಸಾಲಿ ಮೀಸಲಾತಿ ಹೋರಾಟದ ಬಿಸಿ?
ಇನ್ನು ನಾಳೆ ಬೆಳಗಾವಿಯ ಹೋರಾಟವನ್ನು ಹಮ್ಮಿಕೊಂಡಿದ್ದು, ಇದರಿಂದ ಎಚ್ಚೆತ್ತ ಮುಖ್ಯಮಂತ್ರಿಗಳು ಇವತ್ತು ಮೊದಲನೇ ಸುತ್ತಿನ ಮಾತುಕತೆ ಕರೆದಿದ್ದಾರೆ. ಇವತ್ತಿನ ಮುಖ್ಯಮಂತ್ರಿಗಳ ಮಾತುಕತೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆಯಿದೆ. ನಾನು ನಮ್ಮ ಎಲ್ಲಾ ಶಾಸಕರಿಗೆ ಹೇಳಿದ್ದೇನೆ, ನೀವು ಇವತ್ತು ಗೆದ್ದಿರುವುದು ಈ ಮೀಸಲಾತಿ ಹೋರಾಟದಿಂದ, ಹಾಗಾಗಿ ನಿಮಗೆ ಜವಾಬ್ದಾರಿ ಇದೆ. ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದೇನೆ ಎಂದಿದ್ದು, ಈ ಹಿನ್ನಲೆ ಅಧಿವೇಶಕ್ಕೆ ನಾಳಿನ ಪಂಚಮಸಾಲಿ ಮೀಸಲಾತಿ ಹೋರಾಟದ ಬಿಸಿ ತಟ್ಟಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ