AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಮತ್ತೊಂದು ಸುತ್ತಿನ ಹೋರಾಟ ಘೋಷಿಸಿದ ಸ್ವಾಮೀಜಿ

ಧಾರವಾಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗೆ 2ಎ ಮೀಸಲಾತಿ, ಲಿಂಗಾಯತರಿಗೆ ಒಬಿಸಿ ಮೀಸಲಾತಿಗಾಗಿ ಹೋರಾಟ ನಡೆದಿದೆ. ಈ ಸಂಬಂಧ ಬೆಳಗಾವಿದಲ್ಲಿಯೇ ಸಭೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ಕೇಳಿಕೊಳ್ಳಲಾಗಿದೆ. ಆದರೆ ಅವರು ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಡಿ. 13ರಂದು ಬೆಳಗಾವಿದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಮತ್ತೊಂದು ಸುತ್ತಿನ ಹೋರಾಟ ಘೋಷಿಸಿದ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Dec 11, 2023 | 4:12 PM

Share

ಧಾರವಾಡ, ಡಿಸೆಂಬರ್​​​ 11: ಪಂಚಮಸಾಲಿಗೆ 2ಎ ಮೀಸಲಾತಿ (2A Reservation), ಲಿಂಗಾಯತರಿಗೆ ಒಬಿಸಿ ಮೀಸಲಾತಿಗಾಗಿ ಹೋರಾಟ ನಡೆದಿದೆ. ಈ ಸಂಬಂಧ ಬೆಳಗಾವಿದಲ್ಲಿಯೇ ಸಭೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ಕೇಳಿಕೊಳ್ಳಲಾಗಿದೆ. ಆದರೆ ಅವರು ನಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ಹೀಗಾಗಿ ಡಿ. 13ರಂದು ಬೆಳಗಾವಿದಲ್ಲಿ ಹೋರಾಟ ಮಾಡುತ್ತೇವೆ ಎಂದು ಕೂಡಲ ಸಂಗಮ್ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ಎ ಮೀಸಲಾತಿ ರಾಜ್ಯ ಸರ್ಕಾರದ ಕೈಯಲ್ಲಿದೆ ಎಂದಿದ್ದಾರೆ.

ಒಬಿಸಿಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ಮೀಸಲಾತಿ ಘೋಷಿಸಬೇಕು. ಆದರೆ ಎರಡೂ ಕಡೆ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿವೆ. ಈಗ ಲೋಕಸಭೆ ಚುನಾವಣೆ ಬಂದಿದೆ. ಈ ಸಮಯದಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದೇ ಹೋದಲ್ಲಿ ಎರಡೂ ಪಕ್ಷಗಳಿಗೆ ಸಮಾಜದ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ

ಲೋಕಸಭೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಎರಡೂ ರಾಜಕೀಯ ಪಕ್ಷಗಳು ಕನಸು ಕಾಣುತ್ತಿವೆ. ಹೀಗಾಗಿ ಬೇಡಿಕೆ ಈಡೇರಿಸಲಿದ್ದಲ್ಲಿ ಎರಡೂ ಪಕ್ಷಗಳ ಮೇಲೆ‌ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ತಮ್ಮದೇ ಸಮಾಜದ ಮುಖಂಡರ ವಿರುದ್ಧ ಪಂಚಮಸಾಲಿ ಜಗದ್ಗುರು ಅಸಮಾಧಾನ

ಆರಂಭದಲ್ಲಿ ನಮ್ಮ ಸಮಾಜದ ಮುಖಂಡರು ಹುರುಪಿನಿಂದ ಮಾತನಾಡಿದ್ದರು. ಆದರೆ ಈಗ ಅವರು ಮೌನವಾಗಿದ್ದಾರೆ. ಜನರೇ ಈಗ ಅವರನ್ನು ಕೇಳುತ್ತಿದ್ದಾರೆ. ಮೊದಲಿನಂತೆ ಹುರುಪಿನಿಂದ ಮಾತಾನಾಡಿ ಎಂದು ಕೇಳುತ್ತಿದ್ದಾರೆ. ಈ ಸಂಬಂಧ ಶಾಸಕರುಗಳ ಸಭೆಯನ್ನೂ ಕರೆದು ಹೇಳಿದ್ದೇವೆ. ಹಿಂದೆ ಮಾಜಿ ಇದ್ದಾಗ ಹುರುಪು, ಆವೇಶದಿಂದ ಮಾತನಾಡಿದ್ದೀರಿ. 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದಿದ್ದೀರಿ. ಈಗ ಅಧಿಕಾರಕ್ಕೆ ಬಂದಿದ್ದೀರಿ ಈಗ ಮೌನ ಯಾಕೆ ಅಂತಾ ಜನ ಕೇಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: 2ಎ ಮೀಸಲಾತಿಗೆ ಆಗ್ರಹ: ಇಷ್ಟಲಿಂಗ ಪೂಜೆ ಮೂಲಕ ಇಂದಿನಿಂದ ಮತ್ತೆ ಪಂಚಮಸಾಲಿ ಸಮುದಾಯ ಹೋರಾಟ

ಆಗ ಭಾವನಾತ್ಮಕವಾಗಿ ಮಾತನಾಡಿದ್ದರು. ಈಗ ಜನರೇ ಪ್ರಶ್ನೆ ಮಾಡುತ್ತಿದ್ದಾರೆ. ಅವರೂ ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಸನಗೌಡ ಪಾಟೀಲ ಮಾತ್ರ ಒಂಟಿ ಸಲಗ ಹೋರಾಟ ಮಾಡಿದ್ದಾರೆ. ಈಗಿನ ಶಾಸಕರು ಅವರಂತೆ ಮಾಡಬೇಕಿದೆ. ಈಗ ವಿನಯ ಕುಲಕರ್ಣಿಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಹೇಳಲಾಗಿದೆ. ಮಂತ್ರಿಯಾಗುವ ಕಸನು ಕಾಣಬೇಡ. ಸಮಾಜದ ಜೊತೆ ನೀ ಇರು ಅಂತಾ ಬಹಿರಂಗವಾಗಿ ಹೇಳಿದ್ದಾರೆ.

ಯತ್ನಾಳ ಅವರೇ ಕುಲಕರ್ಣಿಗೆ ಹೇಳಿದ್ದಾರೆ. ಅಧಿಕಾರ ಇವತ್ತು ಬರುತ್ತೇ ಹೋಗುತ್ತದೆ. ಆದರೆ ಸಮಾಜ ಶಾಶ್ವತ. ವಿನಯ ಕುಲಕರ್ಣಿ ಅಧಿವೇಶನದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಕುಲಕರ್ಣಿ ಧ್ವನಿ ಎತ್ತಿದಾಗ ಉಳಿದವರು ಧ್ವನಿಗೂಡಿಸಬೇಕಿದೆ. ಧ್ವನಿಗೂಡಿಸಿ ಅಂತಾ ಹೇಳಿದ್ದೇನೆ. ಉಳಿದ ಶಾಸಕರಿಗೂ ಮಾತನಾಡಲು ಹೇಳಿದ್ದೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.