ಹಾಸನ: ಐತಿಹಾಸಿಕ ಜೈನ ಮಠದ ಪೀಠಾದ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ
ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು(ಮಾ.23) ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್ನ ಆದಿಚುಂಚನಗಿರಿ ಆಸ್ಪತ್ರೆಯಲ್ಕಿ ಕೊನೆಯುಸಿರೆಳೆದಿದ್ದಾರೆ.
ಹಾಸನ : ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ(Charukirthi Bhattarak Swamiji)ಇಂದು(ಮಾ.23) ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್ನ ಆದಿಚುಂಚನಗಿರಿ ಆಸ್ಪತ್ರೆಯಲ್ಕಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ ದಿಡೀರ್ ಅರೋಗ್ಯ ಸ್ಥಿತಿಯಲ್ಲಿ ಏರು ಪೇರು ಆಗಿದ್ದು, ಕೂಡಲೆ ಶ್ರವಣಬೆಳಗೊಳದ ಜೈನ ಮಠಕ್ಕೆ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನ ಸ್ಥಳಾಂತರ ಮಾಡಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಜನಿಸಿದ್ದರು. ಮೂಲತಃ ಕಾರ್ಕಳದ ವರಂಗ ಗ್ರಾಮದವರು. 1970 ರಲ್ಲಿ ಜೈನ ಮಠದ ಪೀಠವೇರಿದ್ದ ಶ್ರೀಗಳು, ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪ್ರಾಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಇವರಿಗೆ ಕರ್ಮಯೋಗಿ ಎಂದು ಬಿರುದು ನೀಡಿದ್ದರು.
ಇದನ್ನೂ ಓದಿ:ಎದುರಾಳಿಗೆ ಹೃದಯಾಘಾತ ಆಗಲಿ: ಮಾಜಿ ಶಾಸಕರ ಸಾವು ಬಯಸಿದರಾ ಜೆಡಿಎಸ್ ಮುಖಂಡ?
ಚಾರುಕೀರ್ತಿ ಬಿರುದು ನೀಡಿದ ಹೊಯ್ಸಳ ದೊರೆ
ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ. ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ 13ನೆ ಶತಮಾನದಲ್ಲಿ (1118-19)ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು” ಚಾರುಕೀರ್ತಿ” ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ”ಎಂದೆ ಕರೆಯಲಾಗುತ್ತಿದೆ. ಅದೇ ಸ್ವಾಮೀಜಿಗಳು ದಕ್ಷಿಣ ಕನ್ನಡದ (ಕಾರ್ಕಳ ಸಮೀಪ) ನಲ್ಲೂರು ಗ್ರಾಮದಲ್ಲಿ ಜೈನಮಠ ವನ್ನು ಸ್ಥಾಪನೆ ಮಾಡುತ್ತಾರೆ. ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ. ಅವರೆ ಆಧ್ಯಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳು. ಬಳಿಕ ಕೆಲ ಕಾಲದ ನ೦ತರ ಅವರ ನಲ್ಲೂರಿನಲ್ಲಿ ಸಮಾಧಿ ಸಲ್ಲೇಖನವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ.
ಇದು ಶಾ೦ತಿ ಪೂರ್ವಕ ಮರಣವನ್ನು ಗೆಲ್ಲುವ ಅಗಮದ ನಿಯಮ ಪ್ರಕಾರ ಕೈಗೊಳ್ಳುವ ಜೈನ ಮರಣ ಕಲೆ ಯಾಗಿದೆ. ಈಗಲು ಅಲ್ಲಿ ಸಮಾದಿ ಸ್ಥಾನವನ್ನು ಕಾಣಬಹುದು ಅಲ್ಲಿರುವ ಆನೆಯ ಕಲ್ಲಿನ ಶಿಲ್ಪ 1999ರ ಮೂಡಬಿದರೆ ಜೈನ ಕಾಶಿಯ ಮಧಬಿನವ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರ ನೇತ್ರತ್ವದಲ್ಲಿ ತಮ್ಮ ದೀಕ್ಷಾಗುರು ಶ್ರವಣ ಬೆಳಗೊಳದ ಸ್ವಸ್ಥಿ ಶ್ರಿ ಚಾರುಕೀರ್ತಿ ಭಟ್ಟಾರಕಪಟ್ಟಚಾಯ೯ವರ್ಯ ಸ್ವಾಮೀಜಿಗಳವರ ಚಾತುಮಾ೯ಸದಲ್ಲಿ ಸ್ಥಾಪಿಸಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 am, Thu, 23 March 23