ಹಾಸನ: ಇತ್ತೀಚೆಗೆ ಅಂಗಾಗ ದಾನ (Organ Donation) ಹೆಚ್ಚಾಗುತ್ತಿದ್ದು, ಇದರಿಂದ ಹಲವು ಕುಟುಂಬಗಳು ಪ್ರೇರಣೆಗೊಂಡು ಅಂಗಾಗ ದಾನ ಮಾಡುತ್ತಿವೆ. ಹೀಗೆ ಜಿಲ್ಲೆಯ ಚನ್ನರಾಯಪಟ್ಟಣ (Channaraypattana) ತಾಲ್ಲೂಕಿನ ನುಗ್ಹೆಹಳ್ಳಿಯ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಗ್ರಾಮದ ನಾರಾಯಣ ಗೌಡ (17) ಡಿಸೆಂಬರ್ 6ರಂದು ಕಾಲೇಜಿಗೆ ತೆರಳೊ ವೇಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು.
ನಾರಾಯಣ ಗೌಡನ ತೆಲೆಗೆ ಗಂಭೀರ ಗಾಯವಾದ ಹಿನ್ನೆಲೆ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ವೈದ್ಯರು ಅಂಗಾಂಗ ದಾನದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದ್ದರು. ಹೀಗಾಗಿ ನಾರಾಯಣ ಗೌಡನ ಪೋಷಕರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದಾರೆ.
ರಮೇಶ್ ಮತ್ತು ರಾದಾ ದಂಪತಿ ಮಗನ ಅಂಗಾಂಗ ದಾನಮಾಡಿ ಸಾರ್ಥಕತೆ ಮೆರೆದಿದ್ದಾರೆ. ವೈದ್ಯರು ನಾಳೆ (ಡಿ.10) ಮದ್ಯಾಹ್ನದ ವೇಳೆಗೆ ಅಂಗಂಗ ದಾನ ಪ್ರಕ್ರಿಯೆ ಪೂರೈಸಿ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Fri, 9 December 22